)
actress Ramyasri attack case: ಜೂನ್ 17, ಮಂಗಳವಾರ ಹೈದರಾಬಾದ್ನ ಎಫ್ಸಿಐ ಕಾಲೋನಿ ಲೇಔಟ್ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಶ್ರೀ ಮತ್ತು ಅವರ ಸಹೋದರ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ. ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಎಚ್ಎಂಡಿಎ) ಅಧಿಕಾರಿಗಳು ಆ ಪ್ರದೇಶದಲ್ಲಿ ರಸ್ತೆ ಗುರುತು ಮಾಡುವ ಕೆಲಸವನ್ನು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅನೇಕ ಪ್ಲಾಟ್ಗಳ ಮಾಲೀಕರು ಸಹ ಅಲ್ಲಿ ಹಾಜರಿದ್ದರು. ಗಚಿಬೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೇ ಈ ಘಟನೆ ನಡೆದಿದೆ.
ಸಂಧ್ಯಾ ಕನ್ವೆನ್ಷನ್ ಹಾಲ್ ಮಾಲೀಕ ಶ್ರೀಧರ್ ರಾವ್ಗೆ ಸಂಬಂಧಿಸಿದ್ದಾರೆ ಎನ್ನಲಾದ ಕೆಲವು ಜನರು ರಸ್ತೆ ಗುರುತು ಮಾಡುವ ವಿಡಿಯೋ ಚಿತ್ರೀಕರಣವನ್ನು ವಿರೋಧಿಸಿದಾಗ ಉದ್ವಿಗ್ನತೆ ಹೆಚ್ಚಾಗಿದೆ. 'ತೆಲುಗು ಸ್ಕ್ರೈಬ್' ಎಂಬ ಸ್ಥಳೀಯ ಮಾಧ್ಯಮ ಪೋರ್ಟಲ್ ಪ್ರಕಾರ, ಈ ಜನರು ರಮ್ಯಾ ಶ್ರೀ ಮತ್ತು ಅವರ ಸಹೋದರ ಸೇರಿದಂತೆ ಅನೇಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಟಿ ಕೂಡ ಗಾಯಗೊಂಡಿದ್ದಾರೆ. ಸದ್ಯ ರಮ್ಯಾ ಶ್ರೀ ಅವರ ಕೆಲವು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವೀಡಿಯೊದಲ್ಲಿ, ರಮ್ಯಾ ಶ್ರೀ ಅಳುತ್ತಾ ತನ್ನ ಅನುಭವವನ್ನು ವಿವರಿಸುತ್ತಿರುವುದು ಕಂಡುಬರುತ್ತದೆ. FCI ಕಾಲೋನಿಯಲ್ಲಿ ಆಸ್ತಿಯನ್ನು ಹೊಂದಿದ್ದು, ಶ್ರೀಧರ್ ರಾವ್ ಮತ್ತು ಅವರ ಜನರು ರಮ್ಯಾ ಅವರಿಗೆ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೆ ಭೂಮಿಯನ್ನು ಆಕ್ರಮಿಸಿಕೊಳ್ಳಲು ಕೂಡ ಪ್ರಯತ್ನ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ, ರಮ್ಯಾ ಶ್ರೀ ಭಯಭೀತರಾಗಿರಯವಂತೆ ಕಾಣಿಸಿಕೊಂಡಿದ್ದು, ವೀಡಿಯೊದಲ್ಲಿ ಗೂಂಡಾಗಳು ಹಗಲು ಹೊತ್ತಿನಲ್ಲಿ ಹೇಗೆ ದಾಳಿ ಮಾಡಿದ್ದಾರೆ, ಅದು ಕೂಡ ಪೊಲೀಸ್ ಠಾಣೆಯ ಮುಂದೆ ಎಂಬುದನ್ನು ವಿವರಿಸಿದ್ದಾರೆ. ಈ ವೀಡಿಯೊವನ್ನು ತೆಲುಗು ಸ್ಕ್ರೈಬ್ X (ಟ್ವಿಟರ್) ನಲ್ಲಿ ಹಂಚಿಕೊಂಡಿದೆ.
పట్టపగలే.. కత్తులు, బ్యాట్ లతో దాడులకు తెగించిన కబ్జా రాయుల్లు
హైదరాబాద్ - గచ్చిబౌలి పోలీస్ స్టేషన్ దగ్గరలో ఉన్న ఎఫ్.సి.ఐ. కాలనీ లే అవుట్ లో రోడ్లు మార్కింగ్ చేపట్టిన హైడ్రా
ప్లాట్ ఓనర్స్ సమక్షంలో హైడ్రా అధికారులు రోడ్లు మార్కింగ్ చేస్తుండగా.. వీడియో తీస్తున్న ప్లాట్ యజమానులపై… pic.twitter.com/FC8gPA5xLG
— Telugu Scribe (@TeluguScribe) June 17, 2025
ದಾಳಿಯ ನಂತರ, ರಮ್ಯಾ ಶ್ರೀ ಮತ್ತು ಅವರ ಸಹೋದರ ಪ್ರಶಾಂತ್ ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ವಿಷಯದಲ್ಲಿ ಪೊಲೀಸರಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಪೊಲೀಸ್ ಠಾಣೆಯ ಮುಂದೆ ಇದೆಲ್ಲವೂ ನಡೆಯುತ್ತಿರುವಾಗ, ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಸಹಜ ಎಂದು ಜನರು ಹೇಳುತ್ತಾರೆ. ಅಲ್ಲದೆ, ರಮ್ಯಾ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ಸಂಪೂರ್ಣ ಬೆಂಬಲ ಸಿಗುತ್ತಿದೆ. ರಮ್ಯಾ ಶ್ರೀ ಪ್ರಸಿದ್ಧ ನಟಿ, ನಿರ್ದೇಶಕಿ, ಬರಹಗಾರ್ತಿ ಮತ್ತು ಡ್ಯಾನ್ಸರ್. ಅವರು ತೆಲುಗು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ರಮ್ಯಾ ಶ್ರೀ ಕೆಲವು ಹಿಂದಿ, ಮಲಯಾಳಂ ಮತ್ತು ಭೋಜ್ಪುರಿ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2013 ರಲ್ಲಿ, 'ಓ... ಮಲ್ಲಿ' ಚಿತ್ರದಲ್ಲಿ ಬುಡಕಟ್ಟು ಮಹಿಳೆಯ ಪಾತ್ರಕ್ಕಾಗಿ ಅವರು ನಂದಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ ಅವರು ಈ ಚಿತ್ರವನ್ನು ಸ್ವತಃ ನಿರ್ದೇಶಿಸಿದ್ದಾರೆ. ರಮ್ಯಾ ಶ್ರೀ 1997 ರಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅಮಿತಾಬ್ ಬಚ್ಚನ್ ಅವರ 'ಸೂರ್ಯವಂಶಂ' (1999) ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ‘ಕೋರುಕುನ್ನ ಪ್ರಿಯುಡು’, ‘ಸಮರಸಿಂಹ ರೆಡ್ಡಿ’, ‘ನುವ್ವು ನೇನು’, ‘ಸಿಂಹಾದ್ರಿ’, ‘ವಿಷ್ಣು’, ‘ಮಾ ಅಲ್ಲುಡು ವೆರಿ ಗುಡ್’, ‘‘ಯೂತ್’, ಹೀಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ