ಸ್ಟಾರ್ ನಿರ್ಮಾಪಕನ ವಿರುದ್ಧ ವಂಚನೆ ಆರೋಪ : ಶಿವಣ್ಣ, ಗಣೇಶ್ ಸಿನಿಮಾ ಮಾಡೋದಾಗಿ ಮೋಸ

ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಖ್ಯಾತ ಪ್ರೊಡ್ಯೂಸರ್. ಕಷ್ಟಪಟ್ಟು ದುಡ್ಡು ಹಾಕಿ ಸಿನಿಮಾ ಮಾಡ್ತಿದ್ರು. ಇವ್ರು ನಿರ್ಮಾಣ ಮಾಡಿರೋ ಆಲ್ಮೋಸ್ಟ್ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್. ಅಂತಹ ಸ್ಟಾರ್ ನಿರ್ಮಾಪಕನ ವಿರುದ್ಧ ಈಗ ವಂಚನೆ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಏನಿದು ಚೀಟಿಂಗ್ ಕೇಸ್ ಅಂತೀರಾ ಹೇಳ್ತೀವಿ ನೋಡಿ.

Written by - Krishna N K | Last Updated : Jun 1, 2025, 07:15 PM IST
    • ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಖ್ಯಾತ ಪ್ರೊಡ್ಯೂಸರ್.
    • ಇವ್ರು ನಿರ್ಮಾಣ ಮಾಡಿರೋ ಆಲ್ಮೋಸ್ಟ್ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್.
    • ಸ್ಟಾರ್ ನಿರ್ಮಾಪಕನ ವಿರುದ್ಧ ಈಗ ವಂಚನೆ ಆರೋಪ
ಸ್ಟಾರ್ ನಿರ್ಮಾಪಕನ ವಿರುದ್ಧ ವಂಚನೆ ಆರೋಪ : ಶಿವಣ್ಣ, ಗಣೇಶ್ ಸಿನಿಮಾ ಮಾಡೋದಾಗಿ ಮೋಸ

ಬೆಂಗಳೂರು : ಸೂರಪ್ಪ ಬಾಬು.. ಈ ಫೋಟೋದಲ್ಲಿರೋ ಇವ್ರನ್ನ ನೀವು ನೋಡೇ ಇರ್ತೀರಾ. ಯಾಕಂದ್ರೆ ಸಾಹಸ ಸಿಂಹ ವಿಷ್ಣುವರ್ಧನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಪುನೀತ್ ಸೇರಿ ಸ್ಟಾರ್ ಹೀರೋಗಳ ಸಿನಿಮಾ ನಿರ್ಮಾಣ ಮಾಡಿ ಸಕ್ಸಸ್ ಕಂಡ ಸಕ್ಸಸ್ ಫುಲ್ ಪ್ರೊಡ್ಯೂಸರ್. ಕೋಟ್ಯಾಂತರ ರೂಪಾಯಿ ಹಣ ಹಾಕಿ ಸಿನಿಮಾ ಮಾಡ್ತಿದ್ದ ನಿರ್ಮಾಪಕ ಸಿನಿಮಾ ಹಿಟ್ ಆದ್ಮೇಲೆ ಲಾಭ ಪಡೀತಿದ್ರು. ಅಂತಹ ನಿರ್ಮಾಪಕನ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ.
 
ಕೋಟಿಗೊಬ್ಬ, ಪೃಥ್ವಿ, ಕೋಟಿಗೊಬ್ಬ -2 ಸೇರಿ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಿ ಸಕ್ಸಸ್ ಕಂಡಿದ್ದ ನಿರ್ಮಾಪಕ ಸೂರಪ್ಪ ಬಾಬು ಅವರ ವಿರುದ್ಧ ಲಕ್ಷ್ಮೀ ಎಂಬ ವೃದ್ದೆ ಆರೋಪ ಮಾಡಿದ್ದಾರೆ. ಶಿವರಾಜ್​ ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರನ್ನೂ ಹಾಕೊಂಡು ಮಲ್ಟಿ ಸ್ಟಾರರ್ ಸಿನಿಮಾ ಮಾಡ್ತಿದ್ದೀನಿ. ಅದಕ್ಕೆ ಫೈನಾನ್ಸ್ ಬೇಕಿದೆ ಅಂತಾ ಸಿನಿಮಾಗಾಗಿ 92.50 ಲಕ್ಷ ರೂ ಪಡೆದು, ಆ ಪೈಕಿ 67.50 ಲಕ್ಷ ರೂ ಹಿಂದಿರುಗಿಸದೇ ಬೆದರಿಕೆ ಹಾಕಿದ್ದಾರೆ ಅಂತಾ ಲಕ್ಷ್ಮೀ ಆರೋಪ ಮಾಡಿದ್ದಾರೆ. 

Add Zee News as a Preferred Source

ಇದನ್ನೂ ಓದಿ:ಜೂನ್ 20 ರಂದು ತೆರೆಗೆ ಬರಲಿದೆ ಧರ್ಮ ಕೀರ್ತಿರಾಜ್ ಅಭಿನಯದ "ಬುಲೆಟ್"..!

ಮಹಿಳೆಗೆ 2023ರಲ್ಲಿ ನಿರ್ಮಾಪಕ ಸೂರಪ್ಪ ಬಾಬು ಅವರ ಪರಿಚಯವಾಗಿತ್ತು. ತಾವು ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರೊಂದಿಗೆ ಕೆ.ಎಸ್.ರವಿಕುಮಾರ್ ಅವರ ನಿರ್ದೇಶನದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಾಲ ಬೇಕು ಎಂದು ಸೂರಪ್ಪ ಬಾಬು ಅವರು ಕೇಳಿದ್ರಂತೆ. ಅದರಂತೆ ಹಂತ ಹಂತವಾಗಿ 92  ಪಡೆದು ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ರು. ಆದ್ರೆ ಶಿವಣ್ಣ ಹಾಗೂ ಗಣೇಶ್ ಸಿನಿಮಾ ಸ್ಟಾಪ್ ಮಾಡಿ ಬೇರೊಂದು ಸಿನಿಮಾವನ್ನ ಸೂರಪ್ಪ ಬಾಬು ಶುರು ಮಾಡಿದ್ದಾರೆ. ಇತ್ತ ಅಗ್ರಿಮೆಂಟ್ ಪ್ರಕಾರ ಹಣ ವಾಪಸ್ ಕೊಡದೆ ಆಟ ಆಡಿಸ್ತಿದ್ದಾರಂತೆ. ಪದೇ ಪದೇ ಕೇಳಿದಾಗ ಕೇವಲ 25 ಲಕ್ಷ ಕೊಟ್ಟಿದ್ದ ಸೂರಪ್ಪ ಬಾಬು ಅರ್ಧ ಕೋಟಿ ಅಂದ್ರೆ 52ಲಕ್ಷ ಹಣ ವಂಚನೆ ಮಾಡಿದ್ದಾರೆ ಅಂತಾ ದೂರುದಾರೆ ಲಕ್ಷ್ಮೀ ಆರೋಪಿಸಿದ್ದಾರೆ.

ಸದ್ಯ ವಂಚನೆ ಸಂಬಂಧ ಮೋಸ ಹೋಗಿರುವ ಲಕ್ಷ್ಮೀ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಸದ್ಯದಲ್ಲೇ ಸೂರಪ್ಪ ಬಾಬುಗೆ ನೊಟೀಸ್ ಕೂಡ ಕೊಡಲಿದ್ದಾರೆ. ತನಿಖೆ ನಂತರವೇ ಕೇಸ್ ನ ಅಸಲಿ ಸತ್ಯ ಹೊರ ಬರಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News