ಲಿವ್‌-ಇನ್‌ ರಿಲೇಷನ್ ಇದ್ರೂ ಪರವಾಗಿಲ್ಲ.. ಮದುವೆ ಬೇಡ.. ಮಕ್ಕಳು ಮಾತ್ರ ಬೇಕು...! ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

Actress Tejaswi Madivada: ದಕ್ಷಿಣ ಸಿನಿಮಾರಂಗದ ಫೇಮಸ್‌ ನಟಿಯೊಬ್ಬರು  ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ವೈವಾಹಿಕ ಜೀವನದ ಬಗ್ಗೆ ಹಂಚಿಕೊಂಡಿರುವ ಅವರ ಮಾತುಗಳು ಸೋಷಿಯಲ್‌ಮೀಡಿಯಾದಲ್ಲಿ ಸಂಚಲನ ಮೂಡಿಸಿವೆ.

Written by - Yashaswini V | Last Updated : Jun 26, 2025, 09:39 PM IST
  • ನಿರೂಪಣೆಯಲ್ಲಿ ಬ್ಯೂಸಿಯಾಗಿರುವ ತೇಜಸ್ವಿ ತೆಲುಗು ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಮತ್ತು ಇತರೆ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಮನೆಮಾತಾಗಿದ್ದಾರೆ.
  • ಟಾಲಿವುಡ್ ಸಿನಿಮಾರಂಗದಲ್ಲಿ ಮೊದಲಿಗೆ ಸಣ್ಣಪುಟ್ಟ ಪಾತ್ರಗಳನ್ನ ಮಾಡುವ ಮೂಲಕ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಪ್ರೇಕ್ಷಕರ ಮನಸ್ಸು ಗೆದ್ದಿರುವ ಅದೆಷ್ಟೋ ನಟಿಯರಲ್ಲಿ ಈಕೆಯೂ ಒಬ್ಬರು.
  • ತಮ್ಮ ಸೌಂದರ್ಯದಿಂದ ಯುವ ಪ್ರೇಕ್ಷಕರ ಮನಸ್ಸು ಕದ್ದಿರುವ ಕ್ಯೂಟ್‌ ನಟಿ ತೇಜಸ್ವಿ ಮಡಿವಾಡ 'ಸೀತಮ್ಮ ವಕಿಟ್ಲೋ ಸಿರಿಮಲ್ಲೆ ಚೆಟ್ಟು' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.
ಲಿವ್‌-ಇನ್‌ ರಿಲೇಷನ್ ಇದ್ರೂ ಪರವಾಗಿಲ್ಲ.. ಮದುವೆ ಬೇಡ.. ಮಕ್ಕಳು ಮಾತ್ರ ಬೇಕು...! ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

Actress Tejaswi Madivada: ಆರಂಭಿಕ ದಿನಗಳಲ್ಲಿ ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಜನರ ಮನ ಗೆದ್ದಿದ್ದ ಈಕೆ ಬಳಿಕ ಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಟಾಲಿವುಡ್ ಸಿನಿಮಾ ರಂಗದಲ್ಲಿ ತಮ್ಮದೇ  ಛಾಪು ಮೂಡಿಸಿದ ನಟಿ ತೇಜಸ್ವಿ ಮಡಿವಾಡ. ಇದೀಗ ತಮ್ಮ ಹೇಳಿಕೆ ಮೂಲಕ ಸೋಷಿಯಲ್‌ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ. 

Add Zee News as a Preferred Source

ನಟಿ ತೇಜಸ್ವಿ ಮಡಿವಾಡ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಹಂಚಿಕೊಂಡಿಲ್ಲ. ಆದಾಗ್ಯೂ, ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಷಯಗಳು ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಗಾಳಿಮಾತುಗಳು ಕೇಳಿ ಬಂದಾಗ ನಟಿ ಅದರ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ.

ಇದನ್ನೂ ಓದಿ- ರಶ್ಮಿಕಾ ಮಂದಣ್ಣ ಕಂಡು ಸ್ಟೇಜ್ ಮೇಲೆ ನಾಚಿ ನೀರಾದ ಮೆಗಾಸ್ಟಾರ್ ಚಿರಂಜೀವಿ: ವಿಡಿಯೋ ವೈರಲ್

ಇದೀಗ ನಟಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಅವರ ಅಭಿಮಾನಿಗಳಿಗೆ ಶಾಕ್‌ ನೀಡುವುದಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕೂ ನಟಿ ಆಡಿರುವ ಮಾತುಗಳೇನು? 

ನಟಿ ತೇಜಸ್ವಿ ಮಡಿವಾಡ ಸಂದರ್ಶನದಲ್ಲಿ "ನನಗೆ ಮದುವೆಯಾಗುವ ಯಾವುದೇ ಯೋಜನೆ ಇಲ್ಲ.  ಆದರೆ ನನಗೆ ಮಕ್ಕಳು ಬೇಕು" ಎಂದು ಹೇಳಿದ್ದಾರೆ. ಮದುವೆ ಇಲ್ಲದೆ  ಮಕ್ಕಳನ್ನು ಹೇಗೆ ಹೊಂದಲು ಸಾಧ್ಯ ಎಂದು ಕೇಳಲಾದ ಪ್ರಶ್ನೆಗೂ ಪ್ರತಿಕ್ರಿಯಿಸಿರುವ ನಟಿ ತೇಜಸ್ವಿ  ಮಡಿವಾ, "ಸುಷ್ಮಿತಾ ಸೇನ್ ಕೂಡ ಮಕ್ಕಳನ್ನು ದತ್ತು ಪಡೆದಿದ್ದಾರೆ, ನಾನು ಅವರನ್ನೇ  ಆದರ್ಶವನ್ನಾಗಿಟ್ಟುಕೊಂಡಿದ್ದೇನೆ ." ಮದುವೆಯಾಗುವ ಯಾವುದೇ ಯೋಜನೆ ಇಲ್ಲ ಒಂದು ವೇಳೆ ಅಗತ್ಯವಿದ್ದರೆ ಲಿವ್-ಇನ್ ಸಂಬಂಧದಲ್ಲಿರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ- ರಶ್ಮಿಕಾ ಮಂದಣ್ಣ ಕಂಡು ಸ್ಟೇಜ್ ಮೇಲೆ ನಾಚಿ ನೀರಾದ ಮೆಗಾಸ್ಟಾರ್ ಚಿರಂಜೀವಿ: ವಿಡಿಯೋ ವೈರಲ್

ನಟಿ ತೇಜಸ್ವಿ ಮಡಿವಾಡ ಅವರ ಈ ಹೇಳಿಕೆಯು ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಅಗುತ್ತಿದೆ. ಇನ್ನು ನಟಿಯ ಈ ಮಾತುಗಳಿಗೆ ನೆಟಿಜನ್ಸ್‌ ನಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.  ಕೆಲವರು "ಸಂಬಂಧದಲ್ಲಿ ಮಕ್ಕಳನ್ನು ಪಡೆಯುವ ಬದಲು ಅನಾಥರನ್ನು ದತ್ತು ತೆಗೆದುಕೊಂಡು ಬೆಳೆಸಿದರೆ ಜೀವನವು ಹೆಚ್ಚು ಅರ್ಥಪೂರ್ಣವಾಗುತ್ತದೆ" ಎಂದು ಸಲಹೆ ನೀಡಿದ್ದರೆ, ಕೆಲವರು ನಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಆದರೆ ನಟಿ ಇವ್ಯಾವ ನೆಗಿಟಿವ್‌ ಕಮೆಂಟ್‌ ಗಳಿಗೆ ಡೊಂಟ್‌ ಕೆರ್‌ ಎಂದ್ದಿದ್ದಾರೆ.

ಸದ್ಯಕ್ಕೆ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ತೇಜಸ್ವಿ ಮಡಿವಾಳ ತೆಲುಗು ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಮತ್ತು ಇತರೆ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿಯೂ ಸಹ ಹೆಚ್ಚು ನಿರತರಾಗಿದ್ದಾರೆ. ಈ ಸುಂದರಿ ತನ್ನ ಫೋಟೋಗಳು, ವೀಡಿಯೊಗಳನ್ನು ಆಗಾಗ್ಗೆ  ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News