Actress Interesting facts : ಕೆಲವು ದಶಕಗಳ ಹಿಂದೆ, ಬಿಕಿನಿ ಧರಿಸುವುದಿರಲಿ ಅದರ ಹೆಸರನ್ನೂ ಸಹ ಹೆಣ್ಣು ಮಕ್ಕಳು ಹೇಳುವಂತಿರಲಿಲ್ಲ.. ಕಿವಿ ಕಂಡರೆ ಸೆರೆಗು ಸರಿಸಿಕೋ ಎನ್ನುತ್ತಿದ್ದರು.. ಕಾಲು ಕಾಣದಂತೆ ಸೀರೆ ಉಟ್ಟುಕೊಳ್ಳುತ್ತಿದ್ದರು. ಅಂತಹ ಕಾಲದಲ್ಲಿಯೇ ಬಿಕಿನಿ ತೊಟ್ಟು ತೆರೆ ಮೇಲೆ ಕಾಣಿಸಿಕೊಂಡು ದೇಶಾದ್ಯಂತ ಸಂಚಲನ ಮೂಡಿಸಿದ ನಟಿಯರಿದ್ದಾರೆ..
ಭಾರತೀಯ ಚಿತ್ರರಂಗದಲ್ಲಿ ವಾಕ್ಚಿತ್ರಗಳ ಮೊದಲ ದಶಕವಾದ 1938 ರಲ್ಲಿ, ಬ್ರಹ್ಮಚಾರಿ ಎಂಬ ಮರಾಠಿ ಚಲನಚಿತ್ರವು ಪರದೆಯ ಮೇಲೆ ಸ್ವೀಕಾರಾರ್ಹವೆಂದು ಪರಿಗಣಿಸಲಾದ ಮಿತಿಗಳನ್ನು ತಳ್ಳಿತು, ಆ ಚಿತ್ರದ ಪ್ರಮುಖ ನಟಿ ಈಜುಡುಗೆ ಧರಿಸಿದ್ದರು. ನಟಿ ಮೀನಾಕ್ಷಿ ಶಿರೋಡ್ಕರ್ ಈ ಸಿನಿಮಾದಲ್ಲಿ "ಯಮುನಾ ಜಲಿ ಖೇಲು ಖೇಲ್" ಎಂಬ ಹಾಡಿನಲ್ಲಿ ಕಾಣಿಸಿಕೊಂಡ ಬಗೆ ನೋಡಿ ಪ್ರೇಕ್ಷಕರು ಶಾಕ್ ಆಗಿದ್ದರು.
ಇದನ್ನೂ ಓದಿ:ಆ ಸಮಯದಲ್ಲಿ ನಾನು ಮದ್ಯಪಾನ ಮಾಡುತ್ತೇನೆ: ಮುಕ್ತವಾಗಿ ಮಾತನಾಡಿದ ಖ್ಯಾತ ನಟಿ
ಈ ಹಾಡಿನಲ್ಲಿ ಮೀನಾಕ್ಷಿ ಈಜುಡುಗೆ ಧರಿಸಿದ್ದರು. ಫಿಲ್ಮ್‌ಫೇರ್ ವರದಿಯ ಪ್ರಕಾರ, ಪ್ರೇಕ್ಷಕರು ಆ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದರು ಎನ್ನಲಾಗಿದೆ. ಹಿಂದಿ ಚಿತ್ರರಂಗದಲ್ಲಿ, ನಳಿನಿ ಜಯವಂತ್ ಬಿಕಿನಿ ಧರಿಸಿದ ಮೊದಲ ನಟಿಯಾದರು. ಅವರು 1950 ರ ಚಲನಚಿತ್ರ ಸಂಗ್ರಾಮ್‌ನಲ್ಲಿ ಈಜುಡುಗೆ ಧರಿಸಿದ್ದರು..
1916 ರಲ್ಲಿ ರತನ್ ಪೆಡ್ನೇಕರ್ ಮಗಳಾಗಿ ಮೀನಾಕ್ಷಿ ಅವರು ಜನಿಸಿದರು. 19ನೇ ವಯಸ್ಸಿನಲ್ಲಿ ಡಾ. ಶಿರೋಡ್ಕರ್ ಅವರನ್ನು ವಿವಾಹವಾದರು. ಮದುವೆಯ ನಂತರ ಮೀನಾಕ್ಷಿಯವರು ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬ್ರಹ್ಮಚಾರಿ ಅವರ ಚೊಚ್ಚಲ ಚಿತ್ರ.
ಇದನ್ನೂ ಓದಿ:ಸಿರೀಯಲ್‌ನಲ್ಲಿ ಅತ್ತೆ-ಅಳಿಯನಾಗಿ ನಟಿಸಿ ರಿಯಲ್ ಲೈಫ್‌ನಲ್ಲಿ ಗಂಡ ಹೆಂಡತಿಯಾದ ಸ್ಟಾರ್ ಸೆಲೆಬ್ರಿಟಿ ಜೋಡಿ!
ನಟಿ ಮೀನಾಕ್ಷಿಯವರಿಗೆ ಒಬ್ಬ ಮಗನಿದ್ದನು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಶಿಲ್ಪಾ ಮತ್ತು ನಮ್ರತಾ. ಶಿಲ್ಪಾ ಶಿರೋಡ್ಕರ್ ಸಹ ಒರ್ವ ಖ್ಯಾತ ನಟಿ. ನಮ್ರತಾ ಕೂಡ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು.. ಪ್ರಸ್ತುತ ಅವರು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









