ʼದೀಪಿಕಾ ನನಗೆ ದ್ರೋಹ ಬಗೆದಳುʼ.. ಕೊನೆಗೂ ವಿಚ್ಚೇದನದ ಬಗ್ಗೆ ಮೌನ ಮುರಿದ ನಟ! ಮಗು ಜನಿಸಿದ 9 ತಿಂಗಳಲ್ಲೇ ಶಾಕಿಂಗ್‌ ನಿರ್ಧಾರ..

Famous Couple Divorce Rumours: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ, ಗೋವಿಂದ ಮತ್ತು ಸುನೀತಾ, ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ಅವರ ವಿಚ್ಛೇದನ ಸುದ್ದಿಗಳ ನಡುವೆ, ಮತ್ತೊಂದು ಟಿವಿ ಜೋಡಿಯ ಪ್ರತ್ಯೇಕತೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

Written by - Savita M B | Last Updated : Mar 5, 2025, 09:24 AM IST
  • ಪ್ರಸ್ತುತ ಅನೇಕ ಸೆಲೆಬ್ರಿಟಿ ಪವರ್ ಜೋಡಿಗಳ ನಡುವೆ ವಿಚ್ಛೇದನದ ಬಗ್ಗೆ ಮಾತುಕತೆ ನಡೆಯುತ್ತಿದೆ
  • ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ
ʼದೀಪಿಕಾ ನನಗೆ ದ್ರೋಹ ಬಗೆದಳುʼ.. ಕೊನೆಗೂ ವಿಚ್ಚೇದನದ ಬಗ್ಗೆ ಮೌನ ಮುರಿದ ನಟ! ಮಗು ಜನಿಸಿದ 9 ತಿಂಗಳಲ್ಲೇ ಶಾಕಿಂಗ್‌ ನಿರ್ಧಾರ..

Dipika Kakkar and Shoaib Ibrahim: ಪ್ರಸ್ತುತ ಅನೇಕ ಸೆಲೆಬ್ರಿಟಿ ಪವರ್ ಜೋಡಿಗಳ ನಡುವೆ ವಿಚ್ಛೇದನದ ಬಗ್ಗೆ ಮಾತುಕತೆ ನಡೆಯುತ್ತಿದೆ. ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ, ಗೋವಿಂದ ಮತ್ತು ಸುನೀತಾ, ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ಅವರ ವಿಚ್ಛೇದನ ಸುದ್ದಿಗಳ ನಡುವೆ, ಈಗ ಟಿವಿ ತಾರೆ ದೀಪಿಕಾ ಕಕ್ಕರ್ ಮತ್ತು ಶೋಯೆಬ್ ಇಬ್ರಾಹಿಂ ಅವರ ಪ್ರತ್ಯೇಕತೆಯ ಸುದ್ದಿ ವೇಗವನ್ನು ಪಡೆದುಕೊಂಡಿದೆ. ಇತ್ತೀಚೆಗೆ, ಟಿವಿ ನಿರೂಪಕಿ ಸಿಮರ್, ದೀಪಿಕಾ ಕಕ್ಕರ್ ಮತ್ತು ಶೋಯೆಬ್ ಇಬ್ರಾಹಿಂ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿ ಹಬ್ಬಿತ್ತು ಮತ್ತು ಈ ಕಾರಣದಿಂದಾಗಿ ದೀಪಿಕಾ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.. ಈ ಸುದ್ದಿ ವೈರಲ್ ಆದಾಗ, ಶೋಯೆಬ್ ಮತ್ತು ದೀಪಿಕಾ ಸ್ವತಃ ಈ ವಿಷಯದ ಬಗ್ಗೆ ಮೌನ ಮುರಿದು, ಅವರು ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ.. 

Add Zee News as a Preferred Source

ದೀಪಿಕಾ ಕಕ್ಕರ್ ಮತ್ತು ಶೋಯೆಬ್ ಇಬ್ರಾಹಿಂ ಇಬ್ಬರೂ ಟಿವಿಯಲ್ಲಿ ಪವರ್ ಜೋಡಿ. ದೀಪಿಕಾ ಅವರ ಅಂತರ್ಧರ್ಮೀಯ ವಿವಾಹಕ್ಕಾಗಿ ನೆಟಿಜನ್‌ಗಳು ಹಲವು ಬಾರಿ ಟ್ರೋಲ್ ಮಾಡಿದ್ದಾರೆ. ದೀಪಿಕಾ ತನ್ನ ಅಭಿಪ್ರಾಯವನ್ನು ಧೈರ್ಯದಿಂದ ಮಂಡಿಸುವ ಮೂಲಕ ಟ್ರೋಲ್‌ಗಳ ಬಾಯಿ ಮುಚ್ಚಿಸುತ್ತಾರೆ. ಈಗ ವಿಚ್ಛೇದನದ ಬಗ್ಗೆ ಸತ್ಯವೇನು? ಈ ಬಗ್ಗೆ ದಂಪತಿಗಳು ಮೌನ ಮುರಿದಿದ್ದಾರೆ.

ಇದನ್ನೂ ಓದಿ-ಊಟದ ನಂತರ ಈ ಮೊಗ್ಗನ್ನ ಬಾಯಲ್ಲಿಟ್ಟುಕೊಂಡರೇ ಸಾಕು ಶುಗರ್‌ ಎಷ್ಟೇ ಇದ್ದರೂ ನಾರ್ಮಲ್‌ ಆಗುತ್ತೆ! ಔಷಧಿಯ ಅಗತ್ಯವೇ ಇರಲ್ಲ.. 

ಈ ವಿಚ್ಚೇದನ ಸುದ್ದಿಗೆ ತೆರೆ ಎಳೆಯಲೆಂದೇ ವಿಡಿಯೋವೊಂದನ್ನು ಹಂಚಿಕೊಂಡ ಶೋಯೆಬ್ ಇಬ್ರಾಹಿಂ "ಆರಂಭದಲ್ಲಿ ನಾನು ಅಂತಹ ಸುದ್ದಿಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ, ಆದರೆ ಜನರು ಅದನ್ನು ಪೋಸ್ಟ್ ಮಾಡುತ್ತಿರುವುದರಿಂದ, ಅದನ್ನು ಬ್ರೇಕಿಂಗ್ ನ್ಯೂಸ್ ಆಗಿ ಮಾಡೋಣ ಎಂದು ಬ್ಲಾಗ್‌ ಮಾಡಿದ್ದೇವೆ ಎಂದು ಹೇಳಿದ್ದಾರೆ.. ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಶೋಯೆಬ್ ದೀಪಿಕಾಳನ್ನು ಅಣಕಿಸುತ್ತಾ, ನೀವು ನನ್ನೊಂದಿಗೆ ವಿಚ್ಛೇದನ ಪಡೆಯುತ್ತಿರುವ ವಿಚಾರ ನನಗೇಕೆ ಹೇಳಿಲ್ಲ.. ಈ ವಿಚಾರವನ್ನು ಕುಟುಂಬದ ಮುಂದೆ ತರುತ್ತೇನೆ.. ಇಂಡಸ್ಟ್ರಿಯಲ್ಲಿ ಮತ್ತೊಂದು ಮದುವೆ ಮುರಿದು ಬೀಳುತ್ತಿದೆ ಅಂತ ನೀನು ನನಗೆ ಹೇಳಿರಲಿಲ್ಲ ದೀಪಿಕಾ ಆದರೆ ಅದು ನಮ್ಮದೇ.. ಆಗ ದೀಪಿಕಾ.. ನಾನು ಇದನ್ನೆಲ್ಲಾ ಸದ್ದಿಲ್ಲದೆ ಮಾಡುತ್ತೇನೆ.. ನಿಮಗೆ ಏಕೆ ಹೇಳಬೇಕು ಎನ್ನುತ್ತಾರೆ.. ಆಗ ಶೋಯೆಬ್, ಕೊನೆಗೂ, ದೀಪಿಕಾ ನನ್ನಿಂದ ಬೇರೆಯಾಗಲು ನಿರ್ಧರಿಸಿದ್ದಾಳೆ.. ಈಗ ನಾನು ಈ ಬ್ರೇಕಿಂಗ್ ವೀಡಿಯೊವನ್ನು ಮನೆಯಲ್ಲಿರುವ ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದೇನೆ.. ಎಂದಿದ್ದಾರೆ.. ಒಟ್ಟಿನಲ್ಲಿ ದೀಪಿಕಾ ಮತ್ತು ಶೋಯೆಬ್ ವಿಚ್ಛೇದನದ ಸುಳ್ಳು ಸುದ್ದಿ ಕೇಳಿ ಕುಟುಂಬ ಕೂಡ ನಗುತ್ತಿದೆ.. 

ಇದಲ್ಲದೇ ವಿಡಿಯೋದಲ್ಲಿ 'ದೀಪಿಕಾ ನನಗೆ ಮೋಸ ಮಾಡಿದಳು' ಎಂದು ಶೋಯೆಬ್ ನಗುತ್ತಲೇ ಹೇಳುತ್ತಾರೆ, ಇದಾದ ನಂತರ, ದೀಪಿಕಾ ಬಳಿ ಹೋಗಿ ಶೋಯೆಬ್.. ಪ್ರಸ್ತುತ ರಂಜಾನ್ ತಿಂಗಳು ಪ್ರಾರಂಭವಾಗುತ್ತಿದೆ ಕನಿಷ್ಠ ಪಕ್ಷ ಎಲ್ಲವನ್ನೂ ಹೊರಹಾಕೋಣ. ಈ ಪವಿತ್ರ ತಿಂಗಳಲ್ಲಿ ನಾವು ಬೇರ್ಪಟ್ಟಿಲ್ಲವೆಂದು.. ಇದನ್ನು ಕೇಳಿ ದೀಪಿಕಾ ಜೋರಾಗಿ ನಗುತ್ತಾಳೆ. ಈ ವಿಡಿಯೋ ಮೂಲಕ ಶೋಯೆಬ್ ಆಧಾರರಹಿತ ವದಂತಿಗಳನ್ನು ತಳ್ಳಿಹಾಕಿದ್ದು ಸ್ಪಷ್ಟವಾಗಿದೆ.. ತಮ್ಮ ಸಂಬಂಧ ಎಂದಿಗಿಂತಲೂ ಬಲವಾಗಿದೆ ಎಂದು ಅವರು ಜನರಿಗೆ ಕಾಮಿಡಿ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ.. 'ಸುಳ್ಳು ವದಂತಿಗಳನ್ನು ಸುದ್ದಿಯನ್ನಾಗಿ ಪರಿವರ್ತಿಸಬೇಡಿ' ಎಂದು ಶೋಯೆಬ್ ಕೊನೆಗೆ ಹೇಳಿದ್ದಾರೆ.. 

ಇದನ್ನೂ ಓದಿ-ಏಕಾಏಕಿ ಚಿನ್ನದ ಬೆಲೆಯಲ್ಲಿ ಗಣನೀಯ ಬದಲಾವಣೆ! ಖರೀದಿಗೂ ಮೊದಲು 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ತಿಳಿದುಕೊಳ್ಳಿ..   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

...Read More

Trending News