ನಟಿ ಶ್ರದ್ಧಾ ಆರ್ಯ ಕನ್ನಡದಲ್ಲಿ ಮದುವೆ ಮನೆ ಮತ್ತು ಡಬಲ್ ಡೆಕ್ಕರ್ ಮನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿ ಶ್ರದ್ಧಾ ಆರ್ಯ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ತಾಯ್ತನವನ್ನ ಎಂಜಾಯ್ ಮಾಡುತ್ತಿರುವ ನಟಿ ಶ್ರದ್ಧಾ ಅವರ ಒಂದು ಹೇಳಿಕೆ ಈಗ ಫ್ಯಾನ್ಸ್ ಅಚ್ಚರಿಗೆ ಕಾರಣವಾಗಿದೆ.
ಕಳೆದ ನವೆಂಬರ್ ತಿಂಗಳಲ್ಲಿ ನಟಿ ಶ್ರದ್ಧಾ ಆರ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದೀಗ ಶ್ರದ್ಧಾ ಆರ್ಯ ಒಂದು ರೀಲ್ಸ್ ಮಾಡಿದ್ದಾರೆ. ಮಗುವನ್ನು ನೋಡಿಕೊಳ್ಳುವ ಪ್ರತಿಯೊಂದು ಅಮ್ಮನ ಕಷ್ಟಗಳನ್ನು ಈ ಮೂಲಕ ವಿವರಿಸಿದ್ದಾರೆ.
ಕಳೆದ ವರ್ಷ ನಟಿ ಶ್ರದ್ಧಾ ಆರ್ಯ ನೀಡಿದ್ದ ಒಂದು ಹೇಳಿಕೆಯಿಂದ ಅಭಿಮಾನಿಗಳು ಕಂಗಾಲಾಗಿದ್ದರು. ಈಗ ನನಗೆ 35 ವರ್ಷ ವಯಸ್ಸು. ನಾನು 10 ಬಾರಿ ಮದುವೆಯಾಗಿದ್ದೇನೆ ಎಂದು ನಟಿ ಶ್ರದ್ಧಾ ಆರ್ಯ ಹೇಳಿದ್ದರು. ಈ ಹೇಳಿಕೆ ಕೇಳಿ ಫ್ಯಾನ್ಸ್ ಬೆಚ್ಚಿಬಿದ್ದಿದ್ದರು.
ಇದನ್ನೂ ಓದಿ: ಜೆನಿಲಿಯಾ ಕಾರು ಅಪಘಾತ ಜಸ್ಟ್ ಮಿಸ್.. ಕೂದಲೆಳೆ ಅಂತರದಲ್ಲಿ ತಪ್ಪಿತು ದುರಂತ !
ವಧುವಿನ ಗೆಟಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಶ್ರದ್ಧಾ, ಈ ರೀತಿ ಹೇಳಿದ್ದರು. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆದರೆ ಕೊನೆಗೆ ಅವರು ತಮ್ಮ ಮಾತಿನ ಅರ್ಥ ಹೇಳಿದ್ದರು. ಶ್ರದ್ಧಾ ಆರ್ಯ 10 ಬಾರಿ ಮದುವೆಯಾಗಿದ್ದೇನೆ ಎಂದಿದ್ದು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ.
ನಟಿ ಶ್ರದ್ಧಾ ಆರ್ಯ 2021ರಲ್ಲಿ ನೌಕಾಪಡೆಯ ಅಧಿಕಾರಿಯಾಗಿರುವ ರಾಹುಲ್ ನಾಗಲ್ ಅವರನ್ನು ಮದುವೆ ಆಗಿದ್ದಾರೆ. ಆದರೆ ಶ್ರದ್ಧಾಗೆ ಖ್ಯಾತಿ ಕೊಟ್ಟ ಏಕ್ತಾ ಕಪೂರ್ 'ಕುಂಡಲಿ ಭಾಗ್ಯ' ಟಿವಿ ಸೀರಿಯಲ್‌ನ ವಧುವಿನ ಪಾತ್ರದ ಫೋಟೋ ಹಾಕಿ ಈ ರೀತಿ ತಮಾಷೆ ಮಾಡಿದ್ದರು. ಇದು ನನ್ನ 10ನೇ ಮದುವೆ ಎಂದು ಹೇಳಿದ್ದರು.
2011ರಲ್ಲಿ ಬಿಡುಗಡೆಯಾದ ಕನ್ನಡದ ಮದುವೆ ಮನೆ ಮತ್ತು ಡಬಲ್ ಡೆಕ್ಕರ್ ಮನೆ ಸಿನಿಮಾಗಳಲ್ಲಿ ನಟಿ ಶ್ರದ್ಧಾ ನಟಿಸಿದ್ದಾರೆ. ಸ್ಯಾಂಡಲ್‌ವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಹಾಗೂ ಪಂಜಾಬಿ ಚಿತ್ರಗಳಲ್ಲಿಯೂ ನಟಿಸಿದ ಬಹು ಭಾಷಾ ನಟಿ ಶ್ರದ್ಧಾ .
ಶ್... ಫಿರ್ ಕೋಯಿ ಹೈ, ಮೈ ಲಕ್ಷ್ಮಿ ತೇರೆ ಆಂಗನ್ ಕೀ, ತುಮ್ಹಾರಿ ಪಾಖಿ, ಡ್ರೀಮ್ ಗರ್ಲ್, ಮಜಾಕ್ ಮಜಾಕ್ ಮೆ, ಕಸಮ್ ತೇರೆ ಪ್ಯಾರ್ ಕೀ ಸ್ವಾತಿ ಬೋರಾ, ಕುಂಕುಮ್ ಭಾಗ್ಯ, ನಚ್ ಬಲಿಯೆ ಸೀರಿಯಲ್‌ಗಳು ಶ್ರದ್ಧಾಗೆ ಖ್ಯಾತಿ ತಂದು ಕೊಟ್ಟಿವೆ. ಶ್ರದ್ಧಾ ಸದ್ಯ ಕುಂಡಲಿ ಭಾಗ್ಯದಲ್ಲಿ ಡಾ.ಪ್ರೀತಾ ಅರೋರಾ ಆಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಮದುವೆಯಾಗದೆ ವಿಧವೆಯಾಗಿ ಬದುಕಿದ ಖ್ಯಾತ ನಟಿ ಈಕೆ !
ನೌಕಾಪಡೆಯ ಅಧಿಕಾರಿಯಾಗಿರುವ ರಾಹುಲ್ ನಾಗಲ್ ಅವರನ್ನು ಮದುವೆಯಾಗಿರುವ ಶ್ರದ್ಧಾ, ಅವಳಿ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ನಟಿ ಶ್ರದ್ಧಾ ಆರ್ಯ 1987ರ ಆಗಸ್ಟ್ 17ರಂದು ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಇವರು 2005 ರಿಂದ ನಟನೆ ಆರಂಭಿಸಿದರು.
ನಟಿ ಶ್ರದ್ಧಾ ಆರ್ಯ ಗಣೇಶ್ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ನಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ನಟಿ ಶ್ರದ್ಧಾ ಆರ್ಯ ಈ ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ. ಆ ಚಿತ್ರದಲ್ಲಿ ಯಾಮಿ ಗೌತಮ್ ಅವರನ್ನು ಹಾಕಿಕೊಳ್ಳಲಾಯೊತು. ಕೊನೆಗೆ ಗಣೇಶ್ ಜೊತೆ 'ಮದುವೆ ಮನೆ'ಯಲ್ಲಿ ನಟಿ ಶ್ರದ್ಧಾ ಆರ್ಯ ನಟಿಸಿದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









