ಮಕ್ಕಳ ಜನನದ ನಂತರ ಹೂಕೋಸ್‌ ತರ ಆಗಿದ್ದ ಕರೀನಾ ಮತ್ತೇ ಹೂವಿನಂತಾಗಿದ್ದು ಹೇಗೆ ಗೊತ್ತಾ? ಬೇಬೋ ವೇಯಿಟ್‌ ಲಾಸ್‌ ಸೀಕ್ರೆಟ್ ಇದು..

Actress Kareena weight loss: ನಟಿ ಕರೀನಾ ಕಪೂರ್ ಖಾನ್ ಜೆಹ್ ಜನನದ ನಂತರ 25 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂದು ವಿವರಿಸಿದರು. ಇದರ ಸಂಪೂರ್ಣ ವಿವರ ಇಲ್ಲಿದೆ.. 

Written by - Savita M B | Last Updated : Apr 8, 2025, 05:23 PM IST
  • ನಟಿ ಕರೀನಾ ಕಪೂರ್ ಖಾನ್ ಇತ್ತೀಚೆಗೆ ತಮ್ಮ ದೇಹದಲ್ಲಿನ ಬದಲಾವಣೆಗಳು ಮತ್ತು ಸೆಲ್ಫ್‌ ಲವ್ ಬಗ್ಗೆ ಮಾತನಾಡಿದ್ದಾರೆ.
  • ಕಾರ್ಯಕ್ರಮದಲ್ಲಿ ಕರೀನಾ ಕೆಲವು ಸೀಕ್ರೆಟ್‌ಗಳನ್ನು ಹೇಳಿಕೊಂಡಿದ್ದಾರೆ..
ಮಕ್ಕಳ ಜನನದ ನಂತರ ಹೂಕೋಸ್‌ ತರ ಆಗಿದ್ದ ಕರೀನಾ ಮತ್ತೇ ಹೂವಿನಂತಾಗಿದ್ದು ಹೇಗೆ ಗೊತ್ತಾ? ಬೇಬೋ ವೇಯಿಟ್‌ ಲಾಸ್‌ ಸೀಕ್ರೆಟ್ ಇದು..

Bollywood: ನಟಿ ಕರೀನಾ ಕಪೂರ್ ಖಾನ್ ಇತ್ತೀಚೆಗೆ ತಮ್ಮ ದೇಹದಲ್ಲಿನ ಬದಲಾವಣೆಗಳು ಮತ್ತು ಸೆಲ್ಫ್‌ ಲವ್ ಬಗ್ಗೆ ಮಾತನಾಡಿದ್ದಾರೆ. ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕರೀನಾ ಕೆಲವು ಸೀಕ್ರೆಟ್‌ಗಳನ್ನು ಹೇಳಿಕೊಂಡಿದ್ದಾರೆ.. 

Add Zee News as a Preferred Source

ತಮ್ಮ ಹೆಚ್ಚಿದ ತೂಕದ ಬಗ್ಗೆ ಮಾತನಾಡಿದ ಕರೀನಾ.."ಕಿರಿಯ ಮಗ ಜಹಾಂಗೀರ್ ಅಲಿ ಖಾನ್ (ಜೆಹ್) ಜನಿಸಿದ ನಂತರ ನನ್ನ ತೂಕ 25 ಕೆಜಿ ಹೆಚ್ಚಾಗಿತ್ತು.. ಇದರಿಂದಾಗಿ ಸ್ವಲ್ಪ ಸಮಯದವರೆಗೆ ಅಭದ್ರತೆಯ ಭಾವನೆ ಮೂಡಿತು. ನನ್ನ ದೇಹವು ಬದಲಾಗುತ್ತಿದ್ದಂತೆ, ನಾನು ಸ್ಲಿಮ್ ಆಗಿ ಕಾಣಲು ಪ್ರಯತ್ನಿಸುತ್ತಿದ್ದೆ. ನಾನು ಮೊದಲಿನಂತೆಯೇ ಕಾಣಬೇಕೆಂದು ನನಗೆ ಅನಿಸಿತು. ನಾನು ನನ್ನನ್ನೇ ನಂಬಿದ್ದೆ, ಮತ್ತು ಅಭಿಮಾನಿಗಳು ಅದೇ ಆತ್ಮವಿಶ್ವಾಸವನ್ನು ನನ್ನಲ್ಲಿಟ್ಟಿದ್ದರು.. ಸ್ವಲ್ಪ ಸಮಯದವರೆಗೆ, ನಾನು ಮತ್ತೆ ಸ್ಲಿಮ್ ಆಗಲು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಭಾವಿಸಿದ್ದೆ. ಆದರೆ ಅದು ಕೇವಲ ಕ್ಷಣಿಕವಾದ ಆಲೋಚನೆಯಾಗಿತ್ತು. ನಾನು ಈಗಲೂ ಸುಂದರವಾಗಿಯೇ ಇದ್ದೇನೆ ಎಂದು ಭಾವಿಸಿದೆ" ಎಂದು ಕರೀನಾ ಹೇಳಿದರು. 

ಇದನ್ನೂ ಓದಿ : ಆಪರೇಷನ್‌ ಬೇಡವೇ ಬೇಡ.. ನೋವಿಲ್ಲದೇ ಕಿಡ್ನಿ ಸ್ಟೋನ್‌ ಹೊರಹಾಕುತ್ತೆ ಈ ಅಪರೂಪದ ಎಲೆ! ಮನೆಯಂಗಳದಲ್ಲೇ ಸಿಗುವ ಪರಮೌಷಧವಿದು..

ʼನಾವು ನಮ್ಮನ್ನು ನಂಬಿದಾಗ, ಜನರು ಸಹ ನಮ್ಮನ್ನು ನಂಬುತ್ತಾರೆ. ಮತ್ತು ನಾನು ನನ್ನನ್ನು ನಂಬುವುದನ್ನು ಎಂದಿಗೂ ಮರೆತಿಲ್ಲ.. ನನ್ನ ಜೀವನದಲ್ಲಿ, ನಾನು ಯಾವಾಗಲೂ ಸರಿ ಎಂದು ಭಾವಿಸುವ ರೀತಿಯಲ್ಲಿಯೇ ಬದುಕಿದ್ದೇನೆ. ಜನರು ಏನು ಹೇಳುತ್ತಾರೆಂದು ನಾನು ಹೆಚ್ಚು ಯೋಚಿಸುವುದಿಲ್ಲʼ  ಎಂದು ಕರೀನಾ ಸ್ಪಷ್ಟವಾಗಿ ಹೇಳಿದರು. ಅಲ್ಲದೇ ʼನಿಜವಾದ ಶಕ್ತಿ ಒಳಗಿನಿಂದ ಬರುತ್ತದೆ ಮತ್ತು ಸ್ವಯಂ ಸ್ವೀಕಾರವು ಆತ್ಮವಿಶ್ವಾಸವನ್ನು ಬೆಳೆಸುತ್ತದೆ.. ನಿಮ್ಮನ್ನು ಪ್ರೀತಿಸುವುದು ಮತ್ತು ನಿಮ್ಮನ್ನು ಒಪ್ಪಿಕೊಳ್ಳುವುದು - ಅದು ನಿಮಗೆ ನಿಜವಾದ ಶಕ್ತಿಯನ್ನು ನೀಡುತ್ತದೆ" ಎನ್ನುತ್ತಾರೆ ನಟಿ.. 

ಕರೀನಾ ಈ ಬಾರಿ ತನ್ನ ಆಹಾರ ಪದ್ಧತಿಯ ಬಗ್ಗೆಯೂ ಮಾತನಾಡಿದ್ದು, "ನಾನು ತುಂಬಾ ಆಹಾರಪ್ರಿಯಳು. ಬಾಲ್ಯದಲ್ಲಿ ನಾನು ಸ್ವಲ್ಪ ದಪ್ಪಗಿದ್ದೆ, ಆದರೆ ನಾನು ಯಾವಾಗಲೂ ಸಂತೋಷವಾಗಿದ್ದೆ.. ನಾನು ತೆಳ್ಳಗೆ ಕಾಣಲು ಎಂದಿಗೂ ಹಸಿವಿನಿಂದ ಬಳಲಿಲ್ಲ. ಹದಿಹರೆಯದವಳಾಗಿದ್ದಾಗಲೂ, ನಾನು ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ತಿನ್ನುತ್ತಿದ್ದೆ." ಎಂದು ಕರೀನಾ ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ : ಆಪರೇಷನ್‌ ಬೇಡವೇ ಬೇಡ.. ನೋವಿಲ್ಲದೇ ಕಿಡ್ನಿ ಸ್ಟೋನ್‌ ಹೊರಹಾಕುತ್ತೆ ಈ ಅಪರೂಪದ ಎಲೆ! ಮನೆಯಂಗಳದಲ್ಲೇ ಸಿಗುವ ಪರಮೌಷಧವಿದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News