Deepika Padukone: ಮೊದಲನೇ ಮಗುವಿಗೆ ಒಂದು ವರ್ಷ ತುಂಬುವ ಮೊದಲೇ ಮತ್ತೊಮ್ಮೆ ತಾಯಿಯಾಗಲಿದ್ದಾರೆ ದೀಪಿಕಾ ಪಡುಕೋಣೆ?! ಗುಡ್‌ ನ್ಯೂಸ್‌ ಕೇಳಿ ಅಭಿಮಾನಿಗಳು ಫುಲ್‌ ಖುಷ್‌

Deepika Padukone: ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ 08,2024ರಲ್ಲಿ ತಮ್ಮ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದರು, ಇದೀಗ ಮಗುವಿಗೆ ಒಂದು ವರ್ಷ ತುಂಬುವ ಮುನ್ನವೇ ದೀಪಿಕಾ ಪಡುಕೋಣೆ ಮತ್ತೆ ತಾಯಿಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅರ್ರೇ ಇದೇನಪ್ಪಾ ಅಂತೀರಾ? ಕಂಪ್ಲೀಟ್‌ ಸ್ಟೋರಿ ತಿಳಿಯಲು ಮುಂದೆ ಓದಿ...  

Written by - Zee Kannada News Desk | Last Updated : Apr 10, 2025, 07:16 AM IST
  • ಹಲವು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಕಳೆದ ವರ್ಷ ಸೆಪ್ಟೆಂಬರ್‌ 08, 2024ರಲ್ಲಿ ಬರಮಾಡಿಕೊಂಡಿದ್ದಾರೆ.
  • ದೀಪಿಕಾ ಪಡುಕೋಣೆ ತಾಯಿಯಾಗುತ್ತಿರುವ ವಿಚಾರವಂತೂ ಸತ್ಯ.
  • ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆಯವರ ಪಾತ್ರ ಕಥೆಯ ಪ್ರಮುಖ ಭಾಗವಾಗಿದೆ ಎಂದು ಹೇಳಲಾಗುತ್ತದೆ.
Deepika Padukone: ಮೊದಲನೇ ಮಗುವಿಗೆ ಒಂದು ವರ್ಷ ತುಂಬುವ ಮೊದಲೇ ಮತ್ತೊಮ್ಮೆ ತಾಯಿಯಾಗಲಿದ್ದಾರೆ ದೀಪಿಕಾ ಪಡುಕೋಣೆ?! ಗುಡ್‌ ನ್ಯೂಸ್‌ ಕೇಳಿ ಅಭಿಮಾನಿಗಳು ಫುಲ್‌ ಖುಷ್‌

Deepika Padukone: ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆಯಾಗಿ ಹಲವು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಕಳೆದ ವರ್ಷ ಸೆಪ್ಟೆಂಬರ್‌ 08, 2024ರಲ್ಲಿ ಬರಮಾಡಿಕೊಂಡಿದ್ದಾರೆ. ತಮ್ಮ ಮುದ್ದಾದ ಮಗಳಿಗೆ ʻದುವಾʼ ಎಂಬ ಹೆಸರನ್ನಿಟ್ಟು ನಾಮಕಾರಣ ಕೂಡ ಮಾಡಿದ್ದಾರೆ. ಇದೀಗ ಸದ್ಯ ದೀಪಿಕಾ ಪಡುಕೋಣೆ ಮತ್ತೆ ತಾಯಿಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. 

Add Zee News as a Preferred Source

ಹೌದು, ಅಷ್ಟಕ್ಕೂ ದೀಪಿಕಾ ಪಡುಕೋಣೆ ತಾಯಿಯಾಗುತ್ತಿರುವ ವಿಚಾರವಂತೂ ಸತ್ಯ, ಆದರೆ ರಿಯಲ್‌ ಲೈಫ್‌ನಲ್ಲಿ ಅಲ್ಲ ರೀಲ್‌ ಲೈಫ್‌ನಲ್ಲಿ. ನಿಮಗೆಲ್ಲಾ ಗೊತ್ತಿರುವ ಹಾಗೆ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಅದ್ಭುತ ಕೆಮಿಸ್ಟ್ರಿ ದೊಡ್ಡ ಪರದೆಯ ಮೇಲೆ ಆಗಾಗ್ಗೆ ಸಂಚಲನ ಸೃಷ್ಟಿಸುತ್ತಾ ಇರುತ್ತದೆ. 2007 ರಲ್ಲಿ ತಮ್ಮ ಮೊದಲ ಚಿತ್ರ 'ಓಂ ಶಾಂತಿ ಓಂ' ಮೂಲಕ ಆರಂಭವಾದ ದೀಪಿಕಾ ಅವರ ಪ್ರಯಾಣವು 'ಚೆನ್ನೈ ಎಕ್ಸ್‌ಪ್ರೆಸ್', 'ಪಠಾಣ್' ಮತ್ತು 'ಜವಾನ್' ನಂತಹ ಹಿಟ್‌ಗಳಿಗೆ ಕಾರಣವಾಯಿತು. ಈಗ, ಈ ಶಕ್ತಿಶಾಲಿ ಜೋಡಿ ಸಿದ್ಧಾರ್ಥ್ ಆನಂದ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಆಗಿರುವ 'ಕಿಂಗ್' ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. 

ಇದನ್ನೂ ಓದಿ: ನಮ್ಮ ನಡುವೆ 15 ವರ್ಷ ವಯಸ್ಸಿನ ಅಂತರವಿದೆ.. ಆದರೂ ನಾವಿಬ್ಬರೂ ಅದನ್ನು ಪೂರ್ಣವಾಗಿ ಆನಂದಿಸುತ್ತೇವೆ : ಖ್ಯಾತ ನಟಿಯ ಹೇಳಿಕೆ

ವರದಿಗಳ ಪ್ರಕಾರ, ದೀಪಿಕಾ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಪಾತ್ರದಲ್ಲಿ ದೀಪಿಕಾ ಪಡುಕೋಣೆ ತೂಕವಾದ ಹಾಗೂ ಭಾವನಾತ್ಮಕವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾರುಕ್‌ ಅವರ ಪುತ್ರಿಯಾದ ಸುಹಾನ ಅವರಿಗೆ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆಯವರ ಪಾತ್ರ ಕಥೆಯ ಪ್ರಮುಖ ಭಾಗವಾಗಿದೆ ಎಂದು ಹೇಳಲಾಗುತ್ತದೆ.

ಶಾರುಖ್ ಖಾನ್ ಮತ್ತು ಸಿದ್ಧಾರ್ಥ್ ಆನಂದ್ ಇಬ್ಬರೂ ಈ ವಿಶೇಷ ಪಾತ್ರಕ್ಕೆ ದೀಪಿಕಾಳನ್ನು ಆಯ್ಕೆ ಮಾಡಲು ನಿರ್ಧರಿಸಿದ್ದು, ದೀಪಿಕಾ ಈ ಪ್ರಸ್ತಾಪವನ್ನು ಉತ್ಸಾಹದಿಂದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. 'ಪಠಾಣ್' ಮತ್ತು 'ಜವಾನ್' ನಂತರ ಶಾರುಖ್ ಮತ್ತು ದೀಪಿಕಾ 'ಕಿಂಗ್' ನಲ್ಲಿ ಮತ್ತೆ ಒಂದಾಗುತ್ತಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿರುವ 'ಪಠಾಣ್ 2' ಚಿತ್ರದಲ್ಲಿ ಇಬ್ಬರೂ ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ: ವಯಸ್ಸಾದ ಪುರುಷರೊಂದಿಗೆ ರೊಮ್ಯಾನ್ಸ್‌ ಮಾಡುವುದು ಒಳ್ಳೆಯದು..!? ಸ್ಟಾರ್‌ ನಟಿ ಹೇಳಿಕೆ ವೈರಲ್‌

'ಕಿಂಗ್' ಚಿತ್ರದ ಪೂರ್ಣ ಕಥೆ ಇನ್ನೂ ಬಹಿರಂಗಗೊಂಡಿಲ್ಲ. ಆದಾಗ್ಯೂ, 'ಕಿಂಗ್' ಒಂದು ಸೇಡಿನ ಆಕ್ಷನ್ ಥ್ರಿಲ್ಲರ್ ಎಂದು ಹೇಳಲಾಗಿದ್ದು, ಇದರ ಕಥಾವಸ್ತುವು 2000 ರ 'ಬಿಚ್ಚು' ಚಿತ್ರವನ್ನು ಹೋಲುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಶಾರುಖ್ ಅಪಾಯಕಾರಿ ಕೊಲೆಗಾರನ ಪಾತ್ರವನ್ನು ನಿರ್ವಹಿಸಬಹುದು ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಹಲವು ಬದಲಾವಣೆಗಳಾಗಿವೆ. ಸುಜೋಯ್ ಘೋಷ್ ನಿರ್ದೇಶನದ ನಂತರ ಸಿದ್ಧಾರ್ಥ್ ಆನಂದ್ 'ಕಿಂಗ್' ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ದೀಪಿಕಾ ಅವರ ತಾರಾಬಳಗ ಈ ಯೋಜನೆಗೆ ಹೆಚ್ಚಿನ ತಾರಾಬಲವನ್ನು ನೀಡಿದೆ. ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಖಳನಾಯಕನಾಗಿ ನಟಿಸಲಿದ್ದು, ಅಭಯ್ ವರ್ಮಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಚಿತ್ರದ ಪೂರ್ವ ನಿರ್ಮಾಣ ಕೆಲಸಗಳು ಭರದಿಂದ ಸಾಗುತ್ತಿದ್ದು, ಈ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಮುಂಬೈನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, 2026 ರ ಅಂತ್ಯದ ವೇಳೆಗೆ 'ಕಿಂಗ್' ಭವ್ಯ ಪ್ರದರ್ಶನಕ್ಕೆ ಸಿದ್ಧವಾಗಲಿದೆ.

ಇದನ್ನೂ ಓದಿ: ʻಸಲ್ಮಾನ್‌ ನನಗೆ ಅದನ್ನೆಲ್ಲಾ ಮಾಡಿದ್ದಾರೆ...ʼ ಮದುವೆಯಾಗುತ್ತಾರೆ ಎನ್ನುತ್ತಿದ್ದ ಯೂಲಿಯಾ ವಂತರ್‌ ಭಾಯಿಜಾನ್ ವಿರುದ್ಧ ತಿರುಗು ಬಿದ್ದಿದ್ದೇಕೆ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News