)
Gilli Nata cinema journey : ಹಾಸ್ಯದ ಮೂಲಕ ಖ್ಯಾತಿ ಪಡೆದಿರುವ ಗಿಲ್ಲಿ ನಟ ಜಂಟಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆ ಸೇರಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 4 ಫಸ್ಟ್ ರನ್ನರ್ ಅಪ್ ಆಗಿದ್ದ ಗಿಲ್ಲಿ ನಟ ತಮ್ಮ ಜರ್ನಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಮೂಲತಃ ಮಂಡ್ಯ ಜಿಲ್ಲೆಯವರು. ನಲ್ಲಿ ಮೂಳೆ ಕಂಟೆಂಟ್ಯಿಂದ ಫೇಮಸ್ ಆದ ಇವರು, ಡೈರೆಕ್ಟರ್ ಆಗಬೇಕು ಎಂದುಕೊಂಡಿದ್ದರಂತೆ. ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಎಂಟ್ರಿ ಕೊಟ್ಟಿದ್ದಾರೆ.
ಗಿಲ್ಲಿ ನಟ ಐಟಿಐ ಓದಿದ್ದಾರೆ. ಮಂಡ್ಯದಲ್ಲಿ ಓದು ಮುಗಿಸಿರುವ ಇವರು, ಅಲ್ಲಿಂದ ಸೀದಾ ಬಂದಿಳಿದಿದ್ದೆ ಬೆಂಗಳೂರು ಮಹಾನಗರಿಗೆ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಧೈರ್ಯ ಮಾಡಿ ಮಂಡ್ಯದ ಮಳವಳ್ಳಿಯಿಂದ ಬೆಂಗಳೂರಿಗೆ ಬಂದಾಯ್ತು. ಬರುವ ತನಕ ಏನು ಮಾಡಬೇಕು ಎಂಬ ಐಡಿಯಾ ಇರಲಿಲ್ಲ. ಸ್ನೇಹಿತರ ಸಹಾಯದಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ ಕೆಲಸಕ್ಕೆ ಸೇರಿದೆ ಎಂದು ಈ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಹಳ್ಳಿಯಿಂದ ಬೆಂಗಳೂರಿಗೆ ಮಕ್ಕಳು ಬಂದರೆ ಮುಗೀತು, ಮಗ ಏನೋ ಸಂಪಾದನೆ ಮಾಡಿಬಿಡುತ್ತಾನೆ ಅಂತ ಮನೆಯವರು, ಓ ಅವನು ಉದ್ಧಾರ ಆಗೋದಾ ಕಣೋ ಅಂತ ಊರವರು ಅಂದುಕೊಂಡು ಬಿಡುತ್ತಾರೆ. ಅವರಿಗೆ ಉತ್ತರ ಕೊಡುವುದಕ್ಕೂ ಆಗುವುದಿಲ್ಲ, ಜವಾಬ್ದಾರಿ ನಿಭಾಯಿಸದೇ ಇರುವುದಕ್ಕೂ ಆಗುವುದಿಲ್ಲ. ಅಂಥದ್ದೇ ಸ್ಥಿತಿಯಲ್ಲಿ ನಾನು ಸಿಕ್ಕಿ ಹಾಕಿಕೊಂಡಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ಗಿಲ್ಲಿ ನಟ ನೆನೆದಿದ್ದಾರೆ.
ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿದರೂ ಹಣ ಮಾತ್ರ ಸಿಗುತ್ತಿರಲಿಲ್ಲ. ಸಿನಿಮಾ ಇಂಡಸ್ಟ್ರಿ ಬಿಡುವುದಕ್ಕೆ ಇಷ್ಟವಿರದೆ ಸೆಟ್ ಕೆಲಸಕ್ಕೆ ಸೇರಿದೆ. ಆ ಕೆಲಸವನ್ನು ಮಾಡುತ್ತಿರುವಾಗ ನೋವು ಕಾಡುತ್ತಿತ್ತು. ಏನೋ ಅಂದುಕೊಂಡು ಏನೋ ಮಾಡುತ್ತಿದ್ದೀನಲ್ಲ ಅಂದುಕೊಂಡೆ. ಆಗ ನಾನು ಸ್ಕ್ರಿಪ್ಟ್ ಗಳನ್ನು ಬರೆಯೋದಕ್ಕೆ ಶುರು ಮಾಡಿದೆ. ಸ್ಕಿಟ್ ಮಾಡುವುದಕ್ಕೆ ಶುರು ಮಾಡಿದೆ. ಆದರೆ ಹಣ ಸಿಗುತ್ತೆ ಅಂತ ಸೆಟ್ ಹಾಕುವ ಕೆಲಸದಲ್ಲಿಯೇ ಇದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರು.
ಗಿಲ್ಲಿ ನಟ ಪಕ್ಕಾ ಮಂಡ್ಯ ಸ್ಟೈಲ್ ನಲ್ಲಿ ಮೂರು ಶಾರ್ಟ್ ಸಿನಿಮಾಗಳನ್ನು ಮಾಡಿದ್ದಾರೆ. ಈ ಶಾರ್ಟ್ ಮೂವಿಗಳಿಂದಲೇ ಜನರ ಮನಗೆದ್ದಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೂಸೈಡ್ ಮಾಡಿಕೊಂಡಿದ್ದು, ಟಿಕ್ ಟಾಕ್ನಲ್ಲಿ ಹೆಂಡತಿ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿರುತ್ತಾಳೆ. ಆನ್ ಲೈನ್ ಕ್ಲಾಸಿಗೆ ಅಂತ ಮೊಬೈಲ್ ತೆಗೆದುಕೊಟ್ಟರೆ ಮಗಳೂ ಏನೆಲ್ಲಾ ಮಾಡುತ್ತಾಳೆ ಎಂಬ ವಿಚಾರವನ್ನಿಟ್ಟುಕೊಂಡು ಈ ಮೂರು ಶಾರ್ಟ್ ಫಿಲ್ಮ್ಗಳನ್ನು ಮಾಡಿದ್ದಾರೆ. ಅದು ಪಕ್ಕಾ ಮಂಡ್ಯ ಭಾಷೆಯಲ್ಲಿದ್ದು, ಜನರನ್ನು ನಗೆಗಡಲಲ್ಲಿ ತೇಲಿಸುತ್ತವೆ.
ಈಗ ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಗೆ ಬಂದಿದ್ದಾರೆ. ಗಿಲ್ಲಿ ನಟ ಅವರಿಗೆ ಜನರು ಬಿಗ್ ಬಾಸ್ ಮನೆಗೆ ಜಂಟಿಯಾಗಿ ಹೋಗಿದ್ದಾರೆ. ಗಿಲ್ಲಿ ನಟ ಅವರು ಜಂಟಿಯಾಗಿ ಬಿಗ್ ಬಾಸ್ ಮನೆ ಒಳಗೆ ಜಂಟಿಯಾಗಿ ಹೋಗಬೇಕು ಎಂದು ಆಡಿಯನ್ಸ್ ವೋಟ್ ಮಾಡಿದರು. ಈಗ ಗಿಲ್ಲಿ ನಟ ಮತ್ತು ಕೊತ್ತಲವಾಡಿ ನಟಿ ಕಾವ್ಯಾ ಶೈವ ಬಿಗ್ ಬಾಸ್ ಕನ್ನಡ ಮನೆ ಒಳಗೆ ಹೋಗಿದ್ದಾರೆ.
ಇದನ್ನೂ ಓದಿ: ಸಮಂತಾ ಎರಡನೇ ಮದುವೆ ಡೇಟ್ ಕೊನೆಗೂ ಫಿಕ್ಸ್!