ಮಂಗಳೂರಿನ ಕರಾವಳಿಯಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದು, ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಬಾಲ್ಯದಿಂದ ಇಲ್ಲಿಯವರೆಗಿನ ಸಾಧನೆಯ ಪಯಣವನ್ನು ನೆನಪಿಸಿಕೊಂಡು, ವಿಶೇಷ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಸಂತಸಗೊಂಡಿದ್ದು, ಶಿಲ್ಪಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಇದನ್ನೂ ಓದಿ: ಐಟಿ ಕ್ಷೇತ್ರದಿಂದ ಸಿನಿಮಾಕ್ಕೆ ಹಾರಿದ ಕಾಡ ನಟರಾಜ್ – ‘ಕರಿಕಾಡ’ ಚಿತ್ರ ಟೈಟಲ್ ಟೀಸರ್ ಬಿಡುಗಡೆ
ಕರ್ನಾಟಕದ ಕರಾವಳಿಯ ಮಂಗಳೂರಿನಲ್ಲಿ ಜನಿಸಿದ ಶಿಲ್ಪಾ ಶೆಟ್ಟಿ, ತಮ್ಮ ತವರಿನ ಮೇಲಿನ ಪ್ರೀತಿಯನ್ನು ಎಂದಿಗೂ ಕಳೆದುಕೊಂಡಿಲ್ಲ. ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಆಗಾಗ ಮಂಗಳೂರಿಗೆ ಭೇಟಿ ನೀಡಿ, ಇಲ್ಲಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ತಾಯ್ನಾಡಿನೊಂದಿಗಿನ ಒಡನಾಟವನ್ನು ಮುಂದುವರಿಸಿದ್ದಾರೆ. ಈ ಕಾರಣದಿಂದಲೇ ಕರ್ನಾಟಕದ ಅಭಿಮಾನಿಗಳಿಗೆ ಶಿಲ್ಪಾ ಶೆಟ್ಟಿಯವರೆಂದರೆ ವಿಶೇಷ ಅಭಿಮಾನ.
On Shilpa Shetty's 45th birthday, here's looking at some of her unseen childhood pics! - https://t.co/xidjarsPnF pic.twitter.com/ung7hRGN3s
— Ankita Sharma (@ankita_sharma23) June 7, 2020
ಬಾಲಿವುಡ್‌ನ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿರುವ ಶಿಲ್ಪಾ, ಕನ್ನಡ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಪ್ರೀತ್ಸೋದ್ ತಪ್ಪಾ’ ಮತ್ತು ‘ಒಂದಾಗೋಣ ಬಾ’ ಚಿತ್ರಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಯಾಗಿ, ಹಾಗೂ ‘ಆಟೋ ಶಂಕರ್’ ಚಿತ್ರದಲ್ಲಿ ರಿಯಲ್‌ಸ್ಟಾರ್ ಉಪೇಂದ್ರ ಜೊತೆಯಾಗಿ ಅವರು ತೆರೆ ಹಂಚಿಕೊಂಡಿದ್ದಾರೆ. ಇದೀಗ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದಲ್ಲಿ ಸತ್ಯವತಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ. ‘ಕೆಡಿ’ ಚಿತ್ರತಂಡವು ಶಿಲ್ಪಾ ಅವರ ಜನ್ಮದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದೆ.
ಇದನ್ನೂ ಓದಿ: ದಿನಭವಿಷ್ಯ 10-06-2025: ಮಂಗಳವಾರದಂದು ಅನುರಾಧಾ ನಕ್ಷತ್ರದಲ್ಲಿ ಸಿದ್ಧ ಯೋಗ, ಈ ರಾಶಿಯವರಿಗೆ ಇಷ್ಟಾರ್ಥಗಳು ಕೈಗೂಡುವ ಸಮಯ
49 ವರ್ಷದ ಈ ಸೂಪರ್‌ಸ್ಟಾರ್ ನಟಿ, ಫಿಟ್‌ನೆಸ್‌ನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಯೋಗ ಮತ್ತು ಆರೋಗ್ಯದ ಕಾಳಜಿಯಿಂದಾಗಿ ಇಂದಿಗೂ ಯುವತಿಯಂತೆ ಕಾಣುವ ಶಿಲ್ಪಾ, ಚಿತ್ರರಂಗದಲ್ಲಿ ತುಂಬಾ ಬೇಡಿಕೆಯಲ್ಲಿದ್ದಾರೆ. ಅವರ ಜನ್ಮದಿನದ ಸಂಭ್ರಮವನ್ನು ಆಚರಿಸುವ ಅಭಿಮಾನಿಗಳು, ಶಿಲ್ಪಾ ಶೆಟ್ಟಿಯವರ ಚಿತ್ರಯಾನ ಮುಂದೆಯೂ ಯಶಸ್ವಿಯಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









