IPL ಫೇಮಸ್ ಕ್ರಿಕೆಟರ್ ಜೊತೆ ಸ್ಯಾಂಡಲ್‌ವುಡ್ ಖ್ಯಾತ ನಟಿಯ ಮದುವೆ ಫಿಕ್ಸ್‌..! ಶೀಘ್ರದಲ್ಲೇ ಹಸೆಮಣೆ ಏರಲಿರುವ ಜೋಡಿ

ಸಿನಿಮಾ ಮತ್ತು ಕ್ರಿಕೆಟ್‌ ನಡುವಿನ ಸಂಬಂಧ ತುಂಬಾ ಅವಿನಾಭಾವವಾಗಿದೆ. ಅನೇಕ ನಟಿಯರು ಸ್ಟಾರ್‌ ಕ್ರಿಕೆಟರ್‌ಗಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಸ್ಯಾಂಡಲ್‌ವುಡ್‌ ನಟಿಯೊಬ್ಬರು ಕೂಡ ಅದೇ ಸಾಲಿಗೆ ಸೇರಲಿದ್ದಾರೆ. 

Written by - Chetana Devarmani | Last Updated : Apr 20, 2025, 07:44 AM IST
  • ಕ್ರಿಕೆಟರ್‌ಜೊತೆ ಸ್ಯಾಂಡಲ್‌ವುರ್‌ ನಟಿಯ ಮದುವೆ
  • ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ʻಹಾಸ್ಟೆಲ್‌ಹುಡುಗರುʼ ಚೆಲುವೆ
  • ಐಪಿಎಲ್ ಫೇಮಸ್‌ ಆಟಗಾರನ ಕೈ ಹಿಡಿಯಲಿರುವ ಕನ್ನಡ ನಟಿ
IPL ಫೇಮಸ್ ಕ್ರಿಕೆಟರ್ ಜೊತೆ ಸ್ಯಾಂಡಲ್‌ವುಡ್ ಖ್ಯಾತ ನಟಿಯ ಮದುವೆ ಫಿಕ್ಸ್‌..! ಶೀಘ್ರದಲ್ಲೇ ಹಸೆಮಣೆ ಏರಲಿರುವ ಜೋಡಿ

ಸ್ಯಾಂಡಲ್‌ವುಡ್‌ ನಟಿ ಅರ್ಚನಾ ಕೊಟ್ಟಿಗೆ ಈಗಾಗಲೇ 10 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನಗೆದ್ದಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಚಿಕ್ಕ ಪಾತ್ರದ ಮೂಲಕ ನಟಿ ಅರ್ಚನಾ ಕೊಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ನಟಿ ಅರ್ಚನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ಟಾರ್‌ ಕ್ರಿಕೆಟರ್ ಜೊತೆಗೆ ನಟಿ ಅರ್ಚನಾ ಕೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ರಿಕೆಟರ್ ಶರತ್ ಬಿ.ಆರ್ ಅವರ ಜೊತೆಗೆ ನಟಿ ಅರ್ಚನಾ ಕೊಟ್ಟಿಗೆ ಮದುವೆ ಫಿಕ್ಸ್‌ ಆಗಿದೆ. 

ಶರತ್ ಬಿ.ಆರ್ ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಆಗಿ ಶರತ್ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಗುಜರಾತ್ ಟೈಟನ್ಸ್ ತಂಡದಲ್ಲಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಶರತ್ ಬಿ.ಆರ್ ಅವರ ಪ್ರತಿಭೆಯನ್ನು ಗಮನಿಸಿ 2015 ರಲ್ಲಿ ಆರು ವಾರಗಳ ಕಾರ್ಯಕ್ರಮಕ್ಕಾಗಿ ಡರ್ಹ್ಯಾಮ್ ಕೌಂಟಿ ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿಗೆ ಕಳುಹಿಸಲು ನಿರ್ಧರಿಸಿತು. 2018 ರಲ್ಲಿ ಪದಾರ್ಪಣೆ ಮಾಡಿದ ನಂತರ ಶರತ್ ಬಿ.ಆರ್ ಕರ್ನಾಟಕದ ತಂಡದಲ್ಲಿ ಆಡುತ್ತಿದ್ದಾರೆ. ಶರತ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.

ಇದನ್ನೂ ಓದಿ : ಬೇಲ್‌ಗಾಗಿ ಕಾದು ಕುಳಿತಿರೋ ರನ್ಯಾ ರಾವ್ : ಹೊರ ಬರೋ ಕನಸು ಕಂಡಿರುವ ನಟಿಗೆ DRI ಕಂಟಕ

ಕೆಲವು ವರದಿಗಳ ಪ್ರಕಾರ, ಶರತ್ ಹಾಗೂ ಅರ್ಚನಾ ಕೊಟ್ಟಿಗೆ ಇಬ್ಬರು ಓದಿದ್ದು ಒಂದೇ ಕಾಲೇಜಿನಲ್ಲಿ. ಅರ್ಚನಾ ಅವರ ಸೀನಿಯರ್ ಶರತ್ ಆಗಿದ್ದರು. 2018 ರಲ್ಲಿ ಸ್ನೇಹಿತನ ಮೂಲಕ ಭೇಟಿಯಾದ ಶರತ್ ಮತ್ತು ಅರಚನಾ ಭೇಟಿ ಆದರು. ಅಲ್ಲಿಂದ ಶುರುವಾದ ಸ್ನೇಹ ಬಳಿಕ ಪ್ರೀತಿ ಆಯಿತು. ಎಂಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 

Archana Kottige Sharath BR

ನಟಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟಿಗ ಶರತ್ ಬಿ.ಆರ್ ಏಪ್ರಿಲ್ 23 ರಂದು ವಿವಾಹವಾಗಲಿದ್ದಾರೆ. ಹೊಂದಿಸಿ ಬರೆಯಿರಿ, ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ, ಶಬರಿ ಸರ್ಚಿಂಗ್ ರಾವಣ, ರಾಕ್ಷಸ ಹಾಗೂ ಅಲಂಕಾರ್ ವಿದ್ಯಾರ್ಥಿ ಸಿನಿಮಾಗಳಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಚಂದ್ರಮೋಹನ್‌ ನಿರ್ದೇಶನದ ‘ಫಾರೆಸ್ಟ್‌’ ಚಿತ್ರದಲ್ಲಿ ನಟಿ ಅರ್ಚನಾ ಇತ್ತೀಚೆಗೆ ನಟಿಸಿದ್ದರು. 

ಇದನ್ನೂ ಓದಿ : ಒಂದೇ ಒಂದು ಸಾಂಗ್‌ನಿಂದ ಬಾಲಿವುಡ್‌ ಬೆಚ್ಚಿಬೀಳುವಂತೆ ಮಾಡಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸಹೋದರಿ..! ವಿಡಿಯೋ ವೈರಲ್‌

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News