ಫೋಟೋಶೂಟ್‌ ಹಂಚಿಕೊಂಡು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಗೋಲ್ಡನ್‌ ಸ್ಟಾರ್‌..!

Golden Star Ganesh: ಜುಲೈ 02ರಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ಅನ್ನು ಕೊಟ್ಟಿದ್ದಾರೆ.  

Written by - Deepa A Reddy | Last Updated : Jul 1, 2025, 06:20 PM IST
  • ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಗೋಲ್ಡ್‌ ಸ್ಟಾರ್‌ ಗಣೇಶ್‌.
  • ಸ್ಟೈಲ್ಸ್‌ ಫೋಟೋಶೂಟ್‌ ಹಂಚಿಕೊಂಡ ಗೋಲ್ಟನ್‌ ಸ್ಟಾರ್‌.
  • ಫೋಟೋಶೂಟ್‌ ಮೂಲಕ ಅಭಿಮಾನಿಗಳಿಗೆ ಮೆಶೇಜ್‌ ಕೊಟ್ಟ ಗಣೇಶ್‌.
ಫೋಟೋಶೂಟ್‌ ಹಂಚಿಕೊಂಡು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಗೋಲ್ಡನ್‌ ಸ್ಟಾರ್‌..!

Golden Star Ganesh: ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಗಣೇಶ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜುಲೈ 02 ನೇ ತಾರೇಖು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ಒಂದನ್ನು ಕೊಟ್ಟಿದ್ದಾರೆ. 

Add Zee News as a Preferred Source

ಕನ್ನಡ ಚಿತ್ರರಂಗದ ಬಹುಬೇಡಿಕೆ ನಟರಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೂಡ ಒಬ್ಬರು. ತಮ್ಮ ಅದ್ಭುತ ಅಭಿನಯ ಹಾಗೂ ಕಾಮಿಡಿಯ ಮೂಲಕವೇ ಅವರು ತುಂಬಾ ಡಿಮ್ಯಾಂಡ್‌ ಸೃಷ್ಟಿಸಿದ್ದಾರೆ. ಅಷ್ಟೇ, ಅಲ್ಲ ಅಭಿಮಾನಿಗಳಿಗೆ ಫೇವರೇಟ್‌ ಕೂಡ ಆಗಿದ್ದಾರೆ. ಹೀಗೆ ಸಿನಿಮಾಗಳಷ್ಟೇ ಅಲ್ಲದೆ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಗಣೇಶ್‌ ಅವರಿಗೆ ಜುಲೈ 02 ರಂದು ಹುಟ್ಟುಹಬ್ಬದ ಸಂಭ್ರಮ. ಈ ದಿನದಂದು ಅವರು 47ನೇ ವಸಂತಕ್ಕೆ ಕಾಲಿಡಲಿದ್ದು, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಆಚರಿಸುವ ಜೋಶ್‌ನಲ್ಲಿದ್ದರು. ಆದರೆ,  ಗಣೇಶ್‌ ಅವರ ನಿರ್ಧಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಇದನ್ನೂ ಓದಿ: ಈ ಬಾರಿ ಬಿಗ್‌ ಬಾಸ್‌ ಹೋಸ್ಟ್‌ ಮಾಡಲು ಸುದೀಪ್‌ ಪಡೆಯುತ್ತಿರುವ ಸಂಭಾವನೆ ಇದು... ಕಿಚ್ಚನೇ ಬಿಚ್ಚಿಟ್ಟ ಸತ್ಯ!

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಹುಟ್ಟುಹಬ್ಬವನ್ನು ಆಚರಿಸುವುದಕ್ಕಾಗಿ ಅಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿಕ್ಕಾಪಟ್ಟೆ ಕಾತುರದಿಂದ ಕಾಯುತ್ತಿದ್ದರು. ಆದರೆ, ಗಣೇಶ್‌ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಈ ಬಾರಿ ಅಭಿಮಾನಿಗಳನ್ನು ಬೇಟಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಕಾರಣದಿಂದ ಅಭಿಮಾನಿಗಳು ಇದೀಗ ಬೇಸರಗೊಂಡಿದ್ದಾರೆ.

ಇದನ್ನೆಲ್ಲಾ ಅರ್ಥ ಮಾಡಿಕೊಂಡ ಅಭಿಮಾನಿಗಳು, ತಮ್ಮ ನೆಚ್ಚಿನ ಸ್ಟಾರ್‌ ನಟ ಬೇಗನೇ ಶೂಟಿಂಗ್‌ ಸಿನಿಮಾದ ಶೂಟಿಂಗ್‌ ಮುಗಿಸಿ ಯಶಸ್ಸನ್ನು ಗಳಿಸಲಿ ಎಂದು ಎಲ್ಲಾ ಸೆಲೆರೇಷನ್‌ ಅನ್ನು ಒಟ್ಟಿಗೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಅಷ್ಟರಲ್ಲೇ ನಮ್ಮ ನೆಚ್ಚಿನ ನಾಯಕನನ್ನು ಹುಟ್ಟುಹಬ್ಬದಂದು ನೋಡಲು ಸಾಧ್ಯವಾಗಿಲ್ಲವಲ್ಲಾ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗೋಲ್ಡನ್‌ ಸ್ಟಾರ್‌ ಭರ್ಜರಿ ಗಿಫ್ಟ್‌ ಒಂದನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: 5 ಎಕರೆಯಲ್ಲಿ ಮನೆ.. 500 ಎಕರೆ ತೋಪು! ನಿರ್ಮಾಣಕ್ಕಿಳಿದು ಕೋಟಿ ಕೋಟಿ ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದ ಖ್ಯಾತ ನಟ

ಹೌದು,  47ನೇ ವಯಸ್ಸಿನಲ್ಲಿಯೂ ಸಿಕ್ಕಾಪಟ್ಟೆ ಹ್ಯಾಂಡ್‌ಸಮ್‌ ಹಾಗೂ ಎನರ್ಜಿಟಿಕ್‌ ಆಗಿ ಇರುವುದು ಗೊತ್ತೇ ಇದೆ. ಆದರೆ, ಇದೀಗ ಗಣೇಶ್‌ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ಟೈಲಿಶ್‌ ಆದ ಫೋಟೋಶೂಟ್‌ ಒಂದನ್ನು ಮಾಡಿಸಿಕೊಂಡಿದ್ದಾರೆ. ನಿತ್ಯಪ್ರಕಾಶ್ ಅವರು ಈ ಫೋಟೋಗಳನ್ನು ಸೆರೆ ಹಿಡಿದಿದ್ದು, ಈ ಫೋಟೋಗಳನ್ನು ಹುಟ್ಟು ಹಬ್ಬದ ಉಡುಗೊರೆಯಾಗೊ ಗಣೇಶ್‌ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಥಿಯೇಟರ್‌ಗೆ ಜನ ಬರುತ್ತಿಲ್ಲ, ಎನ್ನುವ ದುಖಃದ ನಡುವೆ ಕಳೆದ ವರ್ಷ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾ ಗೆದ್ದು, ಸ್ಯಾಂಡಲ್‌ವುಡ್‌ ಸ್ಥಿತಿಯನ್ನು ಚೇತರಿಸಿಕೊಳ್ಳುವಂತೆ ಮಾಡಿತ್ತು. ಇದೀಗ ಅವರು "ಪಿನಾಕ", "ಯುವರ್ ಯುನಿವರ್ಸಲ್‌ ರಾಮ್" ನಂತಹ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮೋಡಿ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹೊಸ ಸೀಸನ್‌ ಬಿಗ್‌ಬಾಸ್ ಅಬ್ಬರ ಜೋರು.. ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ಕಾಮನ್ ಮ್ಯಾನ್! ಯಾರು ಗೊತ್ತೇ?

 
 
 
 

 
 
 
 
 
 
 
 
 
 
 

A post shared by Ganesh (@goldenstar_ganesh)

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ. 

...Read More

Trending News