ಸಂಬಂಧದಲ್ಲಿ ಬಿರುಕು ಮೂಡಿರುವ ಸುದ್ದಿಯ ನಡುವೆ, ಸುನೀತಾ ಹೇಳಿದ್ದ ಮಾತು ತುಂಬಾ ವೇಗವಾಗಿ ವೈರಲ್ ಆಗುತ್ತಿದೆ.ಚಮಚಾಗಿರಿ ಮಾಡುವುದಕ್ಕೆ ನನಗೆ ಯಾರೂ ಹಣ ಕೊಡುವುದಿಲ್ಲ. ನೀನೊಬ್ಬ ಲೆಜೆಂಡ್ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಆದರೆ ಅವರು ಮಾತ್ರ ದಾರಿ ತಪ್ಪಿಸುವವರ ಮಧ್ಯೆಯೇ ಇರುತ್ತಾರೆ.

ಗೋವಿಂದ ಮತ್ತು ಸುನೀತಾ ಮದುವೆಯಾಗಿ 38 ವರ್ಷಗಳಾಗಿವೆ. ಆದರೆ ಈ 38 ವರ್ಷಗಳ ಸುದೀರ್ಘ ಸಂಬಂಧ ಮುರಿದು ಬೀಳಲಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಇದೀಗ ಸುನೀತಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮತ್ತು ಗೋವಿಂದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ, ನಟಿ ತಮ್ಮ ಸ್ವಭಾವವನ್ನು ಶಾರುಖ್ ಖಾನ್ ಅಭಿನಯದ ಡರ್ ಚಿತ್ರಕ್ಕೆ ಹೋಲಿಸಿದ್ದಾರೆ. ಇದರ ಜೊತೆಗೆ, ಅವರು ನೀಡಿರುವ ಹೇಳಿಕೆ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.
ನನ್ನ ಗಂಡ ಮತ್ತು ಮಕ್ಕಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ:
ಗೋವಿಂದ ಅವರ ಪತ್ನಿ ಸುನೀತಾ ಇನ್ಸ್ಟಂಟ್ ಬಾಲಿವುಡ್ ಜೊತೆ ಮಾತನಾಡುತ್ತಾ, ತಮ್ಮ 38 ವರ್ಷದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಜೀವನದಲ್ಲಿ ಪ್ರೀತಿ ಮುಖ್ಯ, ಹಾಗೆಯೇ ಒಬ್ಬರನ್ನೊಬ್ಬರು ನಂಬುವುದು ಬಹಳ ಮುಖ್ಯ. ನಾನು ಅವರನ್ನು ನಂಬುತ್ತೇನೆ ಎಂದು ಹೇಳುವುದರ ಜೊತೆಗೆ ಡರ್ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರದೊಂದಿಗೆ ತನ್ನನ್ನು ಹೋಲಿಸಿಕೊಂಡಿದ್ದಾರೆ. ಡರ್ ಚಿತ್ರದಲ್ಲಿ ಶಾರುಖ್ ಖಾನ್ ಹೇಗಿದ್ದರು ಎಂದು ನಿಮಗೆ ನೆನಪಿದೆಯೇ. ಪ್ರೀತಿಯಲ್ಲಿ ನನಗೆ ಅದೇ ಹುಚ್ಚು ಇಷ್ಟ. ನಾನು ತುಂಬಾ ಪೊಸೆಸಿವ್ ಕೂಡಾ . ನಾನು ನನ್ನ ಮಕ್ಕಳು ಮತ್ತು ಗಂಡನನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲ. ಪತಿಯ ಮೇಲೆ ಒಬ್ಬರ ಹಕ್ಕು ಮಾತ್ರ ಇರಬೇಕು. ಇಲ್ಲ ಎಂದಾದರೆ ಅದನ್ನು ಪ್ರೀತಿ ಎಂದು ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಗೋವಿಂದನನ್ನು ದಾರಿ ತಪ್ಪಿಸುವ ಜನರು ಪ್ರಸ್ತುತ ಅವರ ಸುತ್ತುವರೆದಿದ್ದಾರೆ ಎನ್ನುವ ಹೇಳಿಕೆಯನ್ನು ಕೂಡಾ ಸುನೀತಾ ನೀಡಿದ್ದಾರೆ. ನಾನು ಸತ್ಯ ಹೇಳುವಾಗ ಅವರಿಗೆ ಇಷ್ಟವಾಗುವುದಿಲ್ಲ, ನೀವೊಬ್ಬ ಲೆಜೆಂಡ್ ಎಂದು ನಾನು ಸದಾ ಹೇಳುತ್ತಿರುತ್ತಾನೆ. ಆದರೆ ಈ ನಾಲ್ಕು ಜನರೊಂದಿಗೆ ಕುಳಿತು ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ಎಲ್ಲರೂ ನಿಷ್ಪ್ರಯೋಜಕ ವಿಷಯಗಳನ್ನು ಕಲಿಸುತ್ತಿದ್ದಾರೆ. ಅವರು ಗೋವಿಂದನಿಂದ ಹಣವನ್ನು ಪಡೆಯುತ್ತಾರೆ. ಆದ್ದರಿಂದ ಅವರು ಅವನನ್ನು ಹೊಗಳುತ್ತಾರೆ ಎಂದು ಸುನೀತಾ ಹೇಳಿದ್ದಾರೆ.
ನಾನು ಸತ್ಯವನ್ನು ಹೇಳಿದರೆ ಅವರು ಕೋಪಗೊಳ್ಳುತ್ತಾರೆ. ಸತ್ಯವನ್ನು ಕೇಳಲು ದೊಡ್ಡ ಹೃದಯ ಬೇಕು. ಹೆಂಡತಿ ಯಾವಾಗಲೂ ತನ್ನ ಗಂಡನಿಗೆ ಒಳ್ಳೆಯದನ್ನು ಬಯಸುತ್ತಾಳೆ. ತಾಯಿ ಎಂದಿಗೂ ತನ್ನ ಮಗುವಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ನಾನು ಟೀನಾ ಮತ್ತು ಯಶ್ ಜೊತೆಯೂ ಸ್ಪಷ್ಟವಾಗಿ ಮಾತನಾಡುತ್ತೇನೆ. ನಾನು ಸತ್ಯವನ್ನೇ ಮಾತನಾಡುತ್ತೇನೆ ಸತ್ಯವನ್ನು ಕೇಳು ವುದು ನಿಮಗೆ ಸಾಧ್ಯವಿಲ್ಲ ಎಂದಾದರೆ ನನ್ನ ಬಳಿ ಏನನ್ನೂ ಕೇಳಬೇಡಿ ಎಂದು ಖಾರವಾಗಿ ನುಡಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.