Devil: ಡಿಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಡಿವಿಲ್ ಶೂಟಿಂಗ್ ಮತ್ತೆ ಆರಂಭ!!
Devil Update: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ʻಡೆವಿಲ್ ದಿ ಹೀರೋʼ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮತ್ತೆ ಅತಿ ಶೀಘ್ರದಲ್ಲೇ ಪುನಾರಂಭವಾಗಲಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Devil The Hero Shooting Rebegins: ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ʻಡೆವಿಲ್ ದಿ ಹೀರೋʼ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಪುನಾರಂಭವಾಗಲಿದೆ. ನಟ ದರ್ಶನ್ಗೆ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಎಡಗೈ ಮುರಿದುಕೊಂಡಿದ್ದರಿಂದ ಈ ಚಿತ್ರದ ಶೂಟಿಂಗ್ ಕೆಲವು ದಿನಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಆದರೆ ಇದೀಗ ಖುಷಿಯ ವಿಚಾರವೊಂದು ಹೊರಬಂದಿದೆ. ನಟ ದರ್ಶನ್ಗೆ ಎಡಗೈಗೆ ಸಾಕಷ್ಟು ಪೆಟ್ಟು ಬಿದ್ದಿದರೂ, ಸದ್ಯ ಈ ನಟ ಚೇತರಿಸಿಕೊಂಡಿದ್ದಾರೆ. ʻಡೆವಿಲ್ ದಿ ಹೀರೋʼ ಸಿನಿಮಾದ ಚಿತ್ರೀಕರಣ ಮತ್ತೆ ಇದೇ ಮೇ.15 ರಿಂದ ಮತ್ತೆ ಆರಂಭವಾಗಲಿದೆ. ಡಿಬಾಸ್ ಇತ್ತೀಚೆಗೆ ಸಂವಾದವೊಂದರಲ್ಲಿ ಈ ಚಿತ್ರವನ್ನು ಅಕ್ಟೋಬರ್ನಲ್ಲಿ ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆದರೆ ಕೆಲವು ತಿಂಗಳು ವಿಳಂಬವಾಗಬಹುದೆಂಬ ಮಾಹಿತಿ ಬಹಿರಂಗಪಡಿಸಿದ್ದರು.
ಇದನ್ನೂ ಓದಿ: Devil: ಅಕ್ಷಯ ತೃತೀಯದಂದು ಚಾಲೆಂಜಿಂಗ್ ಸ್ಟಾರ್ ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಔಟ್: ದರ್ಶನ್ ಲುಕ್ ಹೇಗಿದೆ ಗೊತ್ತೇ??
ನಟ ದರ್ಶನ್ ಇಷ್ಟೊತ್ತಿಗಾಗಲೇ ಶೇಕಡ 70 ರಷ್ಟು ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಆದರೆ ಇದೀಗ ತಡವಾಗಿದೆಂದು ಹೇಳಿಕೊಂಡಿದ್ದಾರೆ. ನಿನ್ನೆ ಅಕ್ಷಯ ತೃತಿಯದಂದು ಡೆವಿಲ್ ಚಿತ್ರದ ಮೇಕಿಂಗ್ ಗ್ಲಿಂಪ್ಸ್ ವಿಡಿಯೋವೊಂದು ಚಿತ್ರತಂಡ ರಿಲೀಸ್ ಮಾಡಿತ್ತು. ಇದರಲ್ಲಿ ನಿರ್ದೇಶಕ ಮಿಲನ ಪ್ರಕಾಶ್, ಕ್ಯಾಮರಾಮ್ಯಾನ್ ಸುಧಾಕರ್ ಹಾಗೂ ನಟ ದರ್ಶನ್ ಕ್ಯಾಮರಾ ಮುಂದೆ ನಟಿಸುತ್ತಿರುವುದೆಲ್ಲಾ ಹೈಲೈಟ್ ಆಗಿದೆ.
ಇದಕ್ಕೂ ಮುಂಚೆ ಬಾಕ್ಸ್ಆಫೀಸ್ ಸುಲ್ತಾನ ಜನ್ಮದಿನ ಫೆಬ್ರವರಿ 16 ರಂದು ಡೆವಿಲ್ ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್ ಮಾಡಲಾಗಿತ್ತು. ಈ ಎರಡೂ ವಿಡಿಯೋಗಳಲ್ಲಿ ದರ್ಶನ್ ಕಪ್ಪು ಹಾಗೂ ಕೆಂಪು ಬಣ್ಣದ ಸೂಟ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಗ್ಲಿಂಪ್ಸ್ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆ ಕುತೂಹಲಗಳನ್ನು ಹೆಚ್ಚಿಸಿದೆ. ಇನ್ನೂ ಅಭಿಮಾನಿಗಳು ನೆಚ್ಚಿನ ನಟನನ್ನು ಬೆಳ್ಳಿತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.