)
actress Meera Mithun: ಸಿನಿಮಾರಂಗದಲ್ಲಿ ನಟ-ನಟಿಯರು ತಮ್ಮ ಟ್ಯಾಲೆಂಟ್ ಮತ್ತು ಸಿನಿಮಾಗಳ ಮೂಲಕ ಪ್ರಸಿದ್ದಿ ಪಡೆದಿರುತ್ತಾರೆ.. ಇದರಿಂದಲೇ ಅವರು ಹೆಚ್ಚಿನ ಅಭಿಮಾನಿಗಳನ್ನು ಗಳಿಸಿರುತ್ತಾರೆ. ಇನ್ನೂ ಕೆಲವರು ಕೇವಲ ತಮ್ಮ ಗ್ಲಾಮರ್ ನಿಂದಲೇ ಒಳ್ಳೆಯ ಕ್ರೇಜ್ ಪಡೆಯುತ್ತಾರೆ. ಇದೆಲ್ಲ ಒಂದು ಸಾಮಾನ್ಯ ವಿಷಯವಾದರೇ ಕೆಲವು ನಟಿಯರು ತಾವು ಮಾಡಿದ ಸಿನಿಮಾಗಳಿಗಿಂತ ಅವರ ವಿವಾದಗಳಿಂದಲೇ ಹೆಚ್ಚು ಜನಪ್ರಿಯರಾಗುತ್ತಾರೆ. ಅಂತವರು ಹಿಟ್ ಸಿನಿಮಾ ನೀಡದಿದ್ದರೂ ಬೇಕಾಬಿಟ್ಟಿ ವೀವಾದಗಳನ್ನು ಮಾಡಿ ಜನರ ಗಮನ ಸೆಳೆಯಲು ಬಯಸುತ್ತಾರೆ. ಅಂತಹವರಲ್ಲಿ ಈ ನಟಿಯೂ ಒಬ್ಬರು..
ಈ ನಾಯಕಿ ನೀಡಿದ ಆ ಒಂದು ಸೆನ್ಸೇಷನ್ ಹೇಳಿಕೆಯಿಂದ ಸತತವಾಗಿ ಮೂರು ವರ್ಷಗಳ ಕಾಲ ತಮ್ಮ ವೃತ್ತಿ ಜೀವನಕ್ಕೆ ಮಸಿ ಬಳಿದುಕೊಳ್ಳಬೇಕಾಯಿತು. ನಟಿಯ ಹುಚ್ಚಾಟ ಈಗ ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿಯಲ್ಲಿದೆ. ಇವರು ಮೂರು ವರ್ಷಗಳ ಕಾಲ ನಾಪತ್ತೆಯಾಗಿದ್ದು, ಈಗ ಇವರನ್ನು ಬಂಧಿಸಲು ನ್ಯಾಯಾಲಯ ಆದೇಶ ನೀಡಿದೆ, ಇದರ ಹಿಂದಿನ ಕಾರಣ ಇಲ್ಲಿದೆ.
ಈ ಖ್ಯಾತ ನಟಿ ಮತ್ಯಾರು ಅಲ್ಲ ಈಕೆ ತಮಿಳು ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಮಡಿದ್ದ ಮೀರಾ ಮಿಥುನ್.. ಇವರು ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಉತ್ತಮ ಕ್ರೇಜ್ ಗಳಿಸಿದ್ದಾರೆ. ಇವರಿಗಿದ್ದ ಟ್ಯಾಲೆಂಟ್ ಮೀರಾಳನ್ನು ಬಿಗ್ ಬಾಸ್ ಗೇಮ್ ಶೋನ ವರೆಗೂ ಕರೆದುಕೊಂಡು ಬಂತು ಆದರೆ ಈ ಅದೃಷ್ಟವೇ ಈ ನಟಿಗೆ ದುರಾದೃಷ್ಟವಾಗಿ ಪರಿಣಮಿಸಿತು.. 2021 ರಲ್ಲಿ ಮೀರಾ ಪರಿಶಿಷ್ಟ ಜಾತಿಯ ನಿರ್ದೇಶಕರು ಮತ್ತು ನಿರ್ಮಾಪಕರ ಬಗ್ಗೆ ನೀಡಿದ ಅನುಚಿತ ಕಾಮೆಂಟ್ಗಳು ತೀವ್ರ ಟೀಕೆಗೆ ಕಾರಣವಾಯಿತು. ಈ ಕಾಮೆಂಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಅವರ ವಿರುದ್ಧ ಹಲವಾರು ದೂರುಗಳು ದಾಖಲಾಗಿದ್ದು, ಪೊಲೀಸರು ಅವರನ್ನು ಬಂಧಿಸಿದರು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಇದಷ್ಟೇ ಅಲ್ಲ 2020 ರಲ್ಲಿಯೂ ಸಹ ಮೀರಾ ಮಿಥುನ್ ಬಗ್ಗೆ ವಿವಾದಗಳು ಹುಟ್ಟಿಕೊಂಡಿದ್ದು, ಅವರ ವಿರುದ್ಧ ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಆದರೆ, ಪ್ರಕರಣದ ವಿಚಾರಣೆಗೆ ಅವರು ಹಾಜರಾಗದಿದ್ದಾಗ ನ್ಯಾಯಾಲಯವು ಈ ಬಗ್ಗೆ ಗಂಭೀರವಾಗಿದ್ದು, ಅವರನ್ನು ಬಂಧಿಸಲು ಆದೇಶಿಸಿದೆ. ಮೀರಾ ಮಿಥುನ್ ಅವರ ತಾಯಿ ತಮ್ಮ ಮಗಳನ್ನು ರಕ್ಷಿಸಲು ಅರ್ಜಿ ಸಲ್ಲಿಸಿದರು. ಆದರೆ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಮೀರಾ ಅವರನ್ನು ಬಂಧಿಸಲು ನ್ಯಾಯಾಲಯ ಆದೇಶಿಸಿತು. ಅವರು ದೆಹಲಿಯಲ್ಲಿದ್ದಾರೆ ಎಂಬ ಮಾಹಿತಿ ಪಡೆದ ನಂತರ, ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಮನೆಗೆ ಕಳುಹಿಸಿದರು. ಈ ತಿಂಗಳ 11 ರಂದು ಅವರನ್ನು ಚೆನ್ನೈ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕೆಂದು ನ್ಯಾಯಾಲಯ ತಿಳಿಸಿದೆ.