ತನ್ನದೇ ಸಿನಿಮಾ ನೋಡಿ ಮುಜುಗರಕ್ಕೊಳಗಾದ ನಟಿ ಸಮಂತಾ ಹೇಳಿದ್ದೇನು ಗೊತ್ತಾ...!

Actress Samantha: ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಎದ್ದಾಗ ಹಿಗ್ಗದೆ, ಬಿದ್ದಾಗ ಕುಗ್ಗದೆ ಎಲ್ಲವನ್ನೂ ಮುಗುಳ್ನಗೆಯೊಂದಿಗೆ ಸ್ವೀಕರಿಸುತ್ತಾ ಬೇರೆಯವರಿಗೂ ಸ್ಫೂರ್ತಿಯಾಗಿರುವ ಪ್ರತಿಭೆ ನಟಿ ಸಮಂತ. 

Written by - Yashaswini V | Last Updated : Apr 22, 2025, 10:59 AM IST
  • ಜೀವನದ ಹೊಸ ಅಧ್ಯಾಯ ಆರಂಭಿಸಿದ ಸಮಂತಾ
  • ತನ್ನದೇ ಸಿನಿಮಾ ನೋಡಿ ಮುಜುಗರ
  • ನಟಿ ಸಮಂತಾ ಹೀಗಂದಿದ್ದೇಕೆ..!
ತನ್ನದೇ ಸಿನಿಮಾ ನೋಡಿ ಮುಜುಗರಕ್ಕೊಳಗಾದ ನಟಿ ಸಮಂತಾ ಹೇಳಿದ್ದೇನು ಗೊತ್ತಾ...!

Actress Samantha New Journey: ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಷಯಗಳಿಗೆ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಲ್ಲಿರುವ ನಟಿ ಸಮಂತಾ ರುತ್ ಪ್ರಭು ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಮೇರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. 
ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ತೆಲುಗು ಹಾರರ್-ಹಾಸ್ಯಮಯ ಚಿತ್ರ 'ಶುಭಂ' ಮೂಲಕ ನಿರ್ಮಾಪಕಿಯಾಗಿ ಅದೃಷ್ಟ ಪರೀಕ್ಷಿಸುತ್ತಿರುವ ನಟಿ ಸಮಂತಾ ತನ್ನದೇ ಸಿನಿಮಾ ನೋಡಿ ಮುಜುಗರಕ್ಕೊಳಗಾದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. 

Add Zee News as a Preferred Source

ಮೊದಲ ಬಾರಿಗೆ ನಿರ್ಮಾಪಕಿಯಾಗಿ ಪದಾರ್ಪಣೆ ಮಾಡಿರುವ ನಟಿ ಸಮಂತಾ ರುತ್ ಪ್ರಭು, ಇತ್ತೀಚೆಗೆ ತಮ್ಮ ನಿರ್ಮಾಣದಲ್ಲಿ ಮೂಡಿಬಂದಿರುವ ತೆಲುಗು ಹಾರರ್-ಹಾಸ್ಯಮಯ ಚಿತ್ರ 'ಶುಭಂ' ಚಿತ್ರದ ಪ್ರಚಾರದ ವೇಳೆ, ಸಿನಿಮಾ ರಂಗದಲ್ಲಿ ಆರಂಭಿಕ ದಿನಗಳಲ್ಲಿ ತಮ್ಮ ಮೊದಲೆರಡು ಸಿನಿಮಾಗಳನ್ನು ಮೋದಿ ತಾವೇ ಮುಜುಗರ ಪಡುವುದಾಗಿ ಹೇಳಿದರು. 

ಇದನ್ನೂ ಓದಿ- ಓರ್ಮ್ಯಾಕ್ಸ್ ಮೀಡಿಯಾ ವರದಿಯಲ್ಲಿ ದಕ್ಷಿಣದ ನಟಿಯರದ್ದೇ ಪ್ರಾಬಲ್ಯ, ನಟರ ಪಟ್ಟಿಯಲ್ಲೂ ಟಾಪ್ 4ರಲ್ಲಿ ಸೌತ್ ಇಂಡಿಯನ್ ಸ್ಟಾರ್ಸ್

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಎಸ್‌ವಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಮಾತನಾಡುತ್ತಾ ಚಲನಚಿತ್ರೋದ್ಯಮದಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಸಮಂತಾ ರುತ್ ಪ್ರಭು, "ನನ್ನ ಮೊದಲ ಎರಡು ಸಿನಿಮಾಗಳನ್ನು ನೋಡಿದರೆ ನನಗೇ ಮುಜುಗರವಾಗುತ್ತದೆ. ನಾನೇಕೆ ಇಷ್ಟೊಂದು ಭಯಾನಕವಾಗಿ ಅಭಿನಯಿಸಿದ್ದೇನೆ ಎಂದು ಆಶ್ಚರ್ಯವಾಗುತ್ತದೆ. ಆದರೆ, ಶುಭಂ ಸಿನಿಮಾದಲ್ಲಿ ಈ ಪುಟ್ಟ ಮಕ್ಕಳ ಅಮೋಘ ಅಭಿನಯವನ್ನು ನೋಡಲು ಹೆಮ್ಮೆಯಾಗುತ್ತದೆ" ಎಂದಿದ್ದಾರೆ.  
 
ಚಿತ್ರೋದ್ಯಮದಲ್ಲಿ ನಿರ್ಮಾಪಕಿಯಾಗಿ ತಮ್ಮ ಹೊಸ ಪಾತ್ರದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಸಮಂತಾ, "ಚಿತ್ರರಗದಲ್ಲಿ ಸ್ಮಾರು 14-15 ವರ್ಷಗಳಿಂದ ಅಭಿನಯಿಸುತ್ತಿದ್ದೇನೆ. ಈಗ  ಸಿನಿಮಾ ರಂಗದಲ್ಲಿ ನಾನು ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದೇನೆ.  ಸಿನಿಮಾ ನಿರ್ವಾಣ ಒಂದು ಹೊಸ ಸವಾಲು, ನಾನು ಸವಾಲುಗಳನ್ನು ಸ್ವೀಕರಿಸಲು ಇಚ್ಚಿಸುತ್ತೇನೆ" ಎಂದರು. 

ಇದನ್ನೂ ಓದಿ- ಬಿಗ್ ಬಾಸ್‌ನಲ್ಲಿ ಶುರುವಾದ ಪ್ರೀತಿ, ಸದ್ದಿಲ್ಲದೇ ಮದುವೆಯಾದ ಖ್ಯಾತ ಜೋಡಿ! ಫೋಟೋಸ್‌ ನೋಡಿ

ಸಮಂತಾ ನಿರ್ಮಾಣದ 'ಶುಭಂ' ಚಿತ್ರ ಇದೇ ಮೇ 09ರಂದು ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಬಂಡಿಯ ಪ್ರವೀಣ್ ಕಂಡ್ರೇಗುಲ ಆಕ್ಷನ್ ಕಟ್ ಹೇಳಿದ್ದು, ಹರ್ಷಿತ್ ರೆಡ್ಡಿ, ಗವಿರೆಡ್ಡಿ ಶ್ರೀನಿವಾಸ್, ಚರಣ್ ಪೇರಿ, ಶ್ರೀಯಾ ಕೊಂಥಮ್, ಶ್ರಾವಣಿ ಲಕ್ಷ್ಮಿ, ಶಾಲಿನಿ ಕೊಂಡೆಪುಡಿ ಮತ್ತು ವಂಶಿಧರ್ ಗೌಡ್ ಸೇರಿದಂತೆ ಹಲವು ಹೊಸ ಮುಖಗಳನ್ನು ಪರಿಚಯಿಸಲಾಗಿದೆ. 

ಇತ್ತೀಚೆಗಷ್ಟೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ 'ಶುಭಂ' ಸಿನಿಮಾದ ಟೀಸರ್ ಶೇರ್ ಮಾಡಿದ್ದ ಸಮಂತ, ಇದರಲ್ಲಿ ನವವಿವಾಹಿತ ದಂಪತಿಗಳನ್ನು ಒಳಗೊಂಡ ಕಥಾಹಂದರದ ಒಂದು ಝಲಕ್ ಅನ್ನು ರಿವೀಲ್ ಮಾಡಿದ್ದರು. ಇದರಲ್ಲಿ ಮದುವೆಯಾದ ಮೊದಲ ರಾತ್ರಿ ವಧು-ವರ ಇಬ್ಬರೂ ಮಾತನಾಡುತ್ತಾ ಕುಳಿತಿರುತ್ತಾರೆ. ಇದ್ದಕ್ಕಿದ್ದಂತೆ ಎದ್ದು ಟಿವಿ ಮುಂದೆ ಹೋಗಿ ಅದನ್ನು ಆನ್ ಮಾಡುವ ವಧು ಟಿವಿ ನೋಡುತ್ತಾ ಕೂರುತ್ತಾಳೆ. ವಧುವಿನ ಧಾರಾವಾಹಿ ಗೀಳನ್ನು ಕಂಡು ಆಶ್ಚರ್ಯಚಕಿತನಾದ ವರ ಈ ಸುಂದರ ಸಮಯದಲ್ಲಿ ಟಿವಿ... ಶ್ರೀವಲ್ಲಿ.... ಶ್ರೀವಲ್ಲಿ ಎಂದು ಕರೆಯುತ್ತಿದ್ದಂತೆ ವಧು ಹಿಂದಿರುಗಿ ಹಾರರ್ ಲುಕ್ ನೀಡುತ್ತಾಳೆ. ಈ ಅನಿರೀಕ್ಷಿತ ಹಾರರ್-ಹಾಸ್ಯ ತಿರುವಿಗೆ ಕಾರಣವಾಗುವುದೇ.... 'ಶುಭಂ' ಚಿತ್ರದ ಟ್ರೇಲರ್ ಅನ್ನು ಇಲ್ಲಿ ವೀಕ್ಷಿಸಿ... 

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

  

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News