Actress Ramya Sri: ನಟಿ ರಮ್ಯಾ ಶ್ರೀ ತಮ್ಮ ಹಾಟ್ ಬ್ಯೂಟಿಯ ಮೂಲಕ ಸಖತ್ ಹೆಸರು ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಈ ನಟಿ 250ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ನಟಿಯಾಗಿ ವೃತ್ತಿಜೀವನ ಆರಂಭಿಸಿದ ರಮ್ಯಾ ನಂತರ ಪಾತ್ರ ಕಲಾವಿದೆಯಾಗಿ ಪ್ರೇಕ್ಷಕರನ್ನು ರಂಜಿಸಿದರು. ಎಲ್ಲಕ್ಕಿಂತಲೂ ಮುಖ್ಯವಾಗಿ ರಮ್ಯಾಶ್ರೀ ಅವರು ತಮ್ಮ ಬೋಲ್ಡ್ ಮತ್ತು ಬಿ-ಗ್ರೇಡ್ ಪಾತ್ರಗಳಿಂದ ಗಮನ ಸೆಳೆದಿದ್ದಾರೆ.
ಈ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ವಿಷಯಗಳನ್ನ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಮೂಡಿಸುತ್ತಿವೆ. ಅಷ್ಟಕ್ಕೂ ರಮ್ಯಾ ಶ್ರೀ ಅವರ ನಿಜವಾದ ಹೆಸರು ಸುಜಾತ. ಚಿತ್ರರಂಗಕ್ಕೆ ಬಂದ ನಂತರ ಅವರು ತಮ್ಮ ಹೆಸರನ್ನು ರಮ್ಯಾ ಶ್ರೀ ಎಂದು ಬದಲಾಯಿಸಿಕೊಂಡರು.
ಇದನ್ನೂ ಓದಿ: Amala Paul: ಪುತ್ರನಿಗೆ ಕ್ರೈಸ್ತ ಧರ್ಮಕ್ಕೆ ದೀಕ್ಷೆ ಕೊಡಿಸಿದ ನಟಿ ಅಮಲಾ ಪೌಲ್
ರಮ್ಯಾ ಶ್ರೀ ತೆಲುಗು ಹುಡುಗಿಯಾಗಿದ್ದರೂ ಮೊದಲು ನಟಿಸಿದ್ದು ಕನ್ನಡ ಚಿತ್ರರಂಗದಲ್ಲಿ. ಅವರು ಕಾಲಿವುಡ್‌ನಲ್ಲಿ ಸುಮಾರು 30 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕಿಯಾಗಿ ಸರಿಯಾದ ಅವಕಾಶಗಳು ಸಿಗದ ಕಾರಣ ಅವರು ಪಾತ್ರ ಕಲಾವಿದೆಯಾದರು. ಈ ಹಾಟ್ ಬ್ಯೂಟಿ ಹೆಚ್ಚಾಗಿ ಪ್ರಣಯ ಪಾತ್ರಗಳಲ್ಲೇ ನಟಿಸಿದ್ದಕ್ಕೆ ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದಾರೆ.
ನಟನೆಯ ಹೊರತಾಗಿ ಚಿತ್ರಕಥೆ ಬರೆಯುವುದು ಮತ್ತು ನಿರ್ದೇಶನದಲ್ಲಿಯೂ ಅವರಿಗೆ ಅನುಭವವಿದೆ. ನಟನೆ ಮತ್ತು ನಿರ್ದೇಶನಕ್ಕಾಗಿ ಈ ನಟಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಸದ್ಯದ ದಿನಗಳಲ್ಲಿ ನಟಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ. ʼಸುಮಾರು ಎರಡು ದಶಕಗಳಿಂದ ತಮ್ಮ ವೃತ್ತಿಜೀವನದಲ್ಲಿ ಯಾವುದೇ ರೀತಿಯ ಕೆಟ್ಟ ಪರಿಸ್ಥಿತಿಯನ್ನ ನಾನು ಎದುರಿಸಿಲ್ಲ.. ಆದರೆ ಉದ್ಯಮದ ಆರಂಭಿಕ ವರ್ಷಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವವಾಗಿದೆʼ ಎಂದು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೊನೆಗೂ ಕೂಡಿಬಂತು ಕಂಕಣಭಾಗ್ಯ...'ಉಗ್ರಂ' ಮಂಜು ಮದುವೆ! ಭಾವೀ ಪತ್ನಿ ಬಗ್ಗೆ ಮಾತನಾಡಿದ ನಟ... ಹೇಗಿದ್ದಾರೆ ಗೊತ್ತಾ?
ಚಿತ್ರರಂಗದಲ್ಲಿ ಆಫರ್ ನೀಡುವವರು ಹಾಗೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ.. ಒಬ್ಬ ತಾಯಿ ಸಹ ಕೇಳದೆ ಊಟ ಕೊಡುವುದಿಲ್ಲ ಅಲ್ಲವೇ? ಅದೇ ರೀತಿ ಇದು ಕೂಡ.. ಕೆಲವೊಮ್ಮೆ ಅಂತಹ ಪ್ರಸ್ತಾಪಗಳು ಆಕರ್ಷಕ ಎನಿಸಬಹುದು. ಆದರೆ ಅಂತಹ ಕೆಲಸ ಮಾಡಲು ಕೆಲವರು ಧೈರ್ಯ ಮಾಡುವುದಿಲ್ಲ. ನಾವು ಉದ್ಯಮದಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಹೀಗಾಗಿ ಈ ರೀತಿಯ ವಿಷಯಗಳು ಸಾಮಾನ್ಯವೆಂಬಂತೆ ನಡೆಯುತ್ತವೆ ಎಂದು ನಟಿ ಹೇಳಿದ್ದಾರೆ.
ನಿಮ್ಮ ಮೇಲೆ ಏನಾದರೂ ಅತ್ಯಾಚಾರ ನಡೆದರೆ ಧೈರ್ಯವಾಗಿ ಪೊಲೀಸರಿಗೆ ತಿಳಿಸಿ. ಅಸಭ್ಯವಾಗಿ ವರ್ತಿಸಿದರೆ ಪೊಲೀಸರಿಗೆ ದೂರು ನೀಡಿ.. ಕೆಲವರು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಮಂಚ ಹತ್ತುತ್ತಾರೆ. ಅದು ತಪ್ಪೇನಲ್ಲ, ಆದರೆ ಬಲವಂತದಿಂದ ಯಾವುದೂ ಆಗಬಾರದು. ಪ್ರತಿಯೊಬ್ಬರಿಗೂ ಇದರ ಬಗ್ಗೆ ಪ್ರತಿಭಟಿಸುವ ಹಕ್ಕಿರುತ್ತದೆ. ಹೀಗಾಗಿ ಧೈರ್ಯವಾಗಿಯೇ ಎಲ್ಲವನ್ನೂ ಎದುರಿಸಬೇಕೆಂದು ರಮ್ಯಾ ಶ್ರೀ ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









