ಎರಡೇ ಪಾತ್ರಗಳ ಸುತ್ತ ಹೆಣೆದ "ಘೋಸ್ಟ್" ಕಿರು ಚಿತ್ರ

Ghost Short movie : ಸುಧಾರಾಣಿ ನಿರ್ಮಾಣದ ಎರಡೇ ಪಾತ್ರಗಳ ಸುತ್ತ ಹೆಣೆದ "ಘೋಸ್ಟ್" ಕಿರು ಚಿತ್ರ.   

Written by - YASHODHA POOJARI | Last Updated : Jun 2, 2025, 01:14 PM IST
  • ಸುಧಾರಾಣಿ ನಿರ್ಮಾಣದ ಸಿನಿಮಾ
  • ಎರಡೇ ಪಾತ್ರಗಳ ಸುತ್ತ ಹೆಣೆದ ಕತೆ
  • ಸುಧಾರಾಣಿ ನಟಿಸಿದ ಘೋಸ್ಟ್ ಕಿರು ಚಿತ್ರ
ಎರಡೇ ಪಾತ್ರಗಳ ಸುತ್ತ ಹೆಣೆದ "ಘೋಸ್ಟ್" ಕಿರು ಚಿತ್ರ

Ghost Short movie : ಸಾಹಸ ಸಿಂಹ ಡಾ ವಿಷ್ಣುವರ್ಧನ್ ನಾಯಕತ್ವದ ಕಿಲಾಡಿ ಕಿಟ್ಟು ಸಿನಿಮಾ 1978 ರಲ್ಲಿ ರಿಲೀಸ್‌ ಆಗಿತ್ತು, ಕಿಲಾಡಿ ಕಿಟ್ಟು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಪದಾರ್ಪಣೆ ಮಾಡಿದ್ದ ಸುಧಾರಾಣಿ, ನಂತರದ ದಿನಗಳಲ್ಲಿ 1986 ರಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಾಯಕಿಯಾಗಿ ಆನಂದ್ ಚಿತ್ರದಲ್ಲಿ ನಟಿಸುವುದರ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.

Add Zee News as a Preferred Source

ಇಲ್ಲಿಯ ತನಕ ಬಹಳಷ್ಟು ಚಿತ್ರಗಳಲ್ಲಿ ಕನ್ನಡದ ಎಲ್ಲಾ ಸೂಪರ್ ಸ್ಟಾರ್ಸ್ ಗಳ ಜೊತೆಗೆ ನಾಯಕಿಯಾಗಿ ನಟಿಸಿ, ಸೈ ಎನಿಸಿ ಕೊಂಡಿದ್ದಲ್ಲದೆ, ಕಾಲ ಕ್ರಮೇಣ ಪೋಷಕ ಪಾತ್ರಗಳಲ್ಲಿಯೂ ಸಹ ನಟಿಸಿ ಬ್ಯುಸಿಯಾಗಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಸುಧಾರಾಣಿ ಇಲ್ಲಿಯೂ ಕೂಡಾ ಸಕ್ಸಸ್ ಕಂಡಿದ್ದು ವಿಶೇಷ..

ಇದನ್ನೂ ಓದಿ: ಥಾಯ್ಲೆಂಡ್‌ನ ಓಪಲ್ ಸುಚಾತಾ ಚುವಾಂಗ್‌ಸ್ರಿ ವಿಶ್ವ ಸುಂದರಿಯಾಗಿ ಆಯ್ಕೆ

ಸುಧಾರಾಣಿಯವರೆ  ನಿರ್ಮಿಸಿ, ನಟಿಸಿದ ಘೋಸ್ಟ್ ಕಿರು ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದೆ. ಈ ವಿಚಾರದ ಮೇಲೆ ಬಂದಂತಹ ಒಂದು ಎಳೆಯನ್ನಿಟ್ಟುಕೊಂಡು ಕಿರು ಚಿತ್ರ ಮಾಡಿದ್ದೇನೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಿರ್ದೇಶಕರು ಈ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ ಹಾಗೂ  ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು ನಟಿ ಸುಧಾರಾಣಿ.

ಇನ್ನೂ ಚಿತ್ರದಲ್ಲಿ ಸುಧಾರಾಣಿ ಯವರ ಜೊತೆಗೆ ನಟಿಸುವುದರ ಜೊತೆಗೆ ,ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಸುದೇಶ್ ಕೆ ರಾವ್ ಮಾತನಾಡಿ ತಾವು ಇಲ್ಲಿಯ ತನಕ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಬಗ್ಗೆ ಮತ್ತು ನಿರ್ದೇಶನ ಮಾಡಿರುವ ಕುರಿತು ಅನುಭವ ಹಂಚಿಕೊಂಡರು. ಘೋಸ್ಟ್ ಸ್ಪೆಷಲ್ ಕಥೆಯಾಗಿ ನಿಲ್ಲುತ್ತದೆ. 

ಪ್ರಪಂಚದಲ್ಲಿ ಇರುವುದೆಲ್ಲವೂ ಪಾಸಿಟಿವ್. ನಾವೇ ಎಲ್ಲದರಲ್ಲೂ ನೆಗೆಟಿವ್ ಹುಡುಕಿ, ನಮ್ಮ ತಲೆ ಮತ್ತು ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ‌. ಅಂತಹ ಎಲ್ಲರಿಗೂ ಈ ಶಾರ್ಟ್ ಫಿಲ್ಮ್ ಪರಿಹಾರ ನೀಡಬಹುದು ಎಂದು ಹೇಳಿದರು. "ಘೋಸ್ಟ್" ಕಿರುಚಿತ್ರಕ್ಕೆ "ದಿ ದೆವ್ವ" ಎಂಬ ಅಡಿಬರಹವಿದೆ‌.

ಇದನ್ನೂ ಓದಿ: ಅಮ್ಮನ ಅಗಲಿಕೆ ಬಳಿಕ ತಾಯಿ ಮಾಡುತ್ತಿದ್ದ ಸೇವೆ ಮುಂದುವರೆಸಿದ ಕಿಚ್ಚ ಸುದೀಪ.!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Trending News