ಪುನೀತ್‌ ರಾಜ್‌ಕುಮಾರ್‌ ಈಗ ಅಲ್ಲಿದ್ದಾರೆ... ಗರುಡ ಪುರಾಣ ಉಲ್ಲೇಖಿಸಿ ಅಪ್ಪು ಪುನರ್ಜನ್ಮದ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್‌ ಹೇಳಿದ್ದೇನು?

Roopa Iyer spoke about Puneeth Rajkumar: ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ನಿರ್ದೇಶಕಿ ರೂಪಾ ಅಯ್ಯರ್‌, ಪುನೀತ್‌ ಸಾವಿನ ಬಳಿಕ ಏನಾಗಿರುತ್ತಾರೆ? ಅವರದ್ದು ಪುಣ್ಯದ ಸಾವೇ? ಎಂಬ ಬಗ್ಗೆ ಗರುಡ ಪುರಾಣವನ್ನು ಉಲ್ಲೇಖಿಸಿ ಉತ್ತರ ನೀಡಿದ್ದಾರೆ.  

Written by - Bhavishya Shetty | Last Updated : Apr 27, 2025, 03:00 PM IST
    • ಪುನೀತ್‌ ರಾಜ್‌ಕುಮಾರ್‌ ಇಹಲೋಕ ತ್ಯಜಿಸಿ ಮೂರು ವರ್ಷಗಳೇ ದಾಟಿವೆ
    • ಅವರ ಸಾವಿನ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್‌ ಮಾತು
    • ರಾಜೇಶ್‌ ಗೌಡ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ರೂಪಾ
ಪುನೀತ್‌ ರಾಜ್‌ಕುಮಾರ್‌ ಈಗ ಅಲ್ಲಿದ್ದಾರೆ... ಗರುಡ ಪುರಾಣ ಉಲ್ಲೇಖಿಸಿ ಅಪ್ಪು ಪುನರ್ಜನ್ಮದ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್‌ ಹೇಳಿದ್ದೇನು?

Roopa Iyer spoke about Puneeth Rajkumar: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಹಲೋಕ ತ್ಯಜಿಸಿ ಮೂರು ವರ್ಷಗಳೇ ದಾಟಿವೆ. ಆದರೆ ಇಂದಿಗೂ ಕರುನಾಡು ಅವರನ್ನು ಮರೆತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದೆ. ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್‌ ಗರುಡ ಪುರಾಣ ಉಲ್ಲೇಖಿಸಿ ಮಾತನಾಡಿದ್ದಾರೆ.

Add Zee News as a Preferred Source

ಇದನ್ನೂ ಓದಿ:  ಸೌತೆಕಾಯಿಯಂತೆ ಕಾಣುವ ಈ ತರಕಾರಿ ಮಧುಮೇಹಿಗಳಿಗೆ ದಿವ್ಯೌಷಧ! ತೂಕ ಇಳಿಕೆಗೂ ಇದೇ ಮದ್ದು..

ರಾಜೇಶ್‌ ಗೌಡ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ಪುನೀತ್‌ ಸಾವಿನ ಬಳಿಕ ಏನಾಗಿರುತ್ತಾರೆ? ಅವರದ್ದು ಪುಣ್ಯದ ಸಾವೇ? ಎಂಬೆಲ್ಲಾ ಪ್ರಶ್ನೆಗೆ ಗರುಡ ಪುರಾಣವನ್ನು ಉಲ್ಲೇಖಿಸಿ ಉತ್ತರ ನೀಡಿದ್ದಾರೆ.

"ಪುನೀತ್‌ ರಾಜ್‌ಕುಮಾರ್‌ ಅಂದ ತಕ್ಷಣ ಎಲ್ಲರ ಮುಖದಲ್ಲಿ ಅದೊಂದು ನಗು ಮೂಡುತ್ತದೆ. ಅಂತಹದ್ದೊಂದು ಅದ್ಭುತ ಶಕ್ತಿಯನ್ನು ಅವರು ನಮಗೆಲ್ಲಾ ಕೊಟ್ಟುಹೋಗಿದ್ದಾರೆ. ಬಾಕಿ ಉಳಿದಿದ್ದ ಎಲ್ಲಾ ಕರ್ಮಗಳನ್ನು ಮುಗಿಸುವ ಸಲುವಾಗೀಯೇ ಅವರು ಇಲ್ಲಿ ಬಂದಿದ್ದರು. ಅದಕ್ಕಾಗಿಯೇ ಅಂತಹ ದೊಡ್ಡ ಕಲಾವಿದರ ಮನೆಯಲ್ಲಿಯೇ ಕಲಾವಿದನಾಗಿ ಹುಟ್ಟಿದ್ದು. ಇರೋವಷ್ಟು ದಿನ ಸಾಮಾನ್ಯನಾಗಿಯೇ ಇದ್ದದ್ದು" ಎಂದು ಅಪ್ಪು ಬಾಳಿ ಬದುಕಿದ ರೀತಿಯ ಬಗ್ಗೆ ರೂಪಾ ಮಾತನಾಡಿದ್ದಾರೆ.

"ಗರುಡ ಪುರಾಣದ ಪ್ರಕಾರ, ಆಧ್ಮಾತ್ಮಕವಾಗಿ ಇದೊಂದು ಒಳ್ಳೆಯ ಸಾವು. ಅಂಥ ಸಾವು ಬರಲಿ ಅಂತಾ ತುಂಬಾ ಜನ ತಾತಂದಿರು, ಅವರು ಇವರು ಎಲ್ಲಾ ಕೇಳಿಕೊಳ್ಳುತ್ತಾರೆ, ಅದಕ್ಕಾಗಿ ಕಾಯುತ್ತಿರುತ್ತಾರೆ. ಒಂದು ಮೆಟಲ್‌ ಕೂಡ ನನ್ನನ್ನು ಮುಟ್ಟಕೂಡದು. ಇಂಜೆಕ್ಷನ್‌ ಚುಚ್ಚಿಸಿಕೊಂಡು, ಮೈಯನ್ನು ಕೂಯ್ಯಿಸಿಕೊಂಡು, ಪ್ರಜ್ಞೆ ತಪ್ಪಿಸಿ ಚಿಕಿತ್ಸೆ ಪಡೆಯದೇ ಇಂಥ ಸಾವು ಬರಕೂಡದು ಎಂದು ಅನೇಕ ಜನ ಕೇಳಿಕೊಳ್ಳುತ್ತಾರೆ. ಅದರಲ್ಲೂ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತೊಡೆಯ ಮೇಲೆ ಸಾವನ್ನಪ್ಪಿದರು. ಅದು ನಿಜಕ್ಕೂ ಪುಣ್ಯದ ಸಾವು. ಒಂದು ಸಾವಿನ ವಿಚಾರಕ್ಕೆ ಬಂದರೆ ಅದು ಪುಣ್ಯದ ಸಾವು, ಮತ್ತೊಂದು ಅವರ ಜೀವನ ಇಂದಿಗೂ ಎಲ್ಲರನ್ನೂ ಮೋಟಿವೇಟ್‌ ಮಾಡುತ್ತದೆ" ಎಂದು ರೂಪಾ ಹೇಳಿದ್‌ದಾರೆ.

"ಪುನೀತ್‌ ಇಂದಿಗೂ ನಮ್ಮನ್ನು ಮೋಟಿವೇಟ್‌ ಮಾಡುತ್ತಾರೆ. ಚಿಕ್ಕಂದಿನಿಂದ, ದೊಡ್ಡವರಾದ ಮೇಲೆ, ಈಗಲೂ ಅವರನ್ನು ಎಲ್ಲರೂ ಇಷ್ಟಪಡುತ್ತಾರೆ. ದುಡ್ಡು ಕೊಟ್ಟು ಪಡೆದುಕೊಳ್ಳದ ಏಕೈಕ ಪುಣ್ಯ ಎಂದರೆ ಅದು ಆಶೀರ್ವಾದ. ಪುನೀತ್‌ ಅವರು ಇದ್ದಷ್ಟು ದಿನ ಏನೆನೆಲ್ಲ ಮಾಡಬೇಕೋ ಎಲ್ಲವನ್ನೂ ಕ್ರಮಬದ್ಧವಾಗಿ ಮಾಡಿದ್ದಾರೆ. ಹೀಗಿರುವಾಗ ಒಂದೇ ಕ್ಷಣಕ್ಕೆ ಹೀಗೆ ಹೋಗಿದ್ದಾರೆ ಅಂದ್ರೆ, ಮೇಲಿನ ದೇವರು ಅವರನ್ನು ಸ್ವಾಗತಿಸಿದ್ದಾರೆ ಅಂತಲೇ ಅರ್ಥ. ಅವರು ದೇವಲೋಕದಲ್ಲಿಯೇ ಇದ್ದಾರೆ" ಎಂದು ಗರುಡ ಪುರಾಣದ ಉಲ್ಲೇಖದ ಪ್ರಕಾರ ಹೇಳಿದ್ದಾರೆ.

ಇದನ್ನೂ ಓದಿ:  ಪವಿತ್ರ ಲೋಕೆಶ್‌ ನನ್ನ ಪಕ್ಕದಲ್ಲಿದ್ರೆ.. : ಹಿರಿಯ ನಟ ನರೇಶ್

“ಈ ಥರ ಒಬ್ಬ ಮನುಷ್ಯ ಇರೋಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ಉತ್ತರ ನೀಡಿದ ರೂಪಾ ಅಯ್ಯರ್‌, ”ಕೊನೇ ಜನ್ಮ ಆಗಿದ್ದರೆ ಸಾಧ್ಯ, ತುಂಬ ಪ್ರಬುದ್ಧವಾದ ಮನಸ್ಸಿದ್ದರೂ ಇದು ಸಾಧ್ಯವಾಗುತ್ತದೆ. ಆಪರೇಷನ್‌ಗಳನ್ನು ಮಾಡಿಸಿಕೊಳ್ಳದೆ, ಗಟ್ಟಿ ದೇಹ ಮತ್ತು ಜ್ಞಾನದ ಜತೆಗೇ ಹೋದರು. ಅದು ಅವರಿಗೆ ಸಿಕ್ಕ ರಾಜಮರ್ಯಾದೆ" ಎಂದು ಹೇಳಿದ್ದಾರೆ ರೂಪಾ ಅಯ್ಯರ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News