ಬೆಂಗಳೂರು : ತಮ್ಮ ಚಿತ್ರವನ್ನು ತನ್ನ ಮಗುವಿನಂತೆ ಪೋಷಿಸಿ ಅದರ ಗೆಲುವಿಗೆ ಕಾರಣರಾದವರು ಸಂಜು ವೆಡ್ಸ್ ಗೀತಾ -2 ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಿರ್ದೇಶಕ ನಾಗಶೇಖರ್. ಬಿಡುಗಡೆ ಸಮಯದಲ್ಲೇ ಹಲವಾರು ಅಡೆ ತಡೆಗಳನ್ನು ಎದುರಿಸಿದ ಸಂಜು ವೆಡ್ಸ್ ಗೀತಾ -2 ಚಿತ್ರ ನಂತರ ತರಾತುರಿಯಲ್ಲಿ ರಿಲೀಸಾಯಿತು.
ಹಾಡು, ಕ್ಯಾಮೆರಾ ವರ್ಕ್ ಎಲ್ಲಾ ಅದ್ಭುತವಾಗಿ ಮೂಡಿಬಂದಿದ್ದರೂ, ಚಿತ್ರದಲ್ಲಿ ಏನೋ ಕೊರತೆಯಿದೆ ಅಂತ ನಿರ್ದೇಶಕರಿಗೆ ಅನಿಸಿದ ತಕ್ಷಣ, ಎರಡೇ ದಿನಕ್ಕೆ ಥೇಟರುಗಳಿಂದ ಸಿನಿಮಾನ ಹಿಂಪಡೆದು, ಹೊಸದಾಗಿ 21 ನಿಮಿಷಗಳ ಮನಮಿಡಿಯುವ ಸನ್ನಿವೇಶಗಳನ್ನು ಸೇರಿಸಿ, ಜೂನ್ 6ರಂದು ಚಿತ್ರವನ್ನು ರೀರಿಲೀಸ್ ಮಾಡಲಾಗಿತ್ತು. ಚಿತ್ರ ನೋಡಿದ ಪ್ರೇಕ್ಷಕರು, ಅಲ್ಲದೆ ಡಾ.ಶಿವರಾಜ್ ಕುಮಾರ್, ನಿರ್ದೇಶಕರಾದ ಆರ್.ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್, ಕೆಎಂ.ಚೈತನ್ಯ, ಸುನಿ, ದಯಾಳ್, ಎಸ್.ಮಹೇಂದರ್ ಸೇರಿದಂತೆ ಹಲವಾರು ಸೆಲಬ್ರಟಿಗಳು ಚಿತ್ರನೋಡಿ ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ : ದಿಢೀರನೇ ಪ್ರಾಣ ಸ್ನೇಹಿತೆಯ ಜೊತೆ ಸಪ್ತಪದಿ ತುಳಿದ ಸ್ಟಾರ್ ನಟಿ! ಶಾಕ್‌ನಲ್ಲಿ ಅಭಿಮಾನಿಗಳು
ಬಹುಶಃ ಯಾವ ನಿರ್ಮಾಪಕರೂ ಇಂಥ ಧೈರ್ಯ ಮಾಡಲಾರರು. ಇದೀಗ ಸಂಜು ವೆಡ್ಸ್ ಗೀತಾ -2 ಚಿತ್ರ 25 ದಿನಗಳ ಯಶಸ್ವೀ ಪ್ರದರ್ಶನವನ್ನು ಪೂರೈಸಿದೆ. ಅದರ ಸೆಲಬ್ರೇಶನ್ ಕಾರ್ಯಕ್ರಮವನ್ನು ಬುಧವಾರ ಸಂಜೆ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಆ ಸಂಭ್ರಮದ ವೇದಿಕೆಯಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಪಾಲ್ಗೊಂಡು ಯಶಸ್ಸಿಗೆ ಕಾರಣರಾದ ಇಡೀ ಸಂಜು ವೆಡ್ಸ್ ಗೀತಾ -2 ಚಿತ್ರತಂಡಕ್ಕೆ ಸ್ಮರಣ ಫಲಕಗಳನ್ನು ವಿತರಿಸಿದರು.
ನಂತರ ಮಾತನಾಡಿದ ಉಪೇಂದ್ರ ನಾನು ಇಲ್ಲಿಗೆ ಬಂದಿರೋದೇ ಇಂಥ ನಿರ್ಮಾಪಕರಿಗೆ ಪ್ರೋತ್ಸಾಹ ಕೊಡೋಕೆ. ನಾವೆಲ್ಲ ಇವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೊಂಡಾಡಿದರು. ಇನ್ನೊಂದು ಬಾರಿ ಸಿನಿಮಾ ತೋರಿಸಿ ಹಿಟ್ ಮಾಡಲು ಗಟ್ಟಿ ಗುಂಡಿಗೆ ಇರಬೇಕು. ಹಿಂದೆಲ್ಲಾ ಒಂದು ಸಿನಿಮಾ 3 ಥೇಟರುಗಳಲ್ಲಿ 100 ದಿನ ಓಡಿ ದಾಖಲೆ ಮಾಡುತ್ತಿತ್ತು. ಆದರೆ ಈಗ 100 ಸಿನಿಮಾ ಮಂದಿರಗಳಲ್ಲಿ ಮೂರು ದಿನ ಓಡಿದರೆ ಆ ನಿರ್ಮಾಪಕ ಗೆದ್ದಂತೆ. ಹಾಗಾಗಿ 25 ದಿನ ದೊಡ್ಡ ದಾಖಲೆಯೇ ಎಂದು ನಿರ್ಮಾಪಕ ಕುಮಾರ್ ಅವರನ್ನು ಮೆಚ್ಚಿಕೊಂಡರು.
ಇದನ್ನೂ ಓದಿ : ಯಶ್, ರಣಬೀರ್ ಕಪೂರ್ ಅಭಿನಯದ ರಾಮಾಯಣದ ಟೈಟಲ್ ಟೀಸರ್ ಬಿಡುಗಡೆ...! ಕೂತುಹಲ ಮೂಡಿಸಿದ ದೃಶ್ಯ ಮಹಾಕಾವ್ಯ..!
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಟ ಸಾಧು ಕೋಕಿಲ ಮಾತನಾಡಿ ನಾಗಶೇಖರ್ ಉಪೇಂದ್ರ ಇಬ್ಬರೂ ಸಿನಿಮಾ ಲವರ್ಸ್, ಸಿನಿಮಾ ಎಂದ ಮೇಲೆ ಏಳು ಬೀಳುಗಳು, ಹೊಗಳಿಕೆ, ತೆಗಳಿಕೆ ಇದ್ದದ್ದೇ. ಚಿತ್ರರಂಗ ಕುಗ್ಗುತ್ತಾ ಇರುವ ಸಂದರ್ಭದಲ್ಲಿ ಇಂಥ ಸಿನಿಮಾಗಳು ಬರಬೇಕು ಎಂದು ಹೇಳಿದರು.
ನಂತರ ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು ಎಂಬ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಈ ಸಕ್ಸಸ್ ನಿಜವಾಗಿಯೂ ನಮ್ಮ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಿರ್ದೇಶಕ ಹಠವಾದಿ ನಾಗಶೇಖರ್ ಅವರಿಗೆ ಸಲ್ಲಬೇಕು ಎಂದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್, ಪ್ರಚಾರಕರ್ತ ನಾಗೇಂದ್ರ, ನಾಯಕನಟ ಶ್ರೀನಗರ ಕಿಟ್ಟಿ, ಸಾಹಿತಿ ಕವಿರಾಜ್, ಸಂಭಾಷಣೆಗಾರ ಡಿಕೆ ಚಕ್ರವರ್ತಿ ಇವರೆಲ್ಲ ಸ್ಮರಣಫಲಕ ಸ್ವೀಕರಿಸಿ ನಿರ್ಮಾಪಕ, ನಿರ್ದೇಶಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಪೊಲೀಸ್ ಅಧಿಕಾರಿಗಳಾದ ಎಜಿಡಿಪಿ ಅರುಣ್ ಚಕ್ರವರ್ತಿ, ಎಸಿಪಿ ಪೂರ್ಣಚಂದ್ರ ತೇಜಸ್ವಿ ಹಾಗೂ ಜಯರಾಜ್, ಪೊಲೀಸ್ ಇನ್ ಸ್ಪೆಕ್ಟರ್ ಅರುಣ್ ಅಲ್ಲದೆ ಫಾರೆಸ್ಟ್ ಆಫೀಸರ್ ಡಾ.ರಾಜು, ಚಂದ್ರಶೇಖರ್,ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಜುಕೇಶನ್) ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಿನಿಮಾ ಬಗ್ಗೆ ಮಾತನಾಡಿದರು. ಆನಂದ್ ಆಡಿಯೋ ಶ್ಯಾಮ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಡಿಜಿಟಲ್ ಶ್ರೀನಾಥ್ ಹಾಗೂ ಇಡೀ ಚಿತ್ರತಂಡಕ್ಕೆ ಸ್ಮರಣ ಫಲಕ ವಿತರಿಸಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









