ಬಾಲಿವುಡ್ ಎಂದರೆ..ಒಂದು ರೀತಿ ವರ್ಣ ರಂಜಿತ ಜಗತ್ತು ಇದ್ದ ಹಾಗೆ, ಈ ಜಗತ್ತಿಗೆ ಪ್ರವೇಶಿಸಲು ನೂರಾರು ಕನಸುಗಳನ್ನು ಹೊತ್ತುಕೊಂಡು ಮುಂಬೈ ನಂತಹ ಮಾಯಾನಗರಿ ದಿನ ವಿಡಿ ಅದೆಷ್ಟೋ ಜನರು ಅವಕಾಶವನ್ನು ಅರಸಿ ಬರುತ್ತಾರೆ.ಆದರೆ ಈ ಜಗತ್ತಿನಲ್ಲಿ ಕಲರ್ ಫುಲ್ ಆಗಿದೆ ಎಂದ ಮಾತ್ರಕ್ಕೆ ಎಲ್ಲವೂ ಸರಿಯಾಗಿರುತ್ತೆ ಎನ್ನುವುದಲ್ಲ..ಇದರ ಹಿಂದೆ ಹಲವು ಹೋರಾಟದ, ಸಂಕಷ್ಟದ ಕಥನಗಳು ಇವೆ.ಈ ಸಂಕಷ್ಟಗಳು ಕೇವಲ ಜನ ಸಾಮಾನ್ಯರಿಗೆ ಸಂಬಂಧಿಸಿದಷ್ಟೇ ಅಲ್ಲದೆ ಸೆಲೆಬ್ರಿಟಿಗಳನ್ನು ಸಹ ಬಿಟ್ಟಿಲ್ಲ.ಹಾಗಾಗಿ ಇಂದು ನಾವು ಅಂತ ಸೆಲೆಬ್ರಿಟಿಯೊಬ್ಬರ ಕಥೆಯನ್ನು ಹೇಳುತ್ತೇವೆ..!
ಹನಿ ಇರಾನಿ ಎಂದರೆ ಬಹುಶಃ ಈಗಿನ ತಲೆ ಮಾರಿನ ವ್ಯಕ್ತಿಗಳಿಗೆ ಅಷ್ಟಾಗಿ ತಿಳಿಯುವುದಿಲ್ಲ, ಆದರೆ ಅದೇ ಫರಾನ್ ಅಖ್ತರ್ ಮತ್ತು ಜೊಯಾ ಅಖ್ತರ್ ಎಂದರೆ ಈಗಿನ ಯುವಕರಿಗೆ ತಕ್ಷಣ ತಿಳಿಯುತ್ತದೆ.ಹನಿ ಇರಾನಿ ಎಂದರೆ ಜೊಯಾ ಮತ್ತು ಫರಾನ್ ಅವರ ತಾಯಿ ಅಂದರೆ ಜಾವೇದ್ ಅಖ್ತರ್- ಹನಿ ಇರಾನಿ ದಂಪತಿಗೆ ಈ ಇಬ್ಬರು ಮಕ್ಕಳು ಜನಿಸಿದವರು.
ಹನಿ ಇರಾನಿ-ಜಾವೇದ್ ಲವ್ ಸ್ಟೋರಿ:
ಹನಿ ಇರಾನಿ ಮಹೇಶ್ ಕೌಲ್ ಅವರ ಪ್ಯಾರ್ ಕಿ ಪ್ಯಾಸ್ ನಂತಹ ಚಿತ್ರಗಳಲ್ಲಿ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಚಿರಾಗ್ ಕಹಾನ್ ರೋಶ್ನಿ ಕಹಾನ್ ಮತ್ತು ಬಾಂಬೆ ಕಾ ಚೋರ್ ಚಿತ್ರಗಳ ಚಿತ್ರೀಕರಣ ಪ್ರಾರಂಭವಾದಾಗ ಅವರಿಗೆ ಬಹುಶಃ ನಾಲ್ಕರಿಂದ ಐದು ವರ್ಷ ವಯಸ್ಸಾಗಿತ್ತು.ಹನಿ ಇರಾನಿ ಐದು ಜನ ಒಡಹುಟ್ಟಿದವರಲ್ಲಿ ಕಿರಿಯವಳು, ಇತರರು ಮೇನಕಾ, ಬನ್ನಿ, ಸರೋಶ್ ಮತ್ತು ಡೈಸಿ ಇರಾನಿ .ಇರಾನಿಯವರ ಹಿರಿಯ ಸಹೋದರಿ ಮೇನಕಾ, ಸಾಹಸ ನಿರ್ದೇಶಕ ಕಮ್ರಾನ್ ಖಾನ್ ಅವರನ್ನು ವಿವಾಹವಾದರು.
ಇನ್ನು ಜಾವೇದ್ ಅಖ್ತರ್ ಮತ್ತು ಹನಿ ಇರಾನಿ ಅವರ ಪರಿಚಯವಾಗಿದ್ದು ಸೀತಾ ಔರ್ ಗೀತಾ ಚಿತ್ರದ ಸೆಟ್ ಮೂಲಕ, ಇದರಲ್ಲಿ ಹನಿ ಇರಾನಿ ಹೇಮಾ ಮಾಲಿನಿಯ ಸೋದರಸಂಬಂಧಿಯಾಗಿ ನಟಿಸಿದ್ದರು.ತದನಂತರ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಮಾರ್ಚ್ 21, 1972 ರಂದು ವಿವಾಹವಾದರು.ಇದಾದ ನಂತರ ದಂಪತಿಗಳು 1972 ರಲ್ಲಿ ಜೊಯಾಗೆ ಜನ್ಮ ನೀಡಿದರೆ 1974 ರಲ್ಲಿ ಫರಾನ್ ಅಖ್ತರ್ ಗೆ ಜನ್ಮ ನೀಡಿದರು.ಆಗ ಚಿತ್ರ ಕಥೆಗಾರನಾಗಿದ್ದ ಜಾವೇದ್ ಅಖ್ತರ್ ಸಿನಿಮಾ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದರು. ಆಗ ಅವರಿಬ್ಬರಿಗೆ ವಾಸಿಸಲು ಸರಿಯಾದ ಮನೆ ಇರಲಿಲ್ಲ,ಇಂತಹ ಸಂದರ್ಭದಲ್ಲಿ ಅವರಿಗೆ ಇರಾನಿಯವರ ಸಹೋದರಿ ಮೇನಕಾ ಅವರ ಮನೆಯಲ್ಲಿ ಒಂದು ಕೊಠಡಿ ನೀಡಲಾಯಿತು.
ವಿಚ್ಛೇದನ:
ಇದೆ ವೇಳೆ ಮಧ್ಯಪಾನಕ್ಕೆ ಚಟಕ್ಕೆ ಬಿದ್ದು,ಮೊದಲ ಪತ್ನಿ ಹನಿ ಇರಾನಿಯೊಂದಿಗಿನ ಸಂಬಂಧವನ್ನು ಸಹ ಹಾಳುಮಾಡಿತು.ಹೀಗಾಗಿ ಅವರು 1978 ರಲ್ಲಿ ಪರಸ್ಪರ ಬೇರೆಯಾದರು.ಆಗಲೇ ಶಬನಾ ಅಜ್ಮಿ ಜೊತೆ ಸಂಬಂಧವನ್ನು ಹೊಂದಿದ್ದ ಜಾವೇದ್ ಅಂತಿಮವಾಗಿ 1984 ಅಲ್ಲಿ ಮದುವೆಯಾದರು.ಈ ಸಂದರ್ಭದಲಿ ಆರು ವರ್ಷದ ಜೊಯಾ ಹಾಗೂ ನಾಲ್ಕು ವರ್ಷದ ಫರಾನ್ ಅವರನ್ನು ನೋಡಿಕೊಳ್ಳಲು ಸಾಕಷ್ಟು ಶ್ರಮವಹಿಸಬೇಕಾಯಿತು.ಆಗ ಅವರು ತಮ್ಮ ಜೀವನ ನಡೆಸಲು ಸೀರೆಗಳ ಮೇಲೆ ಕಸೂತಿ ಹಾಕುವ ಕೆಲಸಕ್ಕೆ ಮುಂದಾದರು.ತದನಂತರ ಅವರು ಸಿನಿಮಾದಲ್ಲಿ ಸ್ಕ್ರೀಪ್ಟ್ ಗಳ ಬರಹಗಾರರಾಗಿ ತಮ್ಮ ವೃತ್ತಿ ಜೀವನವನ್ನು ಕಂಡುಕೊಂಡರು.ಆದರೆ ಇದೆಲ್ಲವನ್ನೂ ಒಬ್ಬಂಟಿಯಾಗಿ ನಿಭಾಯಿಸಿದ ಹನಿ ಇರಾನಿ ಮುಂದೆ ತಮ್ಮ ಇಬ್ಬರೂ ಮಕ್ಕಳು ಹಿಂದಿ ಚಲನಚಿತ್ರೋದ್ಯಮದಲ್ಲಿ ಯಶಸ್ವಿ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಬೆಳೆಸಿದರು.
ಇದೇ ವೇಳೆ ತಮ್ಮ ಮೊದಲ ಮದುವೆ ಮುರಿದು ಬಿದ್ದಿರುವ ಕುರಿತಾಗಿ ಮಾಧ್ಯಮಗಳ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಜಾವೇದ್ ಅಖ್ತರ್' ಆಗ ನಾನು ಬೇಜವಾಬ್ದಾರಿಯಿಂದ ಇದ್ದೆ. ಇದರ ಜೊತೆಗೆ ಆಗ ಮಧ್ಯದ ದಾಸನಾಗಿದ್ದು ಕೂಡ ಸಂಬಂಧವನ್ನು ಹಾಳು ಮಾಡಿತು' ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









