Rashmika Mandanna News: ಕಿರಿಕ್ ಬೆಡಗಿ ಹಲವಾರು ವಿಷಯಗಳಿಗೆ ಸುದ್ದಿಯಾಗುವುದು ಹೊಸದೇನಲ್ಲ, ಟ್ರೋಲ್ ಮಾಡುವವರಿಗಂತು ರಶ್ಮಿಕಾ ಕಂಡರೆ ಎಲ್ಲಿಲ್ಲದ ಪ್ರೀತಿ... ರಶ್ಮಿಕಾ ಕೆಲವು ದಿನಗಳ ಹಿಂದೆ ವೇದಿಕೆಯೊಂದರ ಮೇಲೆ ತಾನು ಹೈದರಾಬಾದ್‌ನಿಂದ ಬಂದವಳು ಎಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಟೀಕೆಗೆ ಒಳಗಾಗಿದ್ದರು. ಕಿರಿಕ್ ಪಾರ್ಟಿ ಎಂಬ ಕನ್ನಡ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ ತಮ್ಮ ಪ್ರತಿಭೆಯಿಂದ ಹಲವಾರು ಅವಕಾಶಗನ್ನು ಗಿಟ್ಟಿಸಿಕೊಂಡು ಬಹಳ ಬೇಗನೆ ಸಿನಿ ರಂಗದಲ್ಲಿ ತಮ್ಮ ಜಾಗವನ್ನು ಭದ್ರಗೊಳಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಹಾಟ್ ಟಾಪಿಕ್ ಆಗಿರುವ ಮತ್ತೊಂದು ವಿಷಯ ಬೆಂಗಳೂರು ಫಿಲ್ಮ್ ಫೆಸ್ಟ್.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವು ಮಾರ್ಚ್ 01ರಿಂದ ಆರಂಭವಾಗಿ ಮಾರ್ಚ್08ರಂದು ಕೊನೆಗೊಂಡಿದೆ. ಈ ಸಂದರ್ಭದಲ್ಲಿ, ಬೆಂಗಳೂರು ಫಿಲ್ಮ್ ಫೆಸ್ಟ್‌ಗೆ ಆಹ್ವಾನ ನೀಡಿದರೂ ಅದನ್ನು ತಿರಸ್ಕರಿಸಿದ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಶಾಸಕ ರವಿ ಗಣಿಗ, ಕನ್ನಡ ಚಿತ್ರರಂಗದಿಂದ ಬೆಳೆದರೂ ಸಹ ಕನ್ನಡ ಚಲನಚಿತ್ರೋತ್ಸವಕ್ಕೆ ನೀಡಿದ ಆಹ್ವಾನ ತಿರಸ್ಕರಿಸಿದವರಿಗೆ ಬುದ್ದಿ ಕಲಿಸಬೇಕಲ್ವಾ ಎಂದು ಆಕ್ರೋಶದಿಂದ ನುಡಿದಿದ್ದರು. ಆ ಬಳಿಕ ರಾಜ್ಯದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಲೇ ಇವೆ. ಏತನ್ಮಧ್ಯೆ, ರಶ್ಮಿಕಾ ಮಂದಣ್ಣಗೆ ಜೊತೆಯಾದ ಕೊಡವ ಸಮುದಾಯ ಅವರಿಗೆ ಬಿಗಿ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ಮೂಲತಃ ಕೊಡಗಿನವಳಾದ ನಟಿ ರಶ್ಮಿಕಾ ಮಂದಣ್ಣ, ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಅದೇ ಕಾರಣಕ್ಕೆ ಕೊಡವ ಸಮುದಾಯದವರು ವಿನಾಕಾರಣ ಹಲವಾರು ಟೀಕೆಗೆ ಒಳಗಾಗುತ್ತಿರುವ ರಶ್ಮಿಕಾಗೆ ರಕ್ಷಣೆ ನೀಡುವಂತೆ ಧ್ವನಿ ಎತ್ತಿದ್ದಾರೆ. ಶಾಸಕ ರವಿ ಗಣಿಗ ರವರ ವ್ಯಂಗವನ್ನು ಗಂಭೀರವಾಗಿ ಪರಿಗಣಿಸಿದ ಕೊಡವ ನ್ಯಾಷನಲ್ ಕೌನ್ಸಿಲ್, ಅಧ್ಯಕ್ಷ ಎನ್.ಯು.ನಾಚಪ್ಪ "ರಶ್ಮಿಕಾಗೆ ಸೂಕ್ತ ಭದ್ರತೆ ಕೊಡಿ" ಎಂದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ- ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಬಾಲಿವುಡ್ ನ ಖ್ಯಾತ ನಿರ್ದೇಶಕ..!
ತಮ್ಮ ಪರಿಶ್ರಮ ಮತ್ತು ಪ್ರತಿಭೆ ಪ್ರದರ್ಶನದ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೆಸರುವಾಸಿಯಾದರು ಸಹ ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಗೌರವ ದೊರೆಯದಿರುವುದು ವಿಷಾದಕರವಾಗಿದೆ. ಆದ್ದರಿಂದ ಅವರಿಗೆ ಸಲ್ಲಬೇಕಾದ ಗೌರವ ದೊರೆಯಲು ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಕೊಡವ ಸಮುದಾಯದ ಪರವಾಗಿ ಬರೆಯಲಾಗಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.
"ಬಾಲಿವುಡ್‌ನ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್‌ರಂತಹ ಮೇರು ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ, ಭಾರತೀಯ ಚಲನಚಿತ್ರರಂಗಕ್ಕೆ ದೊರೆತ ಅಪೂರ್ವ ಕೊಡುಗೆ ಮತ್ತು ಶ್ರೇಷ್ಠ ನಟಿಯಾಗಿದ್ದಾರೆ. ಅವರ ಸ್ವಂತ ನಿರ್ಧಾರದ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವು ಗೌರವಿಸಬೇಕು. ಶಾಸಕರ ಸೂಚನೆಯಂತೆ ನಡೆದುಕೊಳ್ಳಬೇಕೆಂದು ಅವರನ್ನು ಒತ್ತಾಯಿಸಬಾರದು. ಸರಕಾರ ರಶ್ಮಿಕಾ ಮಂದಣ್ಣ ಅವರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಆಕೆಗೆ ಅರ್ಹವಾದ ಗೌರವ ಲಭಿಸುವಂತೆ ನೋಡಿಕೊಳ್ಳಬೇಕು. ನಟಿಯ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಸ್ತ್ರೀಪರವಾದ ನ್ಯಾಯವನ್ನು ಎತ್ತಿಹಿಡಿಯಬೇಕು" ಅಂತ ಎನ್.ಯು.ನಾಚಪ್ಪ ಹೇಳಿದ್ದಾರೆ.
ಇದನ್ನೂ ಓದಿ- ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದ ಸಿಎಂ ಮಾತು ನನಗೆ ತುಂಬಾ ಇಷ್ಟ ಆಯ್ತು..! ಅದ್ರಲ್ಲಿ ತಪ್ಪಿಲ್ಲ
ತಾನು ಏನೇ ಮಾಡಿದರು ಟೋಲ್ ಆಗುವ ರಶ್ಮಿಕಾ ಪರವಾಗಿ ಚಂದನವನದ ಮೋಹಕತಾರೆ ರಮ್ಯಾ ಸಹ ಮಾತನಾಡಿದ್ದು ಸಿನಿಪ್ರಿಯರಿಗೆ ಹಲವಾರು ಬ್ಲಾಕ್ಬಸ್ಟರ್ ಸಿನಿಮಾಗಳ ಮೂಲಕ ರಂಜಿಸುತ್ತಾರೆ. ಅದರ ಹೊರತಾಗಿಯೂ ಅವರು ಟ್ರೋಲ್ಗೊಳಗಾಗುತ್ತಲೇ ಇರುತ್ತಾರೆ. ಸಿನಿಮಾ ನಟ-ನಟಿಯರ ಬಗ್ಗೆ ಕೆಟ್ಟದಾಗಿ ಮಾಡುವ ಟೀಕೆಗಳನ್ನು ನಿಲ್ಲಿಸಬೇಕು ಹಾಗೂ ಅವರದೆ ಆದ ಅವರ ಖಾಸಗಿ ಜೀವನವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಸಿನಿ ರಂಗದಲ್ಲಿ 7 ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್‌ನ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್‌ರಂತಹ ಖ್ಯಾತ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಸಿನಿಮಾ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









