ಅಹಮದಾಬಾದ್ ದುರಂತದ ನಂತರ ಸ್ಟಾರ್‌ ನಿರ್ಮಾಪಕ ನಾಪತ್ತೆ.. ವಿಮಾನ ಅಪಘಾತದಲ್ಲಿ ಬಲಿಯಾಗಿರುವ ಶಂಕೆ!

producer missing after plane crash : ಗುಜರಾತ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ಬಳಿಕ ಸಿನಿಮಾ ನಿರ್ಮಾಪಕರೊಬ್ಬರು ಕಾಣೆ ಆಗಿದ್ದಾರೆ.

Written by - Chetana Devarmani | Last Updated : Jun 16, 2025, 02:51 PM IST
  • ಅಹಮದಾಬಾದ್ ವಿಮಾನ ದುರಂತ
  • ವಿಮಾನ ದುರಂತದ ನಂತರ ಸ್ಟಾರ್‌ ನಿರ್ಮಾಪಕ ನಾಪತ್ತೆ
  • ಸ್ಟಾರ್‌ ನಿರ್ಮಾಪಕ ನಾಪತ್ತೆ ಆದ ಬಗ್ಗೆ ಪತ್ನಿ ದೂರು
ಅಹಮದಾಬಾದ್ ದುರಂತದ ನಂತರ ಸ್ಟಾರ್‌ ನಿರ್ಮಾಪಕ ನಾಪತ್ತೆ.. ವಿಮಾನ ಅಪಘಾತದಲ್ಲಿ ಬಲಿಯಾಗಿರುವ ಶಂಕೆ!

producer missing after plane crash: ಅಹಮದಾಬಾದ್‌ನಲ್ಲಿ ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ಸಿನಿಮಾ ನಿರ್ಮಾಪಕ ಮಹೇಶ್ ಕಲವಾಡಿಯಾ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ನಿರ್ಮಾಪಕ ಮಹೇಶ್ ಕಲವಾಡಿಯಾ ಅವರ ಫೋನ್ ಕೊನೆಯದಾಗಿ ಸ್ವಿಚ್‌ ಆಫ್‌ ಆದ ಸ್ಥಳ ವಿಮಾನ ಅಪಘಾತವಾದ ಜಾಗದ ಬಳಿಯೇ ಪತ್ತೆಯಾಗಿದೆ. ಇದರಿಂದ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ.  

ಕಳೆದ ಗುರುವಾರ ನಡೆದ ಭೀಕರ ವಿಮಾನ ಅಪಘಾತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದ್ದ ನಿರ್ಮಾಪಕ ಮಹೇಶ್ ಕಲವಾಡಿಯಾ ನಿಗೂಢ ಕಣ್ಮರೆ ಆಗಿದ್ದಾರೆ. ನರೋಡಾ ನಿವಾಸಿಯಾದ ಮಹೇಶ್ ಕಲವಾಡಿಯಾ ಅಂದು ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಪರಿಚಯಸ್ಥರನ್ನು ಭೇಟಿ ಮಾಡಲು ಹೋಗಿದ್ದರು ಎಂದು ಅವರ ಪತ್ನಿ ಹೇತಲ್ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ನಾಲ್ಕನೇ ವಯಸ್ಸಿನಲ್ಲಿ ಇರುವಾಗಲೇ.... : ಬಾಲ್ಯದಲ್ಲಿ ಕಾಡಿದ ಆ ನೋವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ರಮ್ಯಾ

ಗುರುವಾರದಿಂದ ಮಹೇಶ್ ಅವರ ಕುಟುಂಬಕ್ಕೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ವಿಮಾನವು ಟೇಕ್ ಆಫ್ ಆದ ಕೇವಲ ಐದು ನಿಮಿಷಗಳಲ್ಲೇ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿತು. ವಿಮಾನದಲ್ಲಿದ್ದ 241 ಜನರು ಮತ್ತು ನೆಲದ ಮೇಲೆ ಇದ್ದ ಸುಮಾರು 29 ಜನರು ಸಾವನ್ನಪ್ಪಿದರು. ಅವರಲ್ಲಿ ಹಲವರು ಗುರುತಿಸಲಾಗದಷ್ಟು ಸುಟ್ಟುಹೋದರು. ಅಧಿಕಾರಿಗಳು ಮತ್ತು ಕುಟುಂಬಗಳು ಮೃತರ ಗುರುತಿಗಾಗಿ ಡಿಎನ್ಎ ಹೊಂದಾಣಿಕೆಯನ್ನು ಮಾಡುತ್ತಿದ್ದಾರೆ.

ಮಹೇಶ್ ಅವರ ಪತ್ನಿಯ ಪ್ರಕಾರ, ಅವರ ಫೋನ್ ಅಪಘಾತದ ಸ್ಥಳದಿಂದ 700 ಮೀಟರ್ ದೂರದಲ್ಲಿ ಲೊಕೇಷನ್‌ ತೋರಿಸುತ್ತಿದೆ. ವಿಮಾನ ಹೊರಡುವ ಒಂದು ನಿಮಿಷದ ಮೊದಲು ಆಫ್ ಆಗಿದೆ ಎಂದು ಪೊಲೀಸರು ಅವರಿಗೆ ಮಾಹಿತಿ ನೀಡಿದ್ದಾರೆ.

"ನನ್ನ ಪತಿ ಮಧ್ಯಾಹ್ನ 1.14 ಕ್ಕೆ ನನಗೆ ಕರೆ ಮಾಡಿ ತಮ್ಮ ಮೀಟಿಂಗ್‌ ಮುಗಿದು ಮನೆಗೆ ಬರುತ್ತಿರುವುದಾಗಿ ತಿಳಿಸಿದರು. ಆದರೆ ಹಿಂತಿರುಗಲಿಲ್ಲ. ಆಗ ನಾನು ಅವರ ಫೋನ್‌ಗೆ ಕರೆ ಮಾಡಿದೆ ಸ್ವಿಚ್ ಆಫ್ ಆಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರ ಮೊಬೈಲ್ ಫೋನ್‌ನ ಕೊನೆಯ ಸ್ಥಳವು ವಿಮಾನ ಅಪಘಾತದ ಸ್ಥಳದಿಂದ 700 ಮೀಟರ್ ದೂರದಲ್ಲಿ ತೋರಿಸುತ್ತಿದೆ" ಎಂದು ಹೇತಲ್ ತಿಳಿಸಿದರು.

ಇದನ್ನೂ ಓದಿ: ನಮ್ಮ ಸಿನಿಮಾಗಳಿಗೆ ನಮ್ಮ ಮಣ್ಣಿನಲ್ಲೇ ಅವಕಾಶ ಕೊಡದಿದ್ದರೆ ಹೇಗೆ? : ವಿನೋದ್ ಪ್ರಭಾಕರ್ ಬೆನ್ನಿಗೆ ನಿಂತ ವಿನೋದ್‌ ರಾಜ್‌

"ಅವರ ಮೊಬೈಲ್ ಫೋನ್ ಮಧ್ಯಾಹ್ನ 1:40 ರ ಸುಮಾರಿಗೆ ಸ್ವಿಚ್ ಆಫ್ ಆಗಿತ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಇದೆಲ್ಲವೂ ಅಸಾಮಾನ್ಯವಾಗಿದೆ. ಏಕೆಂದರೆ ಅವರು ಮನೆಗೆ ಬರಲು ಆ ಮಾರ್ಗವನ್ನು ಎಂದಿಗೂ ಬಳಸುತ್ತಿರಲಿಲ್ಲ. ಅಪಘಾತದಿಂದಾಗಿ ನೆಲದ ಮೇಲೆ ಸಾವನ್ನಪ್ಪಿದವರಲ್ಲಿ ನಿರ್ಮಾಪಕ ಮಹೇಶ್ ಕಲವಾಡಿಯಾ ಕೂಡ ಒಬ್ಬರೇ ಎಂದು ಪರಿಶೀಲಿಸಲು ಡಿಎನ್‌ಎ ಮಾದರಿಗಳನ್ನು ಪೊಲೀಸರಿಗೆ ಸಲ್ಲಿಸಿದ್ದೇವೆ" ಎಂದು ಪತ್ನಿ ಹೇಳಿದ್ದಾರೆ.

ಇಲ್ಲಿಯವರೆಗೆ ಡಿಎನ್‌ಎ ಪರೀಕ್ಷೆಗಳ ಮೂಲಕ ಕೇವಲ 47 ಮೃತರ ಬಗ್ಗೆ ಮಾತ್ರ ಗುರುತಿಸಲಾಗಿದೆ. ಅಧಿಕಾರಿಗಳು 24 ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News