Dance Deewane ನಿರೂಪಕ ರಾಘವ್ ಜುಯಲ್ ಗೆ ಕರೋನಾ ದೃಢ

TV Celebs Covid Positive: ಡ್ಯಾನ್ಸ್ ದಿವಾನೆ ನಿರೂಪಕ ರಾಘವ್ ಜುಯಲ್ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ ಅರ್ಷಿ ಖಾನ್ ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

Written by - Yashaswini V | Last Updated : Apr 22, 2021, 09:20 AM IST
  • ಡ್ಯಾನ್ಸ್ ದಿವಾನೆ ನಿರೂಪಕ ರಾಘವ್ ಜುಯಲ್ ಕರೋನಾ ಸೋಂಕಿಗೆ ಒಳಗಾಗಿದ್ದಾರೆ
  • ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಘವ್ ಜುಯೆಲ್
  • ಏಪ್ರಿಲ್ ಆರಂಭದವರೆಗೂ ಡ್ಯಾನ್ಸ್ ದಿವಾನೆ 3 ಕಾರ್ಯಕ್ರಮದ ಚಿತ್ರೀಕರಣದಲ್ಲಿದ್ದ ರಾಘವ್ ಜುಯೆಲ್
Dance Deewane ನಿರೂಪಕ ರಾಘವ್ ಜುಯಲ್ ಗೆ ಕರೋನಾ ದೃಢ

ನವದೆಹಲಿ:  ಕೆಲದಿನಗಳ ಹಿಂದಷ್ಟೇ ಡ್ಯಾನ್ಸ್ ದಿವಾನೆ-3 ಜಡ್ಜ್ ಧರ್ಮೇಶ್ ಯೆಲಾಂಡೆ ಕರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಇದೇ ಕಾರ್ಯಕ್ರಮದ ನಿರೂಪಕ ರಾಘವ್ ಜುಯಲ್ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಘವ ಜುಯೆಲ್ (Raghav Juyal) , ಜ್ವರ-ಕೆಮ್ಮು ಕಂಡು ಬಂದ ನಂತರ ನಾನು ಕೋವಿಡ್ -19 (Covid 19) ಪರೀಕ್ಷೆಗೆ ಒಳಪಟ್ಟಿದ್ದು ನನಗೆ ಸೋಂಕು ದೃಢಪಟ್ಟಿದೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಸುರಕ್ಷಿತವಾಗಿರಿ ಎಂದು ಬರೆದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Raghav Juyal (@raghavjuyal)

ಇದನ್ನೂ ಓದಿ - ರಂಜಾನ್ ಸಭೆಗೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಡಿಲಿಟ್ ಮಾಡಿದ ಕಂಗನಾ..!

ಏಪ್ರಿಲ್ ಆರಂಭದವರೆಗೂ, ರಾಘವ್ ಜುಯೆಲ್ ಅವರು ಮಾಧುರಿ ದೀಕ್ಷಿತ್(Madhuri Dixit) , ಧರ್ಮೇಶ್ ಯೆಲಾಂಡೆ ಮತ್ತು ತುಷಾರ್ ಕಾಲಿಯಾ ಅವರೊಂದಿಗೆ ಡ್ಯಾನ್ಸ್ ದಿವಾನೆ 3 ಕಾರ್ಯಕ್ರಮದ ಚಿತ್ರೀಕರಣದಲ್ಲಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳಲು ಪ್ರಾರಂಭಿಸುತ್ತಿದ್ದಂತೆ, ಸರ್ಕಾರವು ಮೇ 1 ರವರೆಗೆ 15 ದಿನಗಳ ಕಾಲ ರಾಜ್ಯದಲ್ಲಿ ಚಲನಚಿತ್ರ ಮತ್ತು ಟಿವಿ ಚಿತ್ರೀಕರಣಗಳನ್ನು ನಿಷೇಧಿಸಿತು. ಆದಾಗ್ಯೂ, ಕರ್ಫ್ಯೂ ಡ್ಯಾನ್ಸ್ ದಿವಾನೆ 3 ರ ಮೇಲೆ ಪರಿಣಾಮ ಬೀರಲಿಲ್ಲ, ಏಕೆಂದರೆ ತಯಾರಕರು ಈ ಮೊದಲೇ ಹಲವು ಎಪಿಸೋಡ್‌ಗಳ ಚಿತ್ರೀಕರಣ ಮುಗಿಸಿದ್ದರು.

ಇದನ್ನೂ ಓದಿ - Covid-19 Cases in India: ಕರೋನಾವೈರಸ್ ಹರಡುವಿಕೆಯಲ್ಲಿ ಅಮೇರಿಕಾ ವಿರುದ್ಧ ಭಾರತ ಹೊಸ ದಾಖಲೆ

ಅದೇ ಸಮಯದಲ್ಲಿ, 'ಬಿಗ್ ಬಾಸ್' ಖ್ಯಾತಿಯ ಅರ್ಷಿ ಖಾನ್ ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ  'ಖತ್ರೋನ್ ಕೆ ಖಿಲಾಡಿ' ವಿಜೇತರಾಗಿದ್ದ ಶಾಂತನು ಮಹೇಶ್ವರಿಯವರಿಗೂ ಕರೋನಾ ಸೋಂಕು ದೃಢಪಟ್ಟಿರುವುದಾಗಿ ಈ ಹಿಂದೆ ವರದಿಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News