ಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌

Dhanveer Gowda CCB Custody: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ದೊಡ್ಡ ವಿವಾದ ಎದ್ದಿದೆ. ನಟ ದರ್ಶನ್ ಸಂಬಂಧಿತ ಜೈಲು ವಿಡಿಯೋ ರಿಲೀಸ್‌ ಆಗಿರುವ ಹಿನ್ನೆಲೆಯಲ್ಲಿ ಈಗ ಅವರ ಆಪ್ತ ನಟ ಧನ್ವೀರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Written by - Deepa A Reddy | Last Updated : Nov 10, 2025, 12:13 PM IST
  • ಜೈಲಿನ ವಿಡಿಯೋಗಳನ್ನ ಆ ಸ್ಯಾಂಡಲ್ ವುಡ್ ನಟ ಬಿಡುಗಡೆಗೊಳಿಸಿದ್ರಾ..?
  • ನಿನ್ನೆಯಿಂದ ಧನ್ವೀರ್ ನ ವಿಚಾರಣೆಗೆ ಒಳಪಡಿಸ್ತಿರೊ ಸಿಸಿಬಿ
  • ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಗೆ ಕಳಿಸಿರುವ ಸಿಸಿಬಿ
ಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ  ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌

Dhanveer Gowda CCB Custody: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ದೊಡ್ಡ ವಿವಾದ ಎದ್ದಿದೆ. ನಟ ದರ್ಶನ್ ಸಂಬಂಧಿತ ಜೈಲು ವಿಡಿಯೋ ರಿಲೀಸ್‌ ಆಗಿರುವ ಹಿನ್ನೆಲೆಯಲ್ಲಿ ಈಗ ಅವರ ಆಪ್ತ ನಟ ಧನ್ವೀರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Add Zee News as a Preferred Source

ನಿನ್ನೆಯಿಂದಲೇ ಧನ್ವೀರ್ ಅವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ. ಜೈಲಿನೊಳಗಿನ ವಿಡಿಯೋ ಕ್ಲಿಪ್‌ಗಳು ಹೇಗೆ ಹೊರಬಂದವು ಎಂಬುದರ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ, ಧನ್ವೀರ್ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ರಿಟ್ರೀವ್ ಮಾಡಲು ಕಳುಹಿಸಿಕೊಟ್ಟಿದ್ದಾರೆ.

ಮೂಲಗಳ ಪ್ರಕಾರ, ಜೈಲಿನ ವಿಡಿಯೋಗಳು ಸ್ಯಾಂಡಲ್‌ವುಡ್‌ನ ಒಬ್ಬ ನಟನಿಂದಲೇ ಹೊರಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಸಿಸಿಬಿ ಧನ್ವೀರ್ ಅವರನ್ನು ನಿನ್ನೆ ಸಂಜೆಯಿಂದಲೇ ತೀವ್ರ ವಿಚಾರಣೆಗೊಳಪಡಿಸಿದೆ. ಮೊಬೈಲ್‌ನಲ್ಲಿ ಡೇಟಾ ಡಿಲೀಟ್ ಮಾಡಿರುವ ಅನುಮಾನ ಹಿನ್ನೆಲೆ, ಅದನ್ನು ಸಂಪೂರ್ಣವಾಗಿ ರಿಕವರ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ.

ಸಿಸಿಬಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಬಯಲು ಮಾಡುವ ಉದ್ದೇಶದಿಂದ ಡ್ರಿಲ್ ಮುಂದುವರೆಸಿದ್ದು, ಧನ್ವೀರ್ ಅವರಿಂದ ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವರ ಹೆಸರೂ ಸಿಸಿಬಿ ತನಿಖಾ ತಂಡದ ರೇಡಾರ್‌ನಲ್ಲಿ ಇದೆ ಎಂದು ತಿಳಿದುಬಂದಿದೆ.

ಜೈಲು ವಿಡಿಯೋ ರಿಲೀಸ್ ಪ್ರಕರಣ ಈಗ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯ ವಿಷಯವಾಗಿದ್ದು, ನಟ ದರ್ಶನ್ ಮತ್ತು ಅವರ ಆಪ್ತ ವಲಯಕ್ಕೆ ಇದು ಹೊಸ ತಲೆನೋವು ಆಗಿದೆ.
 

About the Author

Deepa A Reddy

2025ರಿಂದ ದೀಪಾ ಎ. ಅವರು Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಟರ್ಟೈನ್‌ಮೆಂಟ್, ಬಿಸಿನೆಸ್, ಲೈಫ್‌ಸ್ಟೈಲ್‌, ವೈರಲ್‌ ಟ್ರೆಂಡ್ಸ್‌ ಮತ್ತು ಹೆಲ್ತ್‌ ಸೇರಿದಂತೆ ಅನೇಕ ವಿಭಾಗಗಳಲ್ಲಿನ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ನಿಖರ ಮಾಹಿತಿ ಹಾಗೂ ಓದುಗರ ಮನ ಸೆಳೆಯುವ ಶೈಲಿ ಇವರ ಬರಹದ ವಿಶೇಷತೆ.

...Read More

Trending News