)
Bollywood debut struggles: ಕಾಜೊಲ್ ದೇವಗನ್ ಬಾಲಿವುಡ್ನಲ್ಲಿ ಫೇಮಸ್ ನಟಿ. ಅವರು ತಮ್ಮ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ತಮ್ಮ ನೇರ ಮಾತು ಮತ್ತು ವ್ಯಂಗ್ಯ ತಮಾಷೆಗಳಿಂದಲೇ ಜನರ ಮನಸ್ಸು ಗೆದ್ದಿದ್ದಾರೆ. ಆದರೆ ನಟಿ ಇತ್ತೀಚೆಗೆ ತಮ್ಮ ಮೊದಲ ಸಿನಿಮಾದಲ್ಲಿ ಆದಂತಹ ಒಂದು ಸಂಗತಿಯ ಬಗ್ಗೆ ಹಂಚಿಕೊಂಡಿದ್ದಾರೆ. ಇದು ಅವರ ಮೊದಲ ಚಿತ್ರದಲ್ಲಿ ಆಗಿರುವ ಘಟನೆಯಾಗಿರುವುದರಿಂದ ಅದನ್ನು ಅವರು ಇಂದಿಗೂ ಮರೆತಿಲ್ಲ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರಿಗಾದ ಅನುಭವ ಏನಿರಬಹುದು..?
ಬಾಲಿವುಡ್ನ ನಿರ್ಭೀತ ನಟಿಯರಲ್ಲಿ ಒಬ್ಬಳಾದ ಕಾಜೊಲ್ಗೆ, ತನ್ನ ಮೊದಲ ಸಿನಿಮಾದಲ್ಲಿ ಸೆಟ್ನಲ್ಲಿ ನಡೆದ ಘಟನೆ ಮರೆಯಲಾಗದ ಅನುಭವವಾಗಿತ್ತು. ಕೇವಲ 16ರ ಹರೆಯದಲ್ಲಿ ಬೇಖುಡಿ (1992) ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾಗ, ಸಹನಟ ಕಮಲ್ ಸದನ ಅವರಿಗೆ ಕೆನ್ನೆಗೆ ಹೊಡೆಯುವ ಸಂದರ್ಭ ಎದುರಾಯಿತು.
ಆದರೆ ಕಾಜೊಲ್ಗೆ ಆ ದೃಶ್ಯದಲ್ಲಿ ನಟಿಸುವ ಧೈರ್ಯ ಬರಲಿಲ್ಲ. “ಯಾರನ್ನಾದರೂ ಹೊಡೆಯುವುದು ನನ್ನ ಸ್ವಭಾವಕ್ಕೆ ವಿರುದ್ಧ. ಕಮಲ್ ತುಂಬಾ ಒಳ್ಳೆಯ ವ್ಯಕ್ತಿ, ಅವರನ್ನು ನಾನು ಹೊಡೆಯಲು ಸಾಧ್ಯವಾಗಲಿಲ್ಲ” ಎಂದು ಅವರು ಇತ್ತೀಚೆಗೆ ನೀಡಿದ ಸಂದರ್ಶನದಕ್ಕಿ, ಬ್ರೂಟ್ ಇಂಡಿಯಾ ಜೊತೆಗಿನ ಸಂಭಾಷಣೆಯಲ್ಲಿ ಹಂಚಿಕೊಂಡರು.
ಮಾತು ಮುಂದುವರಿಸಿದ ಕಾಜೊಲ್ "ನಿರ್ದೇಶಕ ರಾಹುಲ್ ರಾವೈಲ್ ಹಲವಾರು ರೀಟೇಕ್ಗಳ ನಂತರ ತೀಕ್ಷ್ಣವಾಗಿ ಹೇಳಿದಾಗ ತಾನು ಕೋಪಗೊಂಡು ದೃಶ್ಯವನ್ನು ಪೂರ್ಣಗೊಳಿಸಿದ್ದೆ. ಆದರೆ ಶೂಟಿಂಗ್ ಮುಗಿದ ತಕ್ಷಣವೇ ಕಣ್ಣೀರು ಬಂದು ಕಮಲ್ ಅವರ ಬಳಿ ಕ್ಷಮೆಯಾಚಿಸಿದ್ದೆ ಎಂದು ಅವರು ನೆನಪಿಸಿಕೊಂಡರು.“ಅವನು ಅದಕ್ಕೆ ಅರ್ಹನಲ್ಲ, ನಾನು ಅವನಿಗೆ ಅನ್ಯಾಯ ಮಾಡಿದ್ದೆ ಎಂಬ ಭಾವನೆ ತುಂಬಾ ಆಳದಲ್ಲಿ ನನ್ನನ್ನು ಕಾಡಿತು” ಎಂದು ಕಾಜೊಲ್ ಹೇಳಿದರು.
ಪ್ರೇಕ್ಷಕರ ಪ್ರೀತಿ
ಪ್ರೇಕ್ಷಕರು ಸದಾ ತಮ್ಮನ್ನು ಬೆಂಬಲಿಸುತ್ತಿದ್ದಾರೆಂಬುದರ ಕುರಿತು ಮಾತನಾಡಿದ ಕಾಜೊಲ್, “ಜನರು ನಮ್ಮ ಬಗ್ಗೆ ಒಳ್ಳೆಯದು, ಕೆಟ್ಟದು ಎಲ್ಲವನ್ನೂ ಹೇಳುತ್ತಾರೆ. ಆದರೆ ನಾನು ಅದೃಷ್ಟಶಾಲಿ, ಏಕೆಂದರೆ 16ನೇ ವಯಸ್ಸಿನಿಂದಲೇ ಫೇಮಸ್ ಆದೆ” ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಹೊಸ ಧಾರಾವಾಹಿಗೆ ಸಜ್ಜಾಗಿರುವ ಕಾಜೊಲ್
ಈಗ ಕಾಜೊಲ್ ದಿ ಟ್ರಯಲ್ (Season 2) – ಪ್ಯಾರ್, ಕಾನೂನ್, ಧೋಖಾಗೆ ಸಜ್ಜಾಗುತ್ತಿದ್ದಾರೆ. ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗುತ್ತಿರುವ ಈ ಧಾರಾವಾಹಿಯಲ್ಲಿ, ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣದಲ್ಲಿ ಸಿಲುಕಿದ ಪತಿಯೊಂದಿಗೆ ಹದಗೆಡುತ್ತಿರುವ ಸಂಬಂಧವನ್ನು ಎದುರಿಸುತ್ತಾ, ವಕೀಲೆ ನೊಯೊನಿಕಾ ಸೇನ್ಗುಪ್ತಾ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.