)
Kannada Specially Abled Actor: ಸ್ಯಾಂಡಲ್ವುಡ್ನಲ್ಲಿ ನಮ್ಮನ್ನು ನಗಿಸಿ, ರಂಜಿಸಿ, ಅಳಿಸಿ ಮರೆಯಾದ ನಟ- ನಟಿಯರು ಹಲವರಿದ್ದಾರೆ. ಹೀಗೆ ಕನ್ನಡ ಸಿನಿಮಾ ಕಂಡ ಅತ್ಯುತ್ತಮ ನಟರಲ್ಲಿ ನಟ ಬಾಲಣ್ಣ ಕೂಡ ಒಬ್ಬರು. ಆಗಿನ ಕಾಲದಲ್ಲಿ ಡಾ. ರಾಜ್ಕುಮಾರ್ ಸೇರಿ ಹಲವು ದಿಗ್ಗಜ ನಟರೊಂದಿಗೆ ಬಾಲಣ್ಣನವರು ಬಣ್ಣ ಹಚ್ಚಿದವರು, ತಮಗೆ ನೀಡಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ತಮ್ಮ ನಟನೆಯಿಂದ ಸೈ ಎನಿಸಿಕೊಂಡು ಅಭಿಮಾನಿಗಳ ಮನದಲ್ಲಿ ನೆಲೆಯೂರಿದವರು.
ನಟ ಬಾಲಯ್ಯ ಅವರು ಒಂದಲ್ಲ ಎರಡಲ್ಲ ಬರೋಬ್ಬರಿ 560ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಬೇಡಿಕೆ ಸೃಷ್ಟಿಸಿಕೊಂಡಿದ್ದ ಧೀಮಂತ ನಟ. ಬಹುಶಃ ಕರುಬಾಡಲ್ಲಿ ಇವರ ಪರಿಚಯ ಇಲ್ಲದವರು, ಇವರ ಸಿನಿಮಾವನ್ನು ನೋಡದವರು ಇರಲ್ಲಿಕ್ಕೂ ಸಾಧ್ಯವಿಲ್ಲ ಅಂತಾನೇ ಹೇಳಬಹುದು. ಹೀಗೆ ತಮ್ಮ ಸಿನಿಮಾಗಳ ಮೂಲಕ ಒಳ್ಳೆ ಹೆಸರು ಸಂಪಾದಿಸಿದ್ದ ಬಾಲಣ್ಣ ಕುರಿತದ ಒಂದು ಸತ್ಯ ಹಲವರಿಗೆ ತಿಳಿದಿಲ್ಲ. ಅಷ್ಟಕ್ಕೂ ಆ ಸತ್ಯ ಏನು? ಮುಂದೆ ಓದಿ
ನಟನೆ ಎಲ್ಲರ ಕೈ ಹಿಡಿಯುವುದಿಲ್ಲ. ಇದು ವಿಶೇಷವಾಗಿ ಕಲಾದೇವಿಯ ಆಶೀರ್ವಾದವಿದ್ದರೆ ಮಾತ್ರ ನಟನೆ ಒಲಿಯಲು ಸಾಧ್ಯ. ಸಿನಿಮಾ ಇಂಡಸ್ಟ್ರಿಗೆ ನಟಿಸಲು ಎಂದು ಹಲವರು ಬರುತ್ತಾರೆ. ಆದರೆ, ಎಲ್ಲರಿಂದಲೂ ನಟನೆಯಿಂದ ಗೆಲ್ಲಲ್ಲು ಸಾಧ್ಯವಾಗುವುದಿಲ್ಲ. ತಮಗೆ ನೀಡಿದ ಪಾತ್ರವನ್ನು ನಿಭಾಯಿಸಬೇಕು ಎಂದರೆ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ.
ಸಿನಿಮಾದಲ್ಲಿ ನಟಿಸಬೇಕು ಎಂದರೆ ಒಳ್ಳೆ ಲುಕ್ ಇರಬೇಕು, ಕಲೆ ಇರಬೇಕು ಜೊತೆಗೆ ಕಿವಿ ಕಣ್ಣು, ಮೂಗು ಎಲ್ಲವೂ ನೆಟ್ಟಗೆ ಇರಬೇಕು. ಆದರೆ, ನಟ ಬಾಲಣ್ಣ ಅವರಿಗೆ ಇವುಗಳಲ್ಲಿ ಒಂದು ಕೊರತೆ ಇತ್ತು. ಆದರೂ ಕೂಡ ತಮಗಿದ್ದ ಕೊರತೆಯನ್ನು ಎಂದಿಗೂ ತೋರಿಸಿಕೊಳ್ಳದೇ ಅವರು ತಮ್ಮ ಅಭಿನಯದಿಂದ ಭೇಷ್ ಎನಿಸಿಕೊಂಡಿದ್ದರು.
ಎರಡನೇ ತಾರೀಕು, 1911ರ ನವಂಬರ್ ನಲ್ಲಿ ಹಾಸನದ ಅರಸೀಕೆರೆಯಲ್ಲಿ ಜನಿಸಿದಂತಹ ಬಾಲಣ್ಣ ಅವರಿಗೆ ಅತೀ ಸಣ್ಣ ವಯಸ್ಸಿನಲ್ಲಿಯೇ ಆಕಾಶ ತಲೆ ಮೇಲೆ ಬಿದ್ದಿತ್ತು. ಪ್ರಪಂಚವನ್ನು ಅರಿತುಕೊಳ್ಳುವಷ್ಟರಲ್ಲಿ ಅವರ ಪೋಷಕರು ಇಹಲೋಕ ತ್ಯಜಿಸಿದ್ದರು. ಅದರಲ್ಲೂ ದುರದೃಷ್ಟಕರ ವಿಚಾರ ಏನಪ್ಪಾ ಅಂದ್ರೆ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಕಿವಿ ಕೇಳುತ್ತಿರಲಿಲ್ಲ.
ಸಣ್ಣ ವಯಸ್ಸಿನಲ್ಲಿಯೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಬಾಲಣ್ಣನವರು, ತಮ್ಮ ಸಂಬಂಧಿಕರ ಮನೆಯಲ್ಲಿ ಆಡುತ್ತಾ ಬೆಳೆದರು, ತಮಗಿದ್ದ ಕೊರತೆಯಂತೂ ತಮಗೆ ಎಂದಿಗೂ ಅಡ್ಡಿಯಾಗಲೇ ಇಲ್ಲ ಆದರೆ, ಓದುವ ಮನಸ್ಸು ಮಾಡದ ಅವರು, ನಾಟಕ ಕಂಪನಿಯ ಮುಂದೆ ಗೇಟು ಕಾಯುವ ಮೂಲಕ ಒಳಗೆ ಹೋಗುವ ಪ್ರವೇಶ ಪಡೆಯುತ್ತಾರೆ. ಪೋಸ್ಟರ್ ಅಂಟಿಸುತ್ತಾ, ಬೋರ್ಡ್ ಬರೆಯುತ್ತಾ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಕಲಾ ಶಕ್ತಿಯನ್ನು ಹೆಚ್ಚಿಸಿಕೊಂಡ ಅವರು ಕಿವಿ ಕೇಳಿಸದೆ ಇದ್ದರೂ ನೀಡಿದ ಪಾತ್ರಗಳನ್ನು ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಕಿವಿ ಕೇಳಿಸದೇ ಇದ್ದರೂ ಡೈಲಾಗ್ ಮಿಸ್ ಮಾಡದೇ ಅವರಿಗಿರುವ ಕೊರತೆಯನ್ನು ಎಂದಿಗೂ ಯಾರಿಗೂ ತೋರಿಸದೆ ಅದ್ಭುತದ ಕೆಲಗಾರನಾಗಿ ಹೊರಹೊಮ್ಮಿದ್ದರು.
ಊರಿನಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಪಾತ್ರದಲ್ಲಿ ಬಣ್ಣ ಹಚ್ಚುತ್ತಾ, ನಂತರ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಅವರು ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ತಮಗಿದ್ದ ಕಲೆಯಿಂದ ತಮ್ಮ ಕೊರತೆಯನ್ನು ಮರೆಮಾಚಿ ಅಭಿಮಾನಿಗಳ ಮನಸ್ಸಲ್ಲಿ ನೆಲೆಯೂರುತ್ತಾರೆ. ಹೀಗೆ ಕಿವಿ ಕೇಳಿಸಿಲ್ಲ ಅಂದರೂ ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚೆಹಾಕುತ್ತಾರೆ. ಹೀಗೆ 560 ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ