)
Karate Kalyani health : ಒಂದು ಕಾಲದಲ್ಲಿ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದ ಕೆಲ ನಟ-ನಟಿಯರು ಇಂದು ಕಾಣಿಸಿಕೊಳ್ಳುತ್ತಿಲ್ಲ. ಕಾಲ ಕಳೆದಂತೆ ಅಭಿಮಾನಿಗಳು ಸಹ ಅವರನ್ನು ಮರೆಯುತ್ತಿದ್ದಾರೆ.. ಹೊಸ ತಾರೆಯರ ಆಗಮನದಿಂದ ಹಿರಿಯ ಕಲಾವಿದರು ಕಣ್ಮರೆಯಾಗುತ್ತಿದ್ದಾರೆ.. ಈ ಪೈಕಿ ಈ ನಟಿಯೂ ಒಬ್ಬರು.
ಹೌದು.. ನಟಿ ಕರಾಟೆ ಕಲ್ಯಾಣಿ.. ಒಂದು ಕಾಲದಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದರು. ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಇದೀಗ ಆಸ್ಪತ್ರೆಯ ಬೆಡ್ ಮೇಲೆ ಗುರುತೇ ಸಿಗದಂತೆ ಮಲಗಿದ್ದಾರೆ. ಒಂದು ಕಾಲದಲ್ಲಿ ಅನೇಕ ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
1978 ರಲ್ಲಿ ಜನಿಸಿದ ಕಲ್ಯಾಣಿ ಅವರು, ಜಯವಾಹಿನಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಸೌಂದರ್ಯ ನಟಿಸಿದ "ಶ್ವೇತಾ ನಾಗು" ಚಿತ್ರದಲ್ಲಿ ವಾಸುಕಿ ಪಾತ್ರದ ಮೂಲಕ ಪ್ರಸಿದ್ಧರಾದರು. ಕಳೆದ ವರ್ಷ ಬಹಿರ್ಭೂಮಿ ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.. ಆದಾದ ನಂತರ ದಿಢೀರನೇ ಕಾಣೆಯಾಗಿದ್ದರು.
ಇನ್ನು ಇತ್ತೀಚಿಗೆ ನಟಿ ಕರಾಟೆ ಕಲ್ಯಾಣಿ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಹರಿದಾಡಿತ್ತು. ನಟಿಯ ಸ್ಥಿತಿ ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದರು. ಏನಾಯ್ತು ಅಂತ ಕಳವಳ ವ್ಯಕ್ತಪಡಿಸಿದ್ದರು.. ತದನಂತರ ಕಲ್ಯಾಣಿ ಅವರು ಕಳೆದ ಕೆಲವು ತಿಂಗಳುಗಳಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂತು.
ಪ್ರಸ್ತುತ ಅವರ ಸ್ಥಿತಿ ತುಂಬಾ ಗಂಭೀರವಾಗಿದ್ದು, ಬಹು ಅಂಗಾಂಗ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರ ಚಿಕಿತ್ಸೆ, ಕೀಮೋಥೆರಪಿ, ಶಸ್ತ್ರಚಿಕಿತ್ಸೆ ಮತ್ತು ಐಸಿಯು ಆರೈಕೆಗಾಗಿ ವೈದ್ಯರು ₹25 ಲಕ್ಷದಿಂದ ₹35 ಲಕ್ಷ ಖರ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಇದೀಗ ಅರ್ಥಿಕ ಸ್ಥಿತಿ ಹೀನಾಯವಾಗಿದ್ದು, ಕರಾಟೆ ಕಲ್ಯಾಣಿಯವರು ಸಹಾಯ ಕೇಳುತ್ತಾ ಪೋಸ್ಟ್ ಮಾಡಿದ್ದಾರೆ.