ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ದೀಪಿಕಾ ಪಡುಕೋಣೆ!

2018ರಲ್ಲಿ ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ  ಈ ವರ್ಷ 'ದಶಕದ ಸೆಕ್ಸಿಯೆಸ್ಟ್ ಮಹಿಳೆ' ಎಂಬ ಬಿರುದನ್ನು ಪಡೆದಿದ್ದಾರೆ.

Updated: Dec 14, 2019 , 03:30 PM IST
ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ದೀಪಿಕಾ ಪಡುಕೋಣೆ!

ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  (Deepika Padukone) ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಈ ಬಾರಿಯೂ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ  ಈ ವರ್ಷ 'ದಶಕದ ಸೆಕ್ಸಿಯೆಸ್ಟ್ ಮಹಿಳೆ' ಎಂಬ ಬಿರುದನ್ನು ಪಡೆದಿದ್ದಾರೆ.

ನಮ್ಮ ಪಾಲುದಾರ ವೆಬ್‌ಸೈಟ್ ಡಿಎನ್‌ಎಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ದೀಪಿಕಾ ಪಡುಕೋಣೆ ಅವರನ್ನು ಆನ್‌ಲೈನ್ ಸಮೀಕ್ಷೆಯ ಮೂಲಕ ಇತ್ತೀಚೆಗೆ ದಶಕದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆ ಎಂದು ಘೋಷಿಸಲಾಗಿದೆ ಎಂದು ವರದಿ ಮಾಡಿದೆ. ದೀಪಿಕಾ ಈ ದಶಕದಲ್ಲಿ ತಮ್ಮ ನಟನೆ, ಶೈಲಿ, ಆಕರ್ಷಕ ಮೈಕಟ್ಟು, ನೃತ್ಯ ಎಲ್ಲದರಿಂದಾಗಿ ಜನರ ಮನ ಗೆದ್ದಿದ್ದಾರೆ.

ಲಂಡನ್‌ನಲ್ಲಿ ಬುಧವಾರ ಬಿಡುಗಡೆಯಾದ ಆನ್‌ಲೈನ್ ಸಮೀಕ್ಷೆಯಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ 'ದಶಕದ ಸೆಕ್ಸಿಯೆಸ್ಟ್ ವುಮನ್' ಆಗಿ ಆಯ್ಕೆ ಆಗಿರುವ ಬಗ್ಗೆ ತಿಳಿಸಲಾಗಿದೆ. ಯುಕೆ ಮೂಲದ ವಾರಪತ್ರಿಕೆ 'ಈಸ್ಟರ್ನ್ ಐ' ಬಿಡುಗಡೆ ಮಾಡಿದ ವಾರ್ಷಿಕ ಪಟ್ಟಿಯಲ್ಲಿ ಈ ವಿಷಯ ತಿಳಿಸಲಾಗಿದೆ. 

ಈ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ, "ಪ್ರತಿವರ್ಷ ನನಗೆ ಮತ ಚಲಾಯಿಸುತ್ತಿರುವ ನನ್ನ ಎಲ್ಲ ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಇದು ಒಂದು ದಶಕದ ಪ್ರೀತಿ, ಏರಿಳಿತ, ಬೆಂಬಲ ಮತ್ತು ಮ್ಯಾಜಿಕ್. ನಾನು ಎಂದಿಗೂ ನನ್ನನ್ನು ಸೆಕ್ಸಿಯಾಗಿ ಪರಿಗಣಿಸಿಲ್ಲ, ಆದರೆ ನೀವು ನನ್ನನ್ನು ಹಾಗೆ ಆಯ್ಕೆ ಮಾಡುವಾಗ ನಾನು ನಂಬುತ್ತೇನೆ. ನಾನು ಅದನ್ನು ಮುಂದುವರಿಸಬಹುದೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಆಲಿಯಾ ಭಟ್ ಅವರು 2019 ರ ಸೆಕ್ಸಿಯೆಸ್ಟ್ ಏಷ್ಯನ್ ಸ್ತ್ರೀ ಎಂದು ಆಯ್ಕೆಯಾಗಿದ್ದಾರೆ. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದಾರೆ.  ಆಲಿಯಾ ಭಟ್‌ಗೆ ಈ ವರ್ಷ ಒಂದು ಕನಸಿನ ವರ್ಷವಾಗಿದೆ. ಆಲಿಯಾ ಈ ವರ್ಷ ತಮ್ಮ ನಟನೆಗಾಗಿ ಹಲವಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಇವರ ನಟನೆಯ 'ಗಲ್ಲಿ ಬಾಯ್' ಚಿತ್ರ 2020 ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೆಶನಗೊಂಡಿದೆ.