ಬಡ ಮಕ್ಕಳ ನೆರವಿಗೆ ನಿಂತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ..! ನಾಯಕನ ನಡೆಗೆ ಚಾಮರಾಜನಗರದ ಜನರು ಫುಲ್‌ ಫಿದಾ..!

Dhruva Sarja: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ, ತಮ್ಮ ನಡು ನಡತೆಯಿಂದ ಮತ್ತೊಮ್ಮೆ ಮಗದೊಮ್ಮೆ ಅಭಿಮಾನಿಗಳು ಹೃದಯಕ್ಕೆ ಕನ್ನ ಹಾಕುತ್ತಿರುತ್ತಾರೆ. ಇದೀಗ ಇಂತಹದ್ದೆ ಒಂದು ಕೆಲಸ ಮಾಡುವ ಮೂಲಕ ಮತ್ತೊಮ್ಮೆ ಆಕ್ಷನ್‌ ಪ್ರಿನ್ಸ್‌ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದಾರೆ.  

Written by - Zee Kannada News Desk | Last Updated : Feb 25, 2025, 12:08 PM IST
  • ಚಾಮರಾಜನಗರದ ಬುಡಕಟ್ಟು ಮಕ್ಕಳ ವಸತಿ ಶಾಲೆಗೆ ಭೇಟಿ ಕೊಟ್ಟು ಬಡ ಮಕ್ಕಳ ಸಮಸ್ಯೆ ವಿಚಾರಿಸಿದ ಧ್ರುವ ..!
  • ಬಡ ಮಕ್ಕಳಿಗೆ ಅಗತ್ಯವಿರೋ ವಸ್ತುಗಳ ಬಗ್ಗೆ ಮಾಹಿತಿ ಕಲೆಹಾಕಿ ಪ್ರೀತಿಯಿಂದ ಕಳುಹಿಸಿಕೊಟ್ಟ ಆಂಜೆನೇಯನ ಭಕ್ತ..!
  • ಬುಡಕಟ್ಟು ಮಕ್ಕಳೊಂದಿಗೆ ಮತ್ತು ಅಲ್ಲಿನ ಶಿಕ್ಜರೊಂದಿಗೆ ಒಂದಷ್ಟು ಹೊತ್ತು ಸಮಯ ಕಳೆದ ಆಕ್ಷನ್ ಪ್ರಿನ್ಸ್ ಬಗ್ಗೆ ಮೆಚ್ಚುಗೆಯ ಮಹಪೂರ. .!
ಬಡ ಮಕ್ಕಳ ನೆರವಿಗೆ ನಿಂತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ..! ನಾಯಕನ ನಡೆಗೆ ಚಾಮರಾಜನಗರದ ಜನರು ಫುಲ್‌ ಫಿದಾ..!

Dhruva Sarja: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ, ತಮ್ಮ ನಡು ನಡತೆಯಿಂದ ಮತ್ತೊಮ್ಮೆ ಮಗದೊಮ್ಮೆ ಅಭಿಮಾನಿಗಳು ಹೃದಯಕ್ಕೆ ಕನ್ನ ಹಾಕುತ್ತಿರುತ್ತಾರೆ. ಇದೀಗ ಇಂತಹದ್ದೆ ಒಂದು ಕೆಲಸ ಮಾಡುವ ಮೂಲಕ ಮತ್ತೊಮ್ಮೆ ಆಕ್ಷನ್‌ ಪ್ರಿನ್ಸ್‌ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದಾರೆ.

Add Zee News as a Preferred Source

ಧ್ರುವ ಸರ್ಜಾ ಅವರು ಎಷ್ಟು ಸಿಂಪಲ್‌ ಎಂಬುದು ಎಲ್ಲರಿಗೂ ಗೊತ್ತಿದೆ, ಅಷ್ಟು ದೊಡ್ಡ ಸ್ಟಾರ್‌ ಆಕ್ಟರ್‌ ಆಗಿದ್ದರೂ ಸಹ ಧ್ರುವ ತುಂಬಾ ಸಿಂಪಲ್‌ ಆಗಿರಲು ಬಯಸುತ್ತಾರೆ, ಅಭಿಮಾನಿಗಳನ್ನು ಬೇಟಿಯಾಗುತ್ತಾ, ಅವರ ಜೊತೆ ಸಮಯ ಕಳೆಯುತ್ತಾ ತಮ್ಮನ್ನು ಪ್ರೀತಿಸುವ ಫ್ಯಾನ್ಸ್‌ ಅನ್ನು ತುಂಬಾ ಗೌರವಿಸುತ್ತಾರೆ. ಇಷ್ಟೊಂದು ಪ್ರೀತಿ ಕೊಡುವ ಧ್ರುವ ಅಭಿಮಾನಿಗಳಿಗೂ ಅಷ್ಟೇ ಅಚ್ಚು ಮೆಚ್ಚು, ಒಂದಲ್ಲ ಒಂದು ಕಾರಣದಿಂದ ಅಭಿಮಾನಿಗಲ ಹೃದಯಕ್ಕೆ ಹತ್ತಿರವಾಗುವ ಧ್ರುವ ಇದೀಗ ಮತ್ತೊಮ್ಮೆ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಹೌದು, ಇತ್ತೀಚೆಗೆ ಆಕ್ಷನ್‌ ಪ್ರಿನ್ಸ್‌ ನಾಗರಹೊಳೆ ಸಫಾರಿಗೆ ಹೋಗಿದ್ದರು, ಈ ಸಂದರ್ಭದಲ್ಲಿ ಅವರು ಅಲ್ಲಿನ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಸಮಯ ಕಳೆದರು, ಪತ್ನಿ ಪ್ರೇರಣಾ ಅವರ ಜೊತೆಗೂಡಿ ಧ್ರುವ ಸರ್ಜಾ ಚಾಮರಾಜನಗರದ ಸರಕಾರಿ ಶಾಲೆಗಳಿಗೂ ಬೇಟಿ ಕೊಟ್ಟಿದ್ದರು. ಈ ಸಮಯದಲ್ಲಿ ಬುಡಕಟ್ಟು ಮಕ್ಕಳ ವಸತಿ ಶಾಲೆಗೆ ಭೇಟಿ ಕೊಟ್ಟು   ಬಡ ಮಕ್ಕಳ ಸಮಸ್ಯೆ ವಿಚಾರಿಸಿದರು. 

ಬಡ ಮಕ್ಕಳಿಗೆ ಅಗತ್ಯವಿರೋ ವಸ್ತುಗಳ ಬಗ್ಗೆ ಮಾಹಿತಿ ಕಲೆಹಾಕಿ ಅವಗಳನ್ನು ಮಕ್ಕಳಿಗಾಗಿ ಧ್ರುವ ಸರ್ಜಾ ಕಳುಹಿಸಿಕೊಟ್ಟಿದ್ದಾರೆ. ಬುಡಕಟ್ಟು ಮಕ್ಕಳೊಂದಿಗೆ ಮತ್ತು ಅಲ್ಲಿನ ಶಿಕ್ಜರೊಂದಿಗೆ ಒಂದಷ್ಟು ಹೊತ್ತು ಸಮಯ ಕಳೆದ ಆಕ್ಷನ್ ಪ್ರಿನ್ಸ್ ಬಗ್ಗೆ ಮೆಚ್ಚುಗೆಯ ಮಹಪೂರ ಹರಿದು ಬಂದಿದೆ. ಮಕ್ಕಳಿಗೆ ಅವಶ್ಯಕ ವಸ್ತುಗಳನ್ನ ಪೂರೈಸೋ ಮೂಲಕ ಧ್ರುವ ಸರ್ಜಾ ಅವರು ಮತ್ತಷ್ಟು ಜನರಿಗೆ ಮಾದರಿಯಾಗಿದ್ದಾರೆ, ಸದ್ಯ ಇವರ ನಡೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧ್ರುವ ಸರ್ಜಾ ಮಾಡಿದ ಉಪಕಾರಕ್ಕಾಗಿ ಚಾಮರಾಜನಗರದ ಜನರು ಜೈಕಾರ ಹಾಕುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News