Film Facts : ಅಣ್ರಾವ್ರನ್ನ ಬಿಟ್ಟು ಭಾರತೀಯ ಯಾವ ನಾಯಕ ನಟರಿಗೂ ಈ ಗೌರವ ಇಂದಿಗೂ ಸಂದಿಲ್ಲ..

ಭಾರತೀಯ ಸಿನಿರಂಗಕ್ಕೆ ಸ್ಯಾಂಡಲ್‌ವುಡ್‌ ಕೊಡುಗೆ ಅಪಾರ. ವರನಟ ಡಾ. ರಾಜ್‌ಕುಮಾರ್‌ ಅವರಿಗೆ ಸಂದ ಒಂದು ಪ್ರಶಸ್ತಿ ಅಂದಿನ ಕಾಲದಲ್ಲೇ ಇಂಡಿಯನ್‌ ಸಿನಿ ಇಂಡಸ್ಟ್ರಿಗೆ ಮುಕುಟಪ್ರಾಯವಾಯಿತು. ಇಂದಿಗೂ ಸಹ ಯಾವುದೇ ದಿಗ್ಗಜ ನಟರು ಈ ಅಪರೂಪದ ಗೌರವಕ್ಕೆ ಪಾತ್ರರಾಗಿಲ್ಲ. 

Written by - Krishna N K | Last Updated : Apr 24, 2025, 03:49 PM IST
    • ಭಾರತೀಯ ಸಿನಿರಂಗಕ್ಕೆ ಸ್ಯಾಂಡಲ್‌ವುಡ್‌ ಕೊಡುಗೆ ಅಪಾರ.
    • ಕನ್ನಡದ ರಾಜಣ್ಣಗೆ ಸಂದ ಆ ಗೌರವ ಮತ್ಯಾವ ಭಾರತೀಯ ಕಲಾವಿದರಿಗೂ ಸಲ್ಲಲಿಲ್ಲ.
    • ಕಲೆ ಆರಾಧನೆ ಮಾಡುತ್ತಲೇ ನಟನೆಯನ್ನೇ ಜೀವನವನ್ನಾಗಿಸಿಕೊಂಡಿದ್ದ ಮುತ್ತುರಾಜ್‌.
Film Facts : ಅಣ್ರಾವ್ರನ್ನ ಬಿಟ್ಟು ಭಾರತೀಯ ಯಾವ ನಾಯಕ ನಟರಿಗೂ ಈ ಗೌರವ ಇಂದಿಗೂ ಸಂದಿಲ್ಲ..

RajkumAr Kentucky Colonel award : ಆಸ್ಕರ್‌, ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ, ಸೈಮಾ ಹೀಗೆ ಇಂದು ಹಲವಾರು ಪ್ರಶಸ್ತಿಗಳು ಸಿನಿರಂಗದ ನಟರು, ನಟಿಯರು ಮತ್ತು ನಿರ್ದೇಶಕ, ತಂತ್ರಜ್ಞರು ಪಡೆಯುತ್ತಿರಬಹುದು. ಆದರೆ ಅಂದಿನ ಕಾಲದಲ್ಲೇ ಕನ್ನಡದ ರಾಜಣ್ಣಗೆ ಸಂದ ಗೌರವ ಮತ್ಯಾವ ಭಾರತೀಯ ಕಲಾವಿದರಿಗೂ ಸಲ್ಲಲಿಲ್ಲ.

Add Zee News as a Preferred Source

ಹೌದು.. 1985ರಲ್ಲಿ ಪ್ರತಿಷ್ಠಿತ ʼಕೆಂಟಕಿ ಕರ್ನಲ್ʼ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟ ಅಂದ್ರೆ, ಡಾ. ರಾಜಕುಮಾರ್. ʼಕೆಂಟಕಿ ಕರ್ನಲ್ʼ ಎಂಬುದು ಅಮೇರಿಕಾದ ಕೆಂಟಕಿ ಎಂಬ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಗೌರವ ಪ್ರಶಸ್ತಿ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆ, ಸಾಧನೆಗೈದಿರುವ ವ್ಯಕ್ತಿಗಳಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಇದನ್ನೂ ಓದಿ:ನಟಿ ಮಧುಬಾಲಾ ಅವರ ಪುತ್ರಿಯರನ್ನು ನೋಡಿದ್ದೀರಾ? ಸೌಂದರ್ಯದಲ್ಲಿ ತಾಯಿಯನ್ನೂ ಮೀರಿಸುತ್ತಾರೆ ಈ ಇಬ್ಬರು ಸುಂದರಿಯರು!

ಪ್ರಸಿದ್ಧ ವ್ಯಕ್ತಿಗಳು, ಕಲಾವಿದರು, ಬರಹಗಾರರು, ಕ್ರೀಡಾಪಟುಗಳು, ಪ್ರದರ್ಶಕರು, ಉದ್ಯಮಿಗಳು, ಅಮೆರಿಕಾ ಮತ್ತು ವಿದೇಶಿ ರಾಜಕಾರಣಿಗಳು ಮತ್ತು ವಿದೇಶಿ ರಾಜ ಕುಟುಂಬಗಳ ಸದಸ್ಯರನ್ನೂ ಒಳಗೊಂಡಂತೆ ಈ ಗೌರವವನ್ನು ವಿವಿಧ ಜನರಿಗೆ ನೀಡಲಾಗಿದೆ. ವಿಶೇಷ ಅಂದ್ರೆ, ಈ ಪ್ರತಿಷ್ಠಿತ ʼಕೆಂಟಕಿ ಕರ್ನಲ್ ಪ್ರಶಸ್ತಿʼ ಪಡೆದ ಏಕೈಕ ಭಾರತೀಯ ಅಂದ್ರೆ ನಮ್ಮ ಅಣಾವ್ರು. ಈ ವಿಚಾರ ಬರೀ ಕನ್ನಡಿಗರಿಗೇ ಅಷ್ಟೇ ಅಲ್ಲ, ಭಾರತಕ್ಕೆ ಹೆಮ್ಮೆ.

ಕಲೆ ಆರಾಧನೆ ಮಾಡುತ್ತಲೇ ನಟನೆಯನ್ನೇ ಜೀವನವನ್ನಾಗಿಸಿಕೊಂಡಿದ್ದ ಮುತ್ತುರಾಜ್‌, ಕನ್ನಡ ಮನಗಳಲ್ಲಿ ಇಂದಿಗೂ ಅಜರಾಮರ. ಅದ್ಬುತ ಪಾತ್ರಗಳ ಮೂಲಕ ಕನ್ನಡಾಭಿಮಾನದ ಜೊತೆಗೆ ಜೀವನಕ್ಕೆ ಸ್ಪೂರ್ತಿ ತುಂಬುತ್ತಿದ್ದ ದೃವತಾರೆ ನಮ್ಮ ನಟಸಾರ್ವಭೌಮರು. ಇಂದಿಗೂ ಅಣ್ಣಾವ್ರ ಹಾಡುಗಳು ಕೇಳಿದ್ರೆ ಮನಸ್ಸಿಗೆ ನೆಮ್ಮದಿ.. ಅದೇಷ್ಟೋ ನೋವುಗಳಿಗೆ ರಾಮಬಾಣ.. 

ಇದನ್ನೂ ಓದಿ:ನರೇಶ್‌ಗಾಗಿ ಪವಿತ್ರಾ ಸಿನಿಮಾ ಸೆಟ್‌ನಲ್ಲಿದ್ದರೂ ಮಿಸ್ ಮಾಡದೆ ಈ ಕೆಲಸ ಮಾಡ್ತಾರಂತೆ!

ಇದುವರೆಗು, ಕುಸ್ತಿಪಟು ಮುಹಮ್ಮದ್ ಅಲಿ, ಅಮೆರಿಕಾ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್ ಡಬ್ಲು ಬುಶ್, ಮಾಜಿ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್, ಮಾಜಿ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್, ನಟ ಜಾನಿ ಡೆಪ್, ನಟಿ ಜೆನ್ನಿಫ಼ರ್ ಲಾರೆನ್ಸ್, ಬೀಟಲ್ಸ್ ಗಾಯಕ ಜಾನ್ ಲೆನನ್, ಮಾಜಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್, ಸೇರಿದಂತೆ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರಿಗೆ ಮಾತ್ರ ಕೆಂಟಕಿ ಕರ್ನಲ್‌ ಪ್ರಶಸ್ತಿ ಲಭಿಸಿದೆ. ಇಂತಹವರ ಸಾಲಿನಲ್ಲಿ 9ನೇ ಸಾಲಿನಲ್ಲಿ ಡಾ. ರಾಜ್‌ಕುಮಾರ್‌ ಅವರು ಹೆಸರು ಕೇಳಿಬರುತ್ತದೆ.. ಇದಲ್ವಾ ಕನ್ನಡಿಗರೂ ಅಸಮಾನ್ಯರು ಎನ್ನುವುದಕ್ಕೆ ತಕ್ಕ ಉದಾರಹಣೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News