close

News WrapGet Handpicked Stories from our editors directly to your mailbox

ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ಮಾಡಿದ್ರೆ ನಟಿಸಲು ರೆಡಿ: ತಾರಾ

ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವನೆ ಸಿಕ್ಕರೆ ನಾನು ಖಂಡಿತವಾಗಿಯೂ 'ನಿಖಿಲ್ ಎಲ್ಲಿದೀಯಪ್ಪ' ಚಿತ್ರದಲ್ಲಿ ನಟಿಸುತ್ತೇನೆ ಎಂದು ತಾರಾ ಹೇಳಿದ್ದಾರೆ.

Updated: Apr 12, 2019 , 06:47 PM IST
ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ಮಾಡಿದ್ರೆ ನಟಿಸಲು ರೆಡಿ: ತಾರಾ

ಬೆಳಗಾವಿ: ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ನಿರ್ಮಾಣ ಮಾಡುವುದಾದರೆ, ಆ ಸಿನಿಮಾದಲ್ಲಿ ನಟಿಸಲು ಸಿದ್ಧ ಎಂದು ಕನ್ನಡ ಚಿತ್ರರಂಗದ ನಟಿ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಹೇಳಿದ್ದಾರೆ. 

ಇಂದಿಲ್ಲಿ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಾರಾ,  "ಚಿತ್ರದ ನಿರ್ದೇಶಕರು ಕಥೆ ಹಂದರ ಹೇಗೆ ಕಟ್ಟಿದ್ದಾರೆ ಎಂಬುದು ಬಹಳ ಮುಖ್ಯ. ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವನೆ ಸಿಕ್ಕರೆ ನಾನು ಖಂಡಿತವಾಗಿಯೂ 'ನಿಖಿಲ್ ಎಲ್ಲಿದೀಯಪ್ಪ' ಚಿತ್ರದಲ್ಲಿ ನಟಿಸುತ್ತೇನೆ. ಅದರಲ್ಲಿ ನಿಖಿಲ್ ನಾಯಕನಾದರೂ ಪರವಾಗಿಲ್ಲ. ಆ ಚಿತ್ರಕಥೆ ಇಷ್ಟವಾದರೆ ಖಂಡಿತಾ ನಟಿಸಲು ಸಿದ್ಧ" ಎಂದು ಹೇಳಿದರು. 

ಇನ್ನು, ಮಂಡ್ಯದಲ್ಲಿ ಸಿನಿಮಾ ನಟರ ಬಗ್ಗೆ ವೈಯಕ್ತಿಕ ಟಿಕೆ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ ಅವರ ನಡೆಗೆ ಪ್ರತಿಕ್ರಿಯಿಸಿದ ತಾರಾ ಅವರು, ಮುಖ್ಯಮಂತ್ರಿಗಳು ವೈಯಕ್ತಿಕ ವಿಚಾರವನ್ನು ಮಾತನಾಡಬಾರದು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ. ಸುಮಲತಾ ಚುನಾವಣೆಯಲ್ಲಿ ಜಯ ಸಾಧಿಸಲಿದ್ದಾರೆ. ಕೇಂದ್ರದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.