ಶೂಟಿಂಗ್‌ ವೇಳೆ ದೀಪಿಕಾ ʼಸ್ತನʼದ ಬಗ್ಗೆ ನಿರ್ದೇಶಕರ ಕಾಮೆಂಟ್;‌ ಬಾಲಿವುಡ್‌ ನಟಿ ಮಾಡಿದ್ದೇನು?

ಅನೇಕ ಬಾಲಿವುಡ್ ನಟ-ನಟಿಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರ ಎಲ್ಲಾ ಷರತ್ತುಗಳನ್ನು ಸದ್ದಿಲ್ಲದೆ ಒಪ್ಪಿಕೊಳ್ಳುತ್ತಾರೆಂದು ಹೇಳಲಾಗುತ್ತದೆ. ಆದರೆ ನಟಿ ದೀಪಿಕಾ ಪಡುಕೋಣೆ ಇದಕ್ಕೆ ಅಪವಾದವಾಗಿದ್ದರು. ಮೌನವಾಗಿರುವುದಕ್ಕಿಂತಲೂ ಅವರು ಆರಂಭದಿಂದಲೂ ಅಂತಹ ಸಂದರ್ಭಗಳನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ.

Written by - Puttaraj K Alur | Last Updated : Jun 24, 2025, 11:22 AM IST
  • ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ
  • ಅಭಿಮಾನಿಗಳು ನೆಚ್ಚಿನ ನಟಿಯನ್ನ ಮತ್ತೆ ಪರದೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ
  • ಬಾಲಿವುಡ್‌ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ ದೀಪಿಕಾ
ಶೂಟಿಂಗ್‌ ವೇಳೆ ದೀಪಿಕಾ ʼಸ್ತನʼದ ಬಗ್ಗೆ ನಿರ್ದೇಶಕರ ಕಾಮೆಂಟ್;‌ ಬಾಲಿವುಡ್‌ ನಟಿ ಮಾಡಿದ್ದೇನು?

Bollywood actress Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅಭಿಮಾನಿಗಳು ಕೂಡ ಪ್ರೀತಿಯ ನಟಿಯನ್ನು ಮತ್ತೆ ಪರದೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ದೀಪಿಕಾ ಪಡುಕೋಣೆ ಈಗ ದೇಶದ ಚಲನಚಿತ್ರೋದ್ಯಮದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಆದರೆ ನಟಿ ತನ್ನ ವ್ಯಕ್ತಿತ್ವದ ಬಗ್ಗೆ ಅಷ್ಟೇ ಜಾಗೃತರಾಗಿದ್ದಾರೆ. ಅಹಿತಕರ ಪರಿಸ್ಥಿತಿ ಅಥವಾ ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ಬಂದಾಗಲೆಲ್ಲಾ ಅವರು ಬಲವಾಗಿ ಪ್ರತಿಭಟಿಸುತ್ತಾರೆ. ದೀಪಿಕಾ ಪಡುಕೋಣೆ ಅವರ ಆತ್ಮವಿಶ್ವಾಸದ ಸ್ವಭಾವ ಮತ್ತೊಮ್ಮೆ ಸಾಬೀತಾಗಿದೆ.

Add Zee News as a Preferred Source

ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದನ್ನು ವಿರೋಧಿಸಿದ್ದು, ದಕ್ಷಿಣದಲ್ಲಿ ದೊಡ್ಡ ಬಜೆಟ್ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಅನೇಕ ಬಾಲಿವುಡ್ ನಟ-ನಟಿಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರ ಎಲ್ಲಾ ಷರತ್ತುಗಳನ್ನು ಸದ್ದಿಲ್ಲದೆ ಒಪ್ಪಿಕೊಳ್ಳುತ್ತಾರೆಂದು ಹೇಳಲಾಗುತ್ತದೆ. ಆದರೆ ದೀಪಿಕಾ ಪಡುಕೋಣೆ ಇದಕ್ಕೆ ಅಪವಾದವಾಗಿದ್ದರು. ಮೌನವಾಗಿರುವುದಕ್ಕಿಂತಲೂ ಅವರು ಆರಂಭದಿಂದಲೂ ಅಂತಹ ಸಂದರ್ಭಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ 'X&Y' ಸಿನಿಮಾ ಬಿಡುಗಡೆಗೆ ದಿನಗಣನೆ... ಈ ದಿನದಂದು ರಾಜ್ಯಾದ್ಯಂತೆ ಅದ್ಧೂರಿಯಾಗಿ ಸಿನಿಮಾ ರಿಲೀಸ್‌

ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತು ಮೂಲಕ ಗ್ಲಾಮರ್ ಜಗತ್ತಿಗೆ ಪ್ರವೇಶಿಸಿದರು. ಸಂದರ್ಶನವೊಂದರಲ್ಲಿ ದೀಪಿಕಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಜಾಹೀರಾತು ನಿರ್ದೇಶಕರೊಂದಿಗೆ  ಉಂಟಾಗಿದ್ದ ವಿವಾದದ ಬಗ್ಗೆ ಮಾತನಾಡಿದ್ದಾರೆ. ದೀಪಿಕಾರ ಪ್ರಕಾರ, ನಿರ್ದೇಶಕರು ಲೈಂಗಿ*ಕವಾಗಿ ಸೂಚಿಸುವ ಕಾಮೆಂಟ್‌ಗಳನ್ನು ಮಾಡಿದ ತಕ್ಷಣ ಅವರು ಶೂಟಿಂಗ್ ಸೈಟ್‌ನಿಂದಲೇ ಹೊರಬಂದಿದ್ದರಂತೆ.

ದೀಪಿಕಾ ಪಡುಕೋಣೆ ಒಳ ಉಡುಪುಗಳ ಜಾಹೀರಾತಿನ ಫೋಟೋಶೂಟ್‌ಗಾಗಿ ಕ್ಯಾಮೆರಾ ಮುಂದೆ ಇದ್ದರು. ಆ ಸಮಯದಲ್ಲಿ ಅವರು ಪ್ರಸಿದ್ಧ ರೂಪದರ್ಶಿಯಾಗಿದ್ದರು. ಜಾಹೀರಾತಿಗಾಗಿ ನಟಿಯ ಫೋಟೋ ಮತ್ತು ವಿಡಿಯೋವನ್ನ ವಿಭಿನ್ನ ಭಂಗಿಗಳಲ್ಲಿ ತೆಗೆಯಲಾಗುತ್ತಿತ್ತು. ಇದ್ದಕ್ಕಿದ್ದಂತೆ ನಿರ್ದೇಶಕರು, 'ಇಲ್ಲ, ಇದು ಏಕೋ ಸರಿಬರುತ್ತಿಲ್ಲʼ ಎಂದು ಹೇಳಿದ್ದರು. ನಿರ್ದೇಶಕರಿಂದ ಅಂತಹ ಕಾಮೆಂಟ್‌ಗಳನ್ನು ಕೇಳಿ ದೀಪಿಕಾ ಆಶ್ಚರ್ಯಚಕಿತರಾಗಿದ್ದರು.

ಇದನ್ನೂ ಓದಿ:  ಈ ವಾರ ತೆರೆಗೆ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ "ತಿಮ್ಮನ ಮೊಟ್ಟೆಗಳು"..! 

"ನಿಮ್ಮ ಸ್ತನಗಳು ತುಂಬಾ ಚಿಕ್ಕದಾಗಿವೆ, ಈ ಜಾಹೀರಾತಿಗೆ ನಿಮಗೆ ದೊಡ್ಡ ಸ್ತನಗಳು ಬೇಕು!" ಅಂತಾ ನಿರ್ದೇಶಕರು ಹೇಳಿದ್ದರು. ನಿರ್ದೇಶಕರ ಈ ಮಾತುಗಳನ್ನ ಕೇಳಿ ದೀಪಿಕಾಗೆ ಶಾಕ್‌ ಆಗಿತ್ತು. ಅಲ್ಲಿಗೆ ಮಾತು ನಿಲ್ಲಿಸದ ನಿರ್ದೇಶಕರು, ʼ ನೀವು ಚಿಂತಿಸಬೇಡಿ, ಎಡಿಟಿಂಗ್ ಸಮಯದಲ್ಲಿ ನಾನು ನಿಮ್ಮ ಸ್ತನಗಳನ್ನು ದೊಡ್ಡದಾಗಿಸುತ್ತೇನೆʼ ಎಂದಿದ್ದರು. ಇದಷ್ಟೇ ಅಲ್ಲದೇ ಆ ನಿರ್ದೇಶಕ ದೀಪಿಕಾಗೆ ಸ್ತನ ವೃದ್ಧಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆಯೂ ಸಲಹೆ ನೀಡಿದರಂತೆ.

ಇದರ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ, ʼನಿರ್ದೇಶಕರ ಅಂದಿನ ಹೇಳಿಕೆ ನನಗೆ ಸರಿ ಎನಿಸಿರಲಿಲ್ಲʼ ಎಂದು ಹೇಳಿದ್ದಾರೆ. ಅಂದು ನಾನು ನಿರ್ದೇಶಕರೊಂದಿಗೆ ಏನೂ ಮಾತನಾಡದೆ ಶೂಟಿಂಗ್‌ ಸೆಟ್‌ನಿಂದ ನಿರ್ಗಮಿಸಿದೆ. ನಾನು ಮತ್ತೆ ಜಾಹೀರಾತು ಮಾಡುವುದಿಲ್ಲವೆಂದು ದೀಪಿಕಾ ನಿರ್ದೇಶಕರಿಗೆ ಸ್ಪಷ್ಟಪಡಿಸಿದ್ದರು. ದೀಪಿಕಾ ಅವರು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಈ ನಟಿ ಚಿತ್ರರಂಗ ಪ್ರವೇಶಿಸಿದ ದಿನದಿಂದಲೂ ಸಹ ಪ್ರತಿಭಟನಾ ನಿಲುವಿನಿಂದ ತಮ್ಮ ವ್ಯಕ್ತಿತ್ವವನ್ನ ಕಾಪಾಡಿಕೊಂಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News