)
ಬಹುನಿರೀಕ್ಷಿತ KD ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗಳ ನಡುವೆ ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲುಅನ್ನುವಂತೆ ಗೋಲ್ಡ್ಮೈನ್ಸ್ ಟೆಲಿಫಿಲ್ಮ್ಸ್ನ ಮನೀಶ್ ಶಾ ಹಾಗೂ ಧ್ರುವ ಸರ್ಜಾ ಒಂದೊಳ್ಳೆ ಕಥೆ ಮೂಲಕ ಒಂದಾಗಿದ್ದಾರೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇದೇ ತಿಂಗಳ 18ರಂದು ಅದ್ದೂರಿಯಾಗಿ ನೇರವೇರಲಿದ್ದು ಹಿಸ್ಟರಿ ಫಿಕ್ಸ್ ಅನ್ನುವ ರೀತಿ ಇದೆ.
ಇಷ್ಟೇ ಅಲ್ಲ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಮ್ಯಾಟರ್ ಧ್ರುವ ಸರ್ಜಾ ಅವರ 7 ನೇ ಸಿನಿಮಾ ಇದಾಗಿದ್ದು ಟೈಟಲ್ ಕೂಡ ಮುಹೂರ್ತದ ದಿನವೇ ಅನಾವರಣಗೊಳ್ಳಲಿದೆ.
ಇದೊಂದು ಗ್ರಾಮೀಣ ಹಿನ್ನೆಲೆಯ ಆಕ್ಷನ್ ಡ್ರಾಮಾವಾಗಿದೆ ಅಂತ ಹೇಳಲಾಗುತ್ತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಬಾರಿ ಅಳೆದುತೂಗಿ ಒಂದೊಳ್ಳೆ ಕಥೆ ಮತ್ತು ಟೀಮ್ ಮೂಲಕ ಸ್ಯಾಂಡಲ್ವುಡ್ ಅಷ್ಟೇ ಅಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಶೈನ್ ಆಗಲು ಸಕಲ ಸಿದ್ಧತೆಯನ್ನ ಮಾಡಿಕೊಂಡಿದ್ದಾರೆ.
ಇನ್ನೂ ಆಕ್ಷನ್ ಪ್ರಿನ್ಸ್ ಏಳನೇ ಸಿನಿಮಾಗೆ ಹೀರೋಯಿನ್ ಯಾರಪ್ಪ ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಾಗ ಒಂದು ಹೆಸರು ಜೋರಾಗಿ ಪಸರಿಸಿದೆ. ಅದುವೇ ಕೀರ್ತಿ ಸುರೇಶ್. ಕೀರ್ತಿ ಸುರೇಶ್ ಇಲ್ಲಿಯವರೆಗೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಇದುವೇ ಮೊದಲ ಸಿನಿಮಾ ಅಗುವ ಲಕ್ಷಣ ಕಂಡುಬರುತ್ತಿದೆ. ಒಟ್ಟಾರೆ ಜೀ ಕನ್ನಡ ನ್ಯೂಸ್ ಕಡೆಯಿಂದಲೂ ಆಕ್ಷನ್ ಪ್ರಿನ್ಸ್ ಮುಂದಿನ ಸಿನಿಮಾಗೆ ಆಲ್ ದಿ ಬೆಸ್ಟ್