ನವಂಬರ್ 19 ಕ್ಕೆ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮದುವೆ?

     

Last Updated : May 24, 2018, 08:26 PM IST
ನವಂಬರ್ 19 ಕ್ಕೆ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮದುವೆ? title=

ನವದೆಹಲಿ: ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈ ಬಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಫಿಲಂ ವಿಚಾರವಾಗಿ ಅಲ್ಲ ಬದಲಾಗಿ ಮದುವೆಯ ವಿಚಾರವಾಗಿ ಎನ್ನುವುದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹೊಸ ಸಮಾಚಾರ.

ಹೌದು, ಹಲವಾರು ಬಾರಿ ಈ ಜೋಡಿ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್ ಗಳು ಬರುತ್ತಲೇ ಇದ್ದವು. ಈಗ ಇದಕ್ಕೆ  ಮತ್ತೊಂದು ಎನ್ನುವಂತೆ  ಫಿಲಂ ಫೇರ್  ವರದಿಯು ನವಂಬರ್ 19ಕ್ಕೆ ಈ ಜೋಡಿಗಳು ಮದುವೆಯಾಗುತ್ತಾರೆ ಎಂದು ಅದು ಆಗಲೇ ದಿನಾಂಕವನ್ನು ಕೂಡ ಅಂತಿಮಗೊಳಿಸಿಬಿಟ್ಟಿದೆ.

ಆದರೆ ಈ ವಿಷಯದ ಕುರಿತಾಗಿ ಸ್ವತಃ ಈ ಜೋಡಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವಿಷಯವಂತೂ ಸತ್ಯ ಈ ಬಾಲಿವುಡ್ ನವರ ಮದುವೆ ವಿಚಾರಗಳಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದೇ ಗೊಂದಲ ಅಂತಾರೆ ಅಭಿಮಾನಿಗಳು.

Trending News