)
Bollywood actor success story: ವಿಶಾಲ್ ಮಲ್ಹೋತ್ರಾ 30 ವರ್ಷಗಳಿಂದ ನಟನೆಯಲ್ಲಿ ಸಕ್ರಿಯರಾಗಿರುವ ಈ ನಟ ಫೇಮಸ್ ಆಗಿದ್ದು ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಜಾಹೀರಾತಿನ ಮೂಲಕ ಅಂದರೆ ತಪ್ಪಿಲ್ಲ. ಹಾರ್ಪಿಕ್ ಜಾಹೀರಾತು ಅವರಿಗೆ ಹೆಚ್ಚಿನ ಜನಪ್ರಿಯತೆ ಜೊತೆಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಿತು. ಬಾಂದ್ರಾದಲ್ಲಿ ತಮ್ಮದೇ ಸ್ವಂತ ಮನೆ ಖರೀದಿಸಿದರು.
ಜಾಹೀರಾತಿನಿಂದಲೂ ಅನೇಕ ಮಾಡೆಲ್ಗಳು ಫೇಮಸ್ ಆಗಿದ್ದು ಹೊಸದಲ್ಲ. ‘ಹಾರ್ಪಿಕ್ ಟಾಯ್ಲೆಟ್ ಕ್ಲೀನರ್’ನ ಜಾಹೀರಾತು ನಟ ವಿಶಾಲ್ ಮಲ್ಹೋತ್ರಾ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಶಾಲ್, ‘ನಾನು ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಲ ಬಯಸಿದ್ದೆ. ಆದರೆ ನಿರ್ಮಾಪಕರು ಮತ್ತು ನಿರ್ದೇಶಕರು ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಒಬ್ಬ ಪ್ರಭಾವಿ ವ್ಯಕ್ತಿ ನಿಮ್ಮನ್ನು ತಿರಸ್ಕರಿಸಿದಾಗ ವೃತ್ತಿಜೀವನ ಕೊನೆಗೊಳ್ಳುತ್ತದೆ. ನನಗೆ ಎರಡು ವರ್ಷಗಳ ಕಾಲ ಯಾವುದೇ ಶಾಶ್ವತ ಪಾತ್ರಗಳು ಸಿಗಲಿಲ್ಲ. ನನಗೆ ಆಗ ತುಂಬಾ ಭಯ ವಾಗಿತ್ತು’ ಎಂದು ಹೇಳಿದ್ದಾರೆ.
‘ಆ ಬಳಿಕ ನನಗೆ ಒಂದು ಜಾಹೀರಾತಿನಲ್ಲಿ ಅವಕಾಶ ಸಿಕ್ಕಿತು. ಅದು ಹಾರ್ಪಿಕ್ ಟಾಯ್ಲೆಟ್ ಕ್ಲಿನರ್ ಜಾಹೀರಾತು. ಇದು ನನ್ನ ಗುರುತಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನನಗೆ ನಾನೇ ಕೇಳಿಕೊಂಡೆ? ಈ ಜಾಹೀರಾತು ಹೊಸ ಗುರುತು ನೀಡಿತು’ ಎಂದಿದ್ದಾರೆ.
‘ಹಾರ್ಪಿಕ್ ಜಾಹೀರಾತಿನಿಂದ ನಾನು ಸಾಕಷ್ಟು ಹಣ ಸಂಪಾದಿಸಿದ್ದೇನೆ. ಬಾಂದ್ರಾದಲ್ಲಿ ಒಂದು ಮನೆ ಖರೀದಿಸಿದ್ದೇನೆ. ನನ್ನ ಬಳಿ ಕಾರು ಇಲ್ಲ. ನಾನು ಓಲಾ, ಉಬರ್ನಲ್ಲಿ ಓಡಾಡುತ್ತೇನೆ. ಎಲೆಕ್ಟ್ರಿಕ್ ಹೀರೋ ಸೈಕಲ್ ಮಾತ್ರ ಇದೆ. ನನ್ನ ಹೆಂಡತಿ ಬಳಿ ಕಾರು ಇದೆ. ಅದನ್ನು ನನ್ನ ಮಕ್ಕಳನ್ನು ಡ್ರಾಪ್ ಮಾಡಲು ಮತ್ತು ಕರೆದುಕೊಂಡು ಹೋಗಲು ಬಳಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಕಾನ್ಸ್ಟೇಬಲ್ ಘೋರ್ಪಡೆ’, ‘ಮೀಠಾ ಕಟ್ಟಾ ಪ್ಯಾರ್ ಹಮಾರಾ’ ಮತ್ತು ‘ಬಂದಾ ಯೇ ಬಿಂದಾಸ್ ಹೈ’ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ‘ದಿ ವಿಶಾಲ್ ಅವರ್’ ಎಂಬ ತಮ್ಮದೇ ಆದ ಪಾಡ್ಕ್ಯಾಸ್ಟ್ ನಡೆಸತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.