ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ `ಎಡ್ ಶೀರನ್ ಮ್ಯೂಜಿಕ್ ಕನ್ಸರ್ಟ್`..! ಟಿಕೆಟ್ ದರ, ಸಮಯ, ಬುಕ್ಕಿಂಗ್ ಡಿಟೈಲ್ಸ್ ಇಲ್ಲಿವೆ..
Ed Sheeran India tour 2025 : ಭಾರತದಲ್ಲಿ ಎಡ್ ಶೀರನ್ ಅವರ `+-=÷x` ಪ್ರವಾಸವು 2025 ರಲ್ಲಿ ಪ್ರಾರಂಭವಾಗಲಿದೆ. ಬೆಂಗಳೂರು, ಪುಣೆ, ದೆಹಲಿ ಸೇರಿದಂತೆ ಆರು ಭಾರತೀಯ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.. ಹಾಗಿದ್ರೆ ಇನ್ಯಾಕ ತಡ ಬನ್ನಿ ಟಿಕೆಟ್ ದರ, ಸಮಯ, ಬುಕ್ಕಿಂಗ್ ಮಾಡುವುದು ಹೇಗೆ ಅಂತ ತಿಳಿಯೋಣ..
Ed Sheeran tickets 2025 : ಗ್ಲೋಬಲ್ ಪಾಪ್ ಸ್ಟಾರ್ ಎಡ್ ಶೀರನ್ ಅವರ Ed Sheeran India tour 2025 ಅನ್ನು ಅಭಿಮಾನಿಗಳು ಹೆಚ್ಚು ನಿರೀಕ್ಷಿಸುತ್ತಿದ್ದರು. ಕೊನೆಗೂ ಕಾಯುವಿಕೆ ಅಂತ್ಯವಾಗಿದ್ದು, ಎಡ್ ದೆಹಲಿ ಸೇರಿದಂತೆ ದೇಶದ ಪ್ರಮುಖ 6 ನಗರಗಳಲ್ಲಿ '+-=÷x' ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಭೂತಾನ್‌ನಲ್ಲಿ ಪ್ರದರ್ಶನ ನೀಡಿದ "ಮೊದಲ ಅಂತರಾಷ್ಟ್ರೀಯ ಕಲಾವಿದ" ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಶೀರಾನ್ ಜನವರಿಯಲ್ಲಿ ಇತಿಹಾಸವನ್ನು ನಿರ್ಮಿಸಲಿದ್ದಾರೆ.
Ed Sheeran India tour 2025 tickets ಕನ್ಸರ್ಟ್ ಟಿಕೆಟ್‌ಗಳು ಸಾರ್ವಜನಿಕರಿಗೆ ಇಂದಿನಿಂದ ಅಂದ್ರೆ, ಡಿಸೆಂಬರ್ 11 ರಂದು ಸಂಜೆ 4 ರಿಂದ BookMyShow ನಲ್ಲಿ ಮಾರಾಟವಾಗಲಿವೆ. ಅಲ್ಲದೆ, ಡಿಸೆಂಬರ್ 9 ರಂದು ಪ್ರಾರಂಭವಾದ HSBC ಕಾರ್ಡ್ ರ್ಹೋಲ್ಡರ್‌ಗಳ ಪೂರ್ವ ಟಿಕೆಟ್ ಬುಕ್ಕಿಂಗ್ ಇಂದು ಕೊನೆಗೊಳ್ಳಲಿದೆ.
ಇದನ್ನೂ ಓದಿ: ಪತ್ರಕರ್ತರ ಮೇಲೆ ಹಿರಿಯ ನಟನಿಂದ ಹಲ್ಲೆ..! ಮೈಕ್‌ನಿಂದ ವರದಿಗಾರನ ತಲೆ ಓಡೆದ ಮೋಹನ್ ಬಾಬು..
2011 ರಿಂದ ಹಿಡಿದು 2023ರರವರೆಗಿನ ತಮ್ಮ ಎಲ್ಲಾ ಹಿಟ್ ಹಾಡುಗಳನ್ನು ಎಡ್ ಮ್ಯೂಜಿಕ್ ಕನ್ಸರ್ಟ್‌ನಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಜನವರಿ 30 ರಂದು ಹೈದರಾಬಾದ್ ನಿಂದ ಪ್ರಾರಂಭವಾಗುವ ಸಂಗೀತ ಕಚೇರಿ, ಚೆನ್ನೈ, ಬೆಂಗಳೂರು, ಶಿಲ್ಲಾಂಗ್ ಮತ್ತು ದೆಹಲಿ ನಂತರ ಪುಣೆಯಲ್ಲಿ ಪ್ರವಾಸ ಕೊನೆಗೊಳ್ಳುವುದು..
ಎಡ್ ಶೀರನ್ ಮ್ಯೂಜಿಕ್ ಕನ್ಸರ್ಟ್ ಸ್ಥಳ ಮತ್ತು ನಗರದ ಹೆಸರುಗಳು..
ಜನವರಿ 30: ಯಶ್ ಲಾನ್ಸ್, ಪುಣೆ
ಫೆಬ್ರವರಿ 2: ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್
ಫೆಬ್ರವರಿ 5: YMCA ಮೈದಾನ, ಚೆನ್ನೈ
ಫೆಬ್ರವರಿ 8: ನೈಸ್ ಮೈದಾನ, ಬೆಂಗಳೂರು
ಫೆಬ್ರವರಿ 12: ಜೆಎನ್ ಸ್ಟೇಡಿಯಂ, ಶಿಲ್ಲಾಂಗ್
ಫೆಬ್ರವರಿ 15: ಲೀಸರ್ ವ್ಯಾಲಿ ಗ್ರೌಂಡ್, ದೆಹಲಿ NCR
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.