)
ಬೆಂಗಳೂರು: 79ನೇ ಸ್ವತಂತ್ರ ದಿನಾಚರಣೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಸರದಿಂದ ಆಚರಣೆ ಮಾಡುತ್ತೇವೆ ಎಂದು ದರ್ಶನ್ ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ ನಿನ್ನೆ ಸುಪ್ರೀಂ ನೀಡಿದ ಶಾಕ್ ನಿಂದ ಹೊರಬರಲಾಗದೆ ದರ್ಶನ್, ಪವಿತ್ರಾ ಇತರ ಐವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಅಷ್ಟಕ್ಕೂ ಮೊದಲ ದಿನ ದರ್ಶನ್ , ಪವಿತ್ರಾ ಗೌಡ ದಿನಚರಿ ಹೇಗಿತ್ತು ಇಲ್ಲಿದೆ...
ನಿನ್ನೆ ಸುಪ್ರೀಂ ನೀಡಿದ ಶಾಕ್ನಲ್ಲಿಯೇ ಕೊಲೆ ಆರೋಪಿಗಳಾದ ದರ್ಶನ್ ಮತ್ತು ಇತರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ನಿನ್ನೆ ರಾತ್ರಿ ಒಲ್ಲದ ಮನಸ್ಸಿನಲ್ಲಿ ಜೈಲೂಟ ಸೇವಿಸಿದ್ದ ದರ್ಶನ್ ಮತ್ತು ಪವಿತ್ರ ಕಣ್ಣೀರಿನಲ್ಲೇ ಕೈ ತೊಳೆಯುತ್ತಿದ್ದಾರೆ.
ತಡರಾತ್ರಿವರೆಗೂ ದರ್ಶನ್ ಬೇಸರದಲ್ಲಿದ್ದರು. ಪವಿತ್ರ ಗೌಡ ಮಾತ್ರ ಕಣ್ಣೀರಲ್ಲಿ ಕಾಲ ಕಳೆದಿದ್ದಾರೆ. ಉಳಿದವರ ನಡುವೆಯು ಬೇಸರದ ಮೌನ ಆವರಿಸಿತ್ತು. ಇದರ ನಡುವೆ ತಡರಾತ್ರಿ ನಿದ್ರೆಗೆ ಜಾರಿದ್ದ ದರ್ಶನ್ ಬೆಳಗ್ಗೆ 6:30 ರ ಸುಮಾರಿಗೆ ಎಚ್ಚರಗೊಂಡಿದ್ದು, ನಿತ್ಯ ಕರ್ಮ ಮುಗಿಸಿದ್ದಾರೆ. ಜೈಲಿನ ಮೇನುವಿನ ಪ್ರಕಾರ ಉಪ್ಪಿಟ್ಟು ಮತ್ತು ಸ್ವತಂತ್ರ ದಿನಾಚರಣೆ ಅಂಗವಾಗಿ ನೀಡಿದ ಲಾಡು ಸೇವಿಸಿದ್ದು, ಬೇಸರದಲ್ಲಿಯೇ ದಿನ ಕಳೆದಿದ್ದಾರೆ.
ಇದರ ನಡುವೆ ಪರಪ್ಪನ ಅಗ್ರಹಾರ ಜೈಲು ಅದಿಕಾರಿಗಳು ಆರೋಪಿಗಳಿಗೆ UTP ನಂಬರ್ ಜನರೇಟ್ ಮಾಡಿದ್ದು, 7313- ಪವಿತ್ರ ಗೌಡ , 7314 - ದರ್ಶನ್, 7315 - ನಾಗರಾಜ್, 7316- ಲಕ್ಷಣ್ , 7317- ಪ್ರದೂಷ್ ಗೆ ನಂಬರ್ ನೀಡಲಾಗಿದೆ.
ನಿನ್ನೆ ಪೊಲೀಸರು ಅರೆಸ್ಟ್ ಪ್ರಕ್ರಿಯೆ ನಡೆಸಿ ಬೆಂಗಳೂರಿಗೆ ಕರೆ ತರುವುದು ತಡವಾದ ಹಿನ್ನೆಲೆ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ನನ್ನು ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಕ್ವಾರಂಟೈನ್ ಜೈಲಿನ ದರ್ಶನ್ ಕೊಠಡಿಗೆ ರವಾನೆ ಮಾಡಿದ್ದಾರೆ.
ಮಧ್ಯಾಹ್ನ ಜೈಲಿನ ಮೇನು ಪ್ರಕಾರ ಮುದ್ದೆ, ಚಪಾತಿ, ಅನ್ನ ಸಾಂಬಾರ್ ಸೇವಿಸಿದ್ದಾರೆ. ಇಂದು ರಜೆ ಹಿನ್ನೆಲೆ ಕುಟುಂಬದವರು ಕೂಡ ಭೇಟಿಗೆ ಆಗಮಿಸದ ಹಿನ್ನೆಲೆ ಪವಿತ್ರ ಗೌಡ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಜೊತೆಯಲ್ಲಿ ಸಹಚರರಿದ್ರು ಆರೋಪಿ ದರ್ಶನ್ ಮಾತ್ರ ಯಾರ ಜೊತೆಯು ಹೆಚ್ಚಾಗಿ ಮಾತನಾಡದೆ ಸುಮ್ಮನಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.