)
Actress Tripti Sahu: ಅನೇಕ ನಟ ನಟಿಯರು ಸುಂದರವಾಗಿ ಕಾಣುವ ಹಂಬಲದಿಂದ ವಿವಿಧ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಫಿಲ್ಲರ್ಗಳು, ಬೊಟಾಕ್ಸ್ನಂತಹ ಚಿಕಿತ್ಸೆಗಳನ್ನು ಪಡೆಯುವುದು ಈಗ ಸಾಮಾನ್ಯವಾಗಿದೆ. ಇದೀಗ ನಟಿಯೊಬ್ಬರು ಕೆಲವು ನಟಿಯರು ಸೌಂದರ್ಯ ಹೆಚ್ಚಲು ಇಂಜೆಕ್ಷನ್ ಪಡೆಯುತ್ತಾರೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಜನಪ್ರಿಯ ವೆಬ್ ಸರಣಿ 'ಪಂಚಾಯತ್' ನಲ್ಲಿ ಕಾಣಿಸಿಕೊಂಡ ನಟಿ ತೃಪ್ತಿ ಸಾಹು, ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. 'ಡಿಜಿಟಲ್ ಕಾಮೆಂಟರಿ'ಗೆ ನೀಡಿದ ಸಂದರ್ಶನದಲ್ಲಿ, ಇತ್ತೀಚಿನ ದಿನಗಳಲ್ಲಿ ನಟಿಯರು ಇದ್ದಕ್ಕಿದ್ದಂತೆ ಬಿಳಿಯಾಗಿ ಕಾಣಲು ಕಾರಣವೇನು ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿದೆ.
ಇದಕ್ಕೆ ಉತ್ತರಿಸಿದ ನಟಿ ತೃಪ್ತಿ, "ಬೆಳ್ಳಗಾಗಲು ಕಾಣಲು ಇದನ್ನು ಮಾಡಿ, ಅದನ್ನು ಮಾಡಿ.. ಎಂದು ನನಗೆ ಅನೇಕ ಜನರಿಂದ ಸಲಹೆ ಸಿಕ್ಕಿತು. 2018ರಲ್ಲಿ ನನಗೆ ತಿಳಿದಿರುವ ಒಬ್ಬ ವ್ಯಕ್ತಿ, ಈ ಇಂಜೆಕ್ಷನ್ ನನ್ನಿಂದ ತೆಗೆದುಕೊಳ್ಳಿ. ಇದನ್ನು 25 ಸಾವಿರ ಜನರಿಗೆ ನೀಡುತ್ತಿದ್ದೇನೆ. ನಿಮಗೆ ಇದರಿಂದ ಯಾವುದೇ ಮೋಸ ಆಗುವುದಿಲ್ಲ. ನೀವು ಬೆಳ್ಳಗೆ ಕಾಣುತ್ತೀರಿ ಎಂದರು. ಆಗ ಅವರಿಗೆ ನಾನು ಬಿಳಿಯಾಗಲು ಏಕೆ ಬಯಸಬೇಕು? ನನಗೆ ಅದು ಬೇಡ ಎಂದಿದ್ದೆ. ಅದಕ್ಕೆ ಅವರು ಈಗ ಎಲ್ಲ ಹುಡುಗಿಯರು ಈ ಇಂಜೆಕ್ಷನ್ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಆದರೂ ನನಗೆ ಅದು ಬೇಡ ಎಂದು ನಿರಾಕರಿಸಿದ್ದೆ" ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
"ನಾನು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ, ಅಲ್ಲಿನ ಸಹ ನಟಿಯೊಬ್ಬರು ಆಕೆ ಬೆಳ್ಳಗಾಗಲು ವೈದ್ಯರು ಔಷಧಿ ನೀಡಿದ್ದಾರೆ ಎಂದು ಹೇಳಿದ್ದರು. ಟಿವಿ ಉದ್ಯಮದಲ್ಲಿರುವ ಜನರು ಸಹ ಬಿಳಿಯಾಗಬೇಕೆಂದು ಬಯಸುತ್ತಿದ್ದಾರೆ. ಬಿಳಿಯಾಗಿ ಕಂಡರೆ ನಮಗೆ ಕೆಲಸ ಸಿಗುತ್ತದೆ ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಆದ್ದರಿಂದ ಬೆಳ್ಳಗಾಗಲು ನಟಿಯರು ಚಿಕಿತ್ಸೆ, ಇಂಜೆಕ್ಷನ್ ಪಡೆಯುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಜನರು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುತ್ತಾರೆ, ಮೂಗಿನ ಆಕಾರವನ್ನು ಬದಲಾಯಿಸುತ್ತಾರೆ. ಆದರೆ ನೀವು ಇದನ್ನು ಒಪ್ಪಿಕೊಳ್ಳುವವರೆಗೆ, ಅಭದ್ರತೆ ದೂರವಾಗುವುದಿಲ್ಲ" ಎಂದು ತೃಪ್ತಿ ಸಾಹು ಹೇಳಿದರು.
ಪಂಚಾಯತ್ ವೆಬ್ ಸರಣಿ ಮೂಲಕ ತೃಪ್ತಿ ಫೇಮಸ್ ಆದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.