ಹಿರಿಯ ನಟ ಧರ್ಮೇಂದ್ರ ನಿಧನದ ಬಳಿಕ ಕುಟುಂಬದಲ್ಲಿ ಮೂಡಿದ ಬಿರುಕು ಎಲ್ಲವೂ ಸ್ಪಷ್ಟ

Dharmendra family separate : ಹಿರಿಯ ನಟ ಧರ್ಮೇಂದ್ರ ಅವರ ನಿಧನದ ಬಳಿಕ ಅವರ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನಲಾಗ್ತಿದೆ. ಈ ಬಗ್ಗೆ ಮಾಹಿತಿ ನೀಡ್ತೀವಿ ಮುಂದೆ ಓದಿ..

Written by - Ramya R Gowda | Last Updated : Dec 10, 2025, 10:15 PM IST
  • ನಾಳೆ ಹೇಮಾ ಮಾಲಿನಿ ಕುಟುಂಬದಿಂದ ಸಂತಾಪ ಸಭೆ
  • ಧರ್ಮೇಂದ್ರ ಕುಟುಂಬದಲ್ಲಿ ಮೂಡಿದ ಬಿರುಕು
  • ಹೇಮಾ ಮಾಲಿನಿ ಕುಟುಂಬ ಹಾಗೂ ಡಿಯೋಲ್ ಕುಟುಂಬದಲ್ಲಿ ಭಿನ್ನಾಭಿಪ್ರಾಯ
ಹಿರಿಯ ನಟ ಧರ್ಮೇಂದ್ರ ನಿಧನದ ಬಳಿಕ ಕುಟುಂಬದಲ್ಲಿ ಮೂಡಿದ ಬಿರುಕು ಎಲ್ಲವೂ ಸ್ಪಷ್ಟ

Dharmendra family separate : ಹಿರಿಯ ನಟ ಧರ್ಮೇಂದ್ರ ಅವರ ನಿಧನದ ಬಳಿಕ ಅವರ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನಲಾಗ್ತಿದೆ. 

Add Zee News as a Preferred Source

ಹಿರಿಯ ನಟ ಧರ್ಮೇಂದ್ರ ಅವರ ಮೊದಲ ಸಂತಾಪ ಸಭೆಯಲ್ಲಿ ಹೇಮಾ ಮಾಲಿನಿ ಗೈರು ಹಾಜರಾಗಿದ್ದರು. ಇದಾದ ಬೆನ್ನಲ್ಲೇ ಈಗ ದೆಹಲಿಯಲ್ಲಿ ಪ್ರತ್ಯೇಕ ಶ್ರದ್ಧಾಂಜಲಿ ಸಭೆ ಆಯೋಜಿಸಿದ್ದಾರೆ ಎನ್ನಲಾಗ್ತಿದೆ ಇದು ಡಿಯೋಲ್ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿಧನರಾದರು.. ಧರ್ಮೇಂದ್ರ ಅವರು ಮೊದಲು ಪ್ರಕಾಶ್ ಕೌರ್ ಅವರನ್ನು ಮದುವೆ ಆಗಿದ್ದರು. ನಂತರ ಹೇಮಾ ಮಾಲಿನಿಯನ್ನು ವಿವಾಹ ಆದರು. ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾದಾಗ ಎಲ್ಲರೂ ಒಟ್ಟಿಗೆ ಇದ್ದರು. ಆದರೆ, ಅವರು ನಿಧನ ಹೊಂದಿದ ಬಳಿಕ ಕುಟುಂಬ ಬೇರೆಯಾಗಿದೆ..ಧರ್ಮೇಂದ್ರ ಅವರ ಸಂತಾಪ ಸಭೆಯಲ್ಲಿ ಸ್ಪಷ್ಟವಾಗಿದೆ. ಇತ್ತೀಚೆಗೆ ಮುಂಬೈನಲ್ಲಿ  ಡಿಯೋಲ್ ಕುಟುಂಬದವರು ಸಂತಾಪ ಸಭೆ ನಡೆಸಿದರು.ಆದರೆ ಈ ಸಭೆಗೆ ಹೇಮಾ ಮಾಲಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಬರಲಿಲ್ಲ ಈ ಬೆಳವಣಿಗೆ ಹೇಮಾ ಮಾಲಿನಿ ಕುಟುಂಬ  ಹಾಗೂ ಡಿಯೋಲ್ ಕುಟುಂಬದಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ ಎಂದು ಇದು ತೋರಿಸಿದೆ.
 
ಇದನ್ನೂ ಓದಿ: ಪರಪ್ಪನ ಅಗ್ರಹಾರದ ರಾಜ್ಯಾಥಿತ್ಯ ಕೇಸ್: ಪೊಲೀಸರಿಗೆ ನಾಮ ಹಾಕಿದ ನಟ ಧನ್ವೀರ್? ಮೊಬೈಲ್‌ ರಿಪೋರ್ಟ್‌ನಲ್ಲಿ ಸ್ಫೋಟಕ ಅಂಶ
ಹೌದು ಮುಂಬೈನಲ್ಲಿ ನಡೆದ ಸಂತಾಪ ಸಭೆ ನಡೆದ ಬಳಿಕ ಹೇಮಾ ಮಾಲಿನಿ ಎರಡನೇ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿದ್ದಾರೆ. ಸದ್ಯ ಹೇಮಾ ಮಾಲಿನಿ ಮಥುರಾದ ಸಂಸದೆಯಾಗಿದ್ದು, ಧರ್ಮೇಂದ್ರ ಅವರ  ಎರಡನೇ ಸಂತಾಪ ಸೂಚಕ ಸಭೆಯನ್ನ ದೆಹಲಿಯ ಜನಪಥದಲ್ಲಿರುವ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದ ಈ ಸಭೆಯಲ್ಲಿ ಹೇಮಾ ಮಾಲಿನಿ ಕುಟುಂಬ ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸಲಿದೆ. ಹೇಮಾ ಮಾಲಿನಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್  ಮೂಲಕ ಈ ಎರಡನೇ ಸಂತಾಪ ಸೂಚಕ ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ.. ಇನ್ನು,  ಬಾಬಿ ಮತ್ತು ಸನ್ನಿ ಡಿಯೋಲ್ ಈ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸರಿಯಾಗಿ ಸ್ಪಷ್ಟವಾಗಿಲ್ಲ..ಈ ಸಭೆ ಆಯೋಜನೆ ಬಳಿಕ ಡಿಯೋಲ್ ಕುಟುಂಬದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಕೇಳಿ ಬಂದಿದೆ..

ಹೇಮಾ ಮಾಲಿನಿ ಕುಟುಂಬ ನಾಳೆ ಮಧ್ಯಾಹ್ನ 3ರಿಂದ ಸಂಜೆ 5 ರವರೆಗೆ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಅವರ ಆತ್ಮಕ್ಕೆ ಶಾಂತಿ ನೀಡಲು ಮತ್ತು ಅವರಿಗೆ ಗೌರವ ಸಲ್ಲಿಸಲು ಈ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಈ ಸಂತಾಪ ಸಭೆಯಲ್ಲಿ ಧರ್ಮೇಂದ್ರ ಅವರ ಅಭಿಮಾನಿಗಳು, ಸ್ಥಳೀಯ ಗಣ್ಯರು ಮತ್ತು ಸಂತ ಸಮುದಾಯವು ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಹೇಮಾ ಮಾಲಿನಿ ಹೇಳಿದರು.

ಇದನ್ನೂ ಓದಿ: ಅಂತೆ ಕಂತೆಗಳಿಗೆ ಕಿವಿಗೊಡಬೇಡಿ..! ಫ್ಯಾನ್ಸ್​ಗೆ ದರ್ಶನ್​ ಸಂದೇಶ
 

About the Author

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

...Read More

Trending News