Actor Shihan Hussaini Passed Away: ಚಲನಚಿತ್ರ ನಟ ಮತ್ತು ಕರಾಟೆ ತರಬೇತುದಾರ ಶಿಹಾನ್ ಹುಸೇನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರು ಒಂದು ವಿಡಿಯೋ ಬಿಡುಗಡೆ ಮಾಡಿ, ಬದುಕಲು ದಿನಕ್ಕೆ 2 ಯೂನಿಟ್ ರಕ್ತ ಬೇಕು, ಮತ್ತು ಅವರು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದು ಅನೇಕರನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಒಂದು ವರ್ಷಗಳ ಕಾಲ ಕುಬೇರ ರಾಜ ಯೋಗ !ಈ ರಾಶಿಯವರ ಅದೃಷ್ಟದ ಪರ್ವ ಕಾಲ ಆರಂಭ !ಹಣ, ಸ್ಥಾನಮಾನ, ಖ್ಯಾತಿ ಒಲಿದು ಬರುವ ಶುಭ ಸಮಯ !
ಆಸ್ಪತ್ರೆಯಿಂದ ಅವರು ಪೋಸ್ಟ್ ಮಾಡಿದ ವೀಡಿಯೊದಿಂದ ಆಘಾತಕ್ಕೊಳಗಾದ ಚಲನಚಿತ್ರೋದ್ಯಮದ ಸದಸ್ಯರು ಅವರಿಗೆ ವಿವಿಧ ಸಹಾಯಗಳನ್ನು ನೀಡುತ್ತಲೇ ಇದ್ದರು ಮತ್ತು ಅವರ ಬೆಂಬಲವನ್ನು ವ್ಯಕ್ತಪಡಿಸಲು ಖುದ್ದಾಗಿ ಭೇಟಿ ಮಾಡಿದ್ದರು. ಆದರೆ ಇದೀಗ ಹುಸೇನಿ ಅವರು ಬೆಳಗಿನ ಜಾವ 1.45 ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಶಿಹಾನ್ ಹುಸೇನಿ ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರ ನಿಧನವು ಚಲನಚಿತ್ರೋದ್ಯಮದಲ್ಲಿ ತೀವ್ರ ದುಃಖವನ್ನುಂಟು ಮಾಡಿದ್ದು, ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ತಮ್ಮ ಸಾವಿಗೆ ಕೆಲವು ದಿನಗಳ ಮೊದಲು, ನಟ ಹುಸೇನಿ ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಘೋಷಿಸಿದರು. ಅವರ ಕಡೆಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ, ʼಅವರು ತಮ್ಮ ದೇಹವನ್ನು ವೈದ್ಯಕೀಯ, ಅಂಗರಚನಾಶಾಸ್ತ್ರ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ದಾನ ಮಾಡುವುದಾಗಿ ಮತ್ತು ಅವರ ಹೃದಯವನ್ನು ಕರಾಟೆ ಮತ್ತು ಬಿಲ್ಲುಗಾರಿಕೆ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸುವಂತೆ ಕೇಳಿಕೊಳ್ಳುವುದಾಗಿʼ ಹೇಳಿದ್ದಾರೆ. ಅವರ ನಿರ್ಧಾರವನ್ನು ಚಲನಚಿತ್ರೋದ್ಯಮ ಮತ್ತು ಅಭಿಮಾನಿಗಳು ಮೆಚ್ಚಿಕೊಂಡರು.
ಹುಸೇನಿ ಮಧುರೈನವರು. 1986 ರಲ್ಲಿ ಬಿಡುಗಡೆಯಾದ ಪುಂಗಾನ್ ಮನ್ನನ್ ಚಿತ್ರದ ಮೂಲಕ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಹಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರೂ, ವಿಜಯ್ ಅವರ ಬದ್ರಿ ಚಿತ್ರದಲ್ಲಿ ನಟಿಸಿದ ನಂತರವೇ ಅವರು ಪ್ರಸಿದ್ಧರಾಗಿದ್ದು. ಅವರು ಕೊನೆಯದಾಗಿ 2022 ರಲ್ಲಿ ವಿಘ್ನೇಶ್ ಶಿವನ್ ನಿರ್ದೇಶನದ ಕಾತುವಾಕುಲ ರೇಂಡು ಕಾದಲ್ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾ ಹೊರತುಪಡಿಸಿ, ಹುಸೇನಿ ಬಿಲ್ಲುಗಾರಿಕೆ ಮತ್ತು ಕರಾಟೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಅನೇಕರಿಗೆ ತರಬೇತಿಯನ್ನೂ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ