)
Ghetto Kids: ಉಗಾಂಡದ ಗೆಟ್ಟೋ ಕಿಡ್ಸ್ಗಳ ಸ್ಟೆಪ್ಗಳು ಮತ್ತು ಕನ್ನಡ ಟಪಾಂಗ್ ಸಂಗೀತದ ಮಿಶ್ರಣ ಇಂದು ಇಂಟರ್ನೆಟ್ನಲ್ಲಿ ದೊಡ್ಡ ಚರ್ಚೆಯಾಗಿದ್ದು, ಈ ಹೊಸ ಫ್ಯೂಷನ್ ವೀಡಿಯೊ ಜನರನ್ನು ಸೆಳೆಯುತ್ತಿದೆ. ಅವರ ಹೈ-ಎನರ್ಜಿ ಆಫ್ರೋ ನೃತ್ಯ ಮತ್ತು ಕನ್ನಡ ಬೀಟ್ಗಳ ಜೋಡಿ ಹೊಸ ಸಂಭ್ರಮ ಮೂಡಿಸಿದೆ.
ವಿಶೇಷವಾಗಿ ‘AFRO ಟಪಾಂಗ್’ ಹಾಡಿಗೆ ಗೆಟ್ಟೋ ಕಿಡ್ಸ್ ನೀಡಿದ ಆಫ್ರೋ ಶೈಲಿಯ ಸ್ಟೆಪ್ಗಳು ಕನ್ನಡಿಗರನ್ನಷ್ಟೇ ಅಲ್ಲ, ವಿಶ್ವದ ಗಮನವನ್ನೂ ಸೆಳೆದಿವೆ. ವೀಡಿಯೊ ತಪ್ಪದೇ ನೋಡಬೇಕಾದಷ್ಟು ಎನರ್ಜಿ ಮತ್ತು ರಿದಮ್ ಹೊಂದಿದೆ. Britain’s Got Talent ವೇದಿಕೆಯ ಗೋಲ್ಡನ್ ಬಜರ್ವರೆಗೆ ತಲುಪಿದ ಪ್ರಸಿದ್ಧ ಗೆಟ್ಟೋ ಕಿಡ್ಸ್, ಈಗ ಕನ್ನಡ ಹಾಡಿನೊಂದಿಗೆ ಆಫ್ರಿಕಾದಲ್ಲಿ ಹೊಸ ಟ್ರೆಂಡ್ ನಿರ್ಮಿಸಿದ್ದಾರೆ. ಅವರ ನೃತ್ಯಕ್ಕೆ ಕನ್ನಡದ ಸೊಗಡು ಸೇರಿ ಹೊಸ ಅಲೆ ತರಿಸಿದೆ.
ನವೆಂಬರ್ 1ರಂದು ಆನಂದ್ ಆಡಿಯೋ ಯೂಟ್ಯೂಬ್ನಲ್ಲಿ ಬಿಡುಗಡೆಯಾದ ‘AFRO ಟಪಾಂಗ್’ ಹಾಡು ಈಗಾಗಲೇ 16.06 ಮಿಲಿಯನ್ ವೀಕ್ಷಣೆ ಮತ್ತು 1.58 ಲಕ್ಷ ಲೈಕ್ಸ್ ಪಡೆದುಕೊಂಡು ಭರ್ಜರಿ ಹಿಟ್ ಆಗಿದೆ. ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಹಾಡಿಗೆ ಮತ್ತಷ್ಟು ಮ್ಯಾಜಿಕ್ ನೀಡಿದೆ.
ಹಾಡಿನ ಫ್ಲ್ಯಾಶ್ಮಾಬ್ಗಳು, ಸೋಶಿಯಲ್ ಮೀಡಿಯಾ ಚಾಲೆಂಜ್ಗಳು, ಶಾರ್ಟ್ ಕ್ಲಿಪ್ಗಳು ಇದರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿವೆ. ಜೊತೆಗೆ ಹಾಲಿವುಡ್ನ MARZ ಸ್ಟುಡಿಯೋ ನೀಡಿದ VFX ಹಾಡಿನ ವೀಡಿಯೊವನ್ನು ಗ್ಲೋಬಲ್ ಲೆವೆಲ್ಗೆ ಕೊಂಡೊಯ್ದಿದೆ.
ಈ ಹಾಡಿನ ಯಶಸ್ಸು ‘45’ ಸಿನಿಮಾಗೆ ದೊಡ್ಡ ಹೈಪ್ ಕೊಟ್ಟಿದ್ದು, ಡಿಸೆಂಬರ್ 25ರಂದು ಚಿತ್ರ ಬಿಡುಗಡೆಯಾಗುವ ವೇಳೆ ಭಾರೀ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರ ಈ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ.