)
Bigg Boss 19 : ಬಿಗ್ ಬಾಸ್ ಕಿರುತೆರೆಯ ಬಹು ಜನಪ್ರಿಯ ಕಾರ್ಯಕ್ರಮ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮವನ್ನು ಆಯಾ ರಾಜ್ಯದ ಸೂಪರ್ ಸ್ಟಾರ್ಗಳು ನಿರೂಪಣೆ ಮಾಡುತ್ತಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಯನ್ನು ಈ ನಟರು ಪಡೆಯುತ್ತಾರೆ. ಕನ್ನಡದಲ್ಲಿ ಸುದೀಪ್, ತೆಲುಗಿನಲ್ಲಿ ನಾಗಾರ್ಜುನ, ಹಿಂದಿಯಲ್ಲಿ ಸಲ್ಮಾನ್ ಖಾನ್ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.
ಕಳೆದ 16 ವರ್ಷಗಳಿಂದ ಸಲ್ಮಾನ್ ಖಾನ್ ಬಿಗ್ ಬಾಸ್ ಭಾಗವಾಗಿದ್ದಾರೆ. ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ನ ಮುಖದಂತೆ. ಅವರಿಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳುವುದು ಕೂಡ ಕಷ್ಟ. ಆದರೆ ಈ ಬಾರಿ ನಿರೂಪಣೆಯಿಂದ ಆಗಾಗ ಸಲ್ಮಾನ್ ಖಾನ್ ಹಿಂದೆ ಸರಿಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಸಲ್ಮಾನ್ ಖಾನ್ ಅವರಿಲ್ಲದೇ ವಾರಾಂತ್ಯದ ಎಪಿಸೋಡ್ಗಳನ್ನು ಜನರು ನೋಡಬೇಕಾಗುತ್ತದೆ. ಈ ವಾರದಿಂದಲೇ ಸಲ್ಮಾನ್ ಖಾನ್ ಅವರ ಅನುಪಸ್ಥಿತಿ ವೀಕೆಂಡ್ನಲ್ಲಿ ಕಾಡಲಿದ್ದು ಸಲ್ಮಾನ್ ಖಾನ್ ಬದಲು ಬಾಲಿವುಡ್ನ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್, ನಿರ್ದೇಶಕಿ ಫರಾ ಖಾನ್ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ. ಇಂದು (ಸೆಪ್ಟೆಂಬರ್ 13) ಸಹ ಕಾರ್ಯಕ್ರಮವನ್ನು ಫರಾ ಖಾನ್ ಅವರೇ ನಡೆಸಿಕೊಡಲಿದ್ದಾರೆ.
ಈ ಬಾರಿ ಹಿಂದಿ ಬಿಗ್ ಬಾಸ್ ಮೂರಲ್ಲ ಐದು ತಿಂಗಳು ಪ್ರಸಾರವಾಗಲಿದೆ. ಕಾರ್ಯಕ್ರಮ ಐದು ತಿಂಗಳು ನಡೆಯುವ ಹಿನ್ನೆಲೆ ಆಗಾಗ ವಾರಾಂತ್ಯದ ಕೆಲ ಎಪಿಸೋಡ್ಗಳಲ್ಲಿ ಸಲ್ಮಾನ್ ಖಾನ್ ಕಾಣಿಸುವುದಿಲ್ಲ ವರದಿಯಾಗಿತ್ತು. ಸಲ್ಮಾನ್ ಖಾನ್ ಬರದ ಎಪಿಸೋಡ್ಗಳನ್ನು ಅನಿಲ್ ಕಪೂರ್, ಕರಣ್ ಜೋಹರ್, ಫರಾ ಖಾನ್ ನಡೆಸಿಕೊಡಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಈ ಬಗ್ಗೆ ಬಿಗ್ ಬಾಸ್ ತಂಡ ಅಧಿಕೃತವಾಗಿ ಹೇಳಿರಲಿಲ್ಲ.
ಫರಾ ಖಾನ್ ಜೊತೆಗೆ ಈ ವಾರ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ನ್ನು ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಕೂಡ ನಡೆಸಿಕೊಡಲಿದ್ದಾರೆ. ''ಜಾಲಿ ಎಲ್ಎಲ್ಬಿ 3'' ಮುಂದಿನ ವಾರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡಲು ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಬಿಗ್ ಬಾಸ್ ಅಂಗಳಕ್ಕೆ ಬಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.