Shalini Pandey: ಈ ಜಗತ್ತೇ ಹಾಗೆ "ಹೆದರಿದವರನ್ನು ಹೆದರಿಸುತ್ತೆ.... ತಿರುಗಿ ನಿಂತವರನ್ನು ಕಂಡು ಹೆದರಿ ಓಡುತ್ತೆ..." ಈ ನಟಿಯ ಜೀವನಗಾಥೆಯೂ ಇದಕ್ಕೆ ಭಿನ್ನವಾಗಿಲ್ಲ. ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬಾಲಿವುಡ್‌ನಲ್ಲೂ ಹೆಸರು ಮಾಡಿರುವ ನಟಿ ಈಕೆ. 'ಅರ್ಜುನ್ ರೆಡ್ಡಿ', 'ಮಹಾರಾಜ್'ನಂತಹ ಚಿತ್ರಗಳ ಮೂಲಕ ಪ್ರೇಕ್ಷಕರ ಮನದರಸಿಯಾಗಿರುವ ಈ ನಟಿಯ ಸಿನಿಮಾ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಎಲ್ಲವನ್ನೂ ಮೀರಿ ಬಣ್ಣದ ಬದುಕಿನಲ್ಲಿ ತನ್ನದೇ ಹೆಸರು ಮಾಡಿರುವ ನಟಿ ಶಾಲಿನಿ ಪಾಂಡೆ.
ನಟಿ ಶಾಲಿನಿ ಪಾಂಡೆ ಸಿನಿ ಕುಟುಂಬದಿಂದ ಬಂದವರಲ್ಲ. ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ ಕುಟುಂಬವನ್ನೇ ತೊರೆದು ಬಂದಿದ್ದವಳು. ಯಾರ ಬೆಂಬಲವೂ ಇಲ್ಲದೆ ಹೆಣ್ಣು ಸಮಾಜದಲ್ಲಿ ಬದುಕುವುದು ಎಂದರೆ ಅದು ಅಷ್ಟು ಸುಲಭವಲ್ಲ... ಹಾಗಂತ ಸಾಧನೆ ಮಾಡುವ ಹಾದಿಯಲ್ಲಿ ಎಲ್ಲವನ್ನೂ ಸಹಿಸಿಕೊಳ್ಳಬೇಕು ಎಂಬ ಅಗತ್ಯವೂ ಇಲ್ಲ ಎಂಬುದಕ್ಕೆ ಈಕೆ ನಿದರ್ಶನ ಎಂದರೂ ತಪ್ಪಾಗುವುದಿಲ್ಲ.
ಇದನ್ನೂ ಓದಿ- ಆಗ ನನಗಿನ್ನೂ ಕೇವಲ 17 ವರ್ಷ... ರಣಧೀರ ವೇಳೆ 'ಅಂಜದ ಗಂಡು' ಮಾಡಿದ ಕೆಲಸ ನೆನೆದ ಖುಷ್ಬೂ...
ಅರ್ಜುನ್ ರೆಡ್ಡಿ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದ ನಟಿ ಶಾಲಿನಿ ಪಾಂಡೆ, ಬಣ್ಣದ ಲೋಕಕ್ಕೆ ಬಂದ ಹೊಸತರಲ್ಲಿ ಆದ ಆ ಕಹಿ ಅನುಭವ ತನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ನಟಿ ಶಾಲಿನಿ ಪಾಂಡೆ ಎಂದರೆ ಆಕೆ ಕೋಪಿಷ್ಠೆ ಎಂಬುದನ್ನು ಸಾಮಾನ್ಯವಾಗಿ ಕೇಳಿರಬಹುದು. ಆದರೆ, ನಿಜವಾಗಿಯೂ ಆಕೆಯ ಈ ಸ್ವಭಾವಕ್ಕೆ ಕಾರಣ ತಿಳಿದ್ರೆ ಹೆಣ್ ಮಕ್ಕಳು ಹಾಗೆ ಇರಬೇಕು ಎಂದು ನೀವೂ ಪ್ರೋತ್ಸಾಹಿಸುವಿರಿ.
ಬಟ್ಟೆ ಬಿಚ್ಚುವಾಗ ವ್ಯಾನಿಟಿ ವಾನ್‌ಗೆ ನುಗ್ಗಿದ ನಿರ್ದೇಶಕ...
ಬಣ್ಣದ ಲೋಕದಲ್ಲಿ ತಮ್ಮ ಮೊದಲ ಕಹಿ ಘಟನೆ ಬಗ್ಗೆ ಮಾತನಾಡಿರುವ ನಟಿ, ನನಗಾಗ ಜಸ್ಟ್ 22 ವರ್ಷ... ನಾನು ಸೌತ್ ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶೂಟಿಂಗ್ ಮುಗಿಸಿ ಬಟ್ಟೆ ಬದಲಾಯಿಸಲು ಹೋದೆ. ಡ್ರೆಸ್ ಚೇಂಜ್ ಮಾಡುವಾಗ ಸಿನಿಮಾ ನಿರ್ದೇಶಕ ದಿಢೀರ್ ಎಂದು ವ್ಯಾನಿಟಿ ವಾನ್‌ಗೆ ನುಗ್ಗಿದರು. ನಟಿ ಒಬ್ಬಳೇ ಇದ್ದಾಳೆ ಏನು ಬೇಕಾದರೂ ಮಾಡಬಹುದು ಎಂದು ನಿರ್ದೇಶಕರು ಭಾವಿಸಿದ್ದರು. ಆದರೆ, ನಾನು ಕೋಪಗೊಂಡು ಕೂಗಾಡಿದೆ. ನಾನು ಹೊಸಬಳು ಎಂದು ಈ ರೀತಿ ನನ್ನೊಂದಿಗೆ ನಡೆದುಕೊಳ್ಳುವುದು ಉಚಿತವಲ್ಲ ಎಂದು ಹೇಳಿದೆ. ಘಟನೆ ನಡೆದ ಸಂದರ್ಭದಲ್ಲಿ ಪಕ್ಕದಲ್ಲಿದ್ದವರು ಮುಂದೆಯೂ ಸಿನಿಮಾ ಮಾಡಬೇಕು, ಜಗಳ ಮಾಡಿಕೊಳ್ಳಬೇಡ ಎಂದು ಸಲಹೆ ನೀಡಿದರು. ಆದರೆ, ಆ ಸಂದರ್ಭದಲ್ಲಿ "ನನ್ನನ್ನು ನಾನು ರಕ್ಷಿಸಿಕೊಳ್ಳುವುದು ಬಹಳ ಅಗತ್ಯ ಎಂಬುದನ್ನು ನಾನು ಅರಿತುಕೊಂಡೆ". ನಮ್ಮ ರಕ್ಷಣೆ ವಿಚಾರ ಬಂದಾಗ ಮುಂದೇನಾಗುತ್ತೆ ಎಂಬುದನ್ನೂ ಯೋಚಿಸುವ ಬದಲಿಗೆ ಆ ಕ್ಷಣದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಹೆಣ್ಣು ಮಕ್ಕಳು ಕಲಿಯುವುದು ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ- ಆಶ್ರಯವಿಲ್ಲದೇ ಆಶ್ರಮದ ಪಾಲಾದ ಹಿರಿಯ ನಟಿ ಶೈಲಶ್ರೀ ಸುದರ್ಶನ್ ಬದುಕಲ್ಲಿ ಬೆಳಕಾದ ನಟ ದರ್ಶನ್!
ಇನ್ನೂ ಆ ಚಿತ್ರದಲ್ಲಿ ಸೆಟ್ ನಲ್ಲಿ ನಾನು ನಡೆದುಕೊಂಡ ರೀತಿಯಿಂದಾಗಿ ಜನ ನನಗೆ ಕೋಪಿಷ್ಠೆ ಎಂಬ ಹಣೆಪಟ್ಟಿ ಕಟ್ಟಿದರು. ಆದರೆ, ನನ್ನನ್ನು ನಾನು ರಕ್ಷಿಸಿಕೊಳ್ಳಲು ನಾನು ಹಾಗೆ ನಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ, ಬರುಬರುತ್ತಾ ಜನರೊಂದಿಗೆ ಜಗಳವಾಗುವ ಬದಲು ಅಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾನು ಕಲಿಯಬೇಕು ಎಂಬುದನ್ನೂ ಅರ್ಥಮಾಡಿಕೊಂಡೆ ಎಂದವರು ತಿಳಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









