#JrChirubirthday : ದಿ. ನಟ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಪುತ್ರನಿಗೆ ಇಂದು ಮೊದಲ ವರ್ಷದ ಜನ್ಮದಿನದ ಸಂಭ್ರಮ

#JrChirubirthday : ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮಗ ಜೂನಿಯರ್ ಚಿರುಗೆ ಇಂದು ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮ.

Written by - Yashaswini V | Last Updated : Oct 22, 2021, 06:30 AM IST
  • ಜೂನಿಯರ್ ಚಿರು (Jr. Chiru) ಮೊದಲ ವರ್ಷದ ಜನ್ಮದಿನಾಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ
  • ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂನಿಯರ್ ಚಿರು
  • ಸದ್ಯ ಜೂನಿಯರ್ ಚಿರುವಿನಲ್ಲೇ ಚಿರಂಜೀವಿಯನ್ನು ಕಾಣುತ್ತಿರುವ ಮೇಘನಾ ರಾಜ್ ಇಂದು ತಮ್ಮ ಪುತ್ರನ ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದಾರೆ
#JrChirubirthday : ದಿ. ನಟ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಪುತ್ರನಿಗೆ ಇಂದು ಮೊದಲ ವರ್ಷದ ಜನ್ಮದಿನದ ಸಂಭ್ರಮ

ಬೆಂಗಳೂರು:  ಚಂದನವನದ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಖ್ಯಾತ ನಟಿ ಮೇಘನಾ ರಾಜ್ ಅವರ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ ಇಂದು ಮೊದಲನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು (ಅಕ್ಟೋಬರ್ 22) ಜೂನಿಯರ್ ಚಿರು ಅವರಿಗೆ ಮೊದಲ ವರ್ಷದ ಸಂಭ್ರಮ. 

ಜೂನಿಯರ್ ಚಿರು (Jr. Chiru) ಮೊದಲ ವರ್ಷದ ಜನ್ಮದಿನಾಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಖಾತೆ ಮೂಲಕ ತಿಳಿಸಿರುವ ಮೇಘನಾ ರಾಜ್, ರಾಯನ್ ರಾಜ್ ಸರ್ಜಾ ಆಟವಾಡುತ್ತಿರುವ ಫೋಟೋಗೆ ಪಾರ್ಟಿ ಸಾಂಗ್ ಸೆಟ್ ಮಾಡಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಜೂನಿಯರ್ ಚಿರು ಮ್ಯೂಸಿಕ್ ಕೇಳುತ್ತಿರುವಂತೆ ಗ್ರಾಫಿಕ್ಸ್ ಮಾಡಲಾಗಿದ್ದು ಬಾಯಿಗೆ ಬೆರಳಿಟ್ಟುಕೊಂಡಿರುವ ಚಿಂಟು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಇದರ ಜೊತೆಯಲ್ಲಿಯೇ ಹುಟ್ಟು ಹಬ್ಬಕ್ಕೆ (Happy Birthday Raayan Raj Sarjaa) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Meghana Chiranjeevi Sarja (@meghana_chiranjeevi_sarja_)

ಇದನ್ನೂ ಓದಿ- ನಟಿ ಮೇಘನಾ ರಾಜ್ ಗೆ ಅಕ್ಟೋಬರ್ ತಿಂಗಳು ತುಂಬಾ ವಿಶೇಷ: ಯಾಕೆ ಗೊತ್ತಾ..?

ಮತ್ತೊಂದೆಡೆ ದಿವಂಗತ ಚಿರಂಜೀವಿ ಹಾಗೂ ನಟಿ ಮೇಘನಾ ರಾಜ್ (Meghana Raj) ಅವರ ಆಪ್ತ ಗೆಳೆಯ ಪನ್ನಾಗಾಭರಣ ಅವರ ಪುತ್ರ ವೇದ ಭರಣ, ರಾಯನ್ ರಾಜ್ ಸರ್ಜಾ ಜನ್ಮದಿನಕ್ಕೆ ವಿಶೇಷ ಕೇಕ್ ತಯಾರಿಸುತ್ತಿದ್ದಾರೆ. ಈ ವಿಡಿಯೋವನ್ನು ಸಹ ಮೇಘನಾ ಶೇರ್ ಮಾಡಿದ್ದಾರೆ. ಈ ಕ್ಯೂಟ್ ವಿಡಿಯೋದಲ್ಲಿ ಪನ್ನಾಗಾಭರಣ ಪುತ್ರ ಪಾತ್ರೆ ಹಿಡಿದು ಕೇಕ್ ತಯಾರಿಸುತ್ತಿರುವುದನ್ನು ಕಾಣಬಹುದು. 

ಇದನ್ನೂ ಓದಿ- ಯಶ್, ವಿಜಯ್ ದೇವರಕೊಂಡ, ಅವರನ್ನು ಹಿಂದಿಕ್ಕಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಶ್ಮಿಕಾ ಮಂದಣ್ಣ

ಕಳೆದ ವರ್ಷ (2020) ಹೃದಯ ಸ್ತಂಭನದಿಂದಾಗಿ ಪತಿ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಸಂತೋಷದಿಂದ ಇದ್ದ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ ತಾಕಿತೋ ಎಂಬಂತೆ ಕತ್ತಲೆ ತುಂಬಿದ ಮೇಘನಾ ರಾಜ್ ಅವರ ಜೀವನದಲ್ಲಿ ಜೂನಿಯರ್ ಚಿರು 2020ರ ಅಕ್ಟೋಬರ್ 22ರಂದು ಬೆಳಕು ಚೆಲ್ಲಿದರು. ಸದ್ಯ ಜೂನಿಯರ್ ಚಿರುವಿನಲ್ಲೇ ಚಿರಂಜೀವಿಯನ್ನು ಕಾಣುತ್ತಿರುವ ಮೇಘನಾ ರಾಜ್ ಇಂದು ತಮ್ಮ ಪುತ್ರನ ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದಾರೆ. ಈ ಪುಟ್ಟ ಕಂದಮ್ಮನಿಗೆ ನಮ್ಮ ಜೀ ವಾಹಿನಿಯ ಪರವಾಗಿ ಜನ್ಮ ದಿನದ ಶುಭಾಶಯಗಳು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News