)
Model Ekta Tiwari about terrorist attack: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಮೂವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಮೂವರು ಭಯೋತ್ಪಾದಕರ ಸುಳಿವು ಕಪಟ್ಟವರಿಗೆ ತಲಾ 20 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಿಂದ ಹಿಂದಿರುಗಿದ ಉತ್ತರ ಪ್ರದೇಶದ ಜೌನ್ಪುರ ನಿವಾಸಿ ಮತ್ತು ನಟಿ ಏಕ್ತಾ ತಿವಾರಿ ಈ ರೇಖಾ ಚಿತ್ರದಲ್ಲಿಇರುವ ಇಬ್ಬರು ಉಗ್ರರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಏಕ್ತಾ ತಿವಾರಿ ಈ ಬಗ್ಗೆ ಮಾತನಾಡಿದ್ದು, ನಮ್ಮ 20 ಜನರ ಗುಂಪು ಏಪ್ರಿಲ್ 13 ರಂದು ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಹೋಗಿತ್ತು. ನಾವು ಏಪ್ರಿಲ್ 20 ರಂದು ಪಹಲ್ಗಾಮ್ ತಲುಪಿದೆವು. ಅದೇ ದಿನ ನಮಗೆ ಏನೋ ಕೆಟ್ಟ ಘಟನೆಯ ಸೂಚನೆ ಸಿಕ್ಕಿತ್ತು. ಆದ್ದರಿಂದ ನಾವೆಲ್ಲರೂ ದಾಳಿ ಪ್ರದೇಶವಾದ ಬೈಸರನ್ನಿಂದ ಸುಮಾರು 500 ಮೀಟರ್ ದೂರವೇ ಉಳಿದು ಬಿಟ್ಟೆವು. ಸುತ್ತಮುತ್ತಲಿನ ಕೆಲವು ಜನರ ಉದ್ದೇಶಗಳು ಸರಿಯಿಲ್ಲದಂತೆ ಕಾಣುತ್ತಿತ್ತು. ಅವರು ನಮಗೆ ಕುರಾನ್ ಓದಲು ಹೇಳುತ್ತಿದ್ದರು ಎಂದಿದ್ದಾರೆ.
ಅವನು ರುದ್ರಾಕ್ಷಿಯನ್ನು ಏಕೆ ಧರಿಸಿರುವೆ ಎಂದು ಕೇಳಿದನು:
"ನಮ್ಮ ಬಳಿ ಇಬ್ಬರು ಬಂದರು. ನನ್ನ ಬಗ್ಗೆ ಕೇಳಿದರು. ನಮ್ಮ ಗುಂಪಿನಲ್ಲಿ ಇನ್ನೂ ಎಷ್ಟು ಜನರಿದ್ದಾರೆ ಎಂದೂ ಕೇಳಿದರು. ನಾವು ಯಾವ ಧರ್ಮಕ್ಕೆ ಸೇರಿದವರು, ಹಿಂದೂ ಅಥವಾ ಮುಸ್ಲಿಂ ಎಂದು ಅವರು ನಮ್ಮನ್ನು ಕೇಳಿದರು. ಇದಲ್ಲದೆ, ಅವರು ನಮಗೆ ಕುರಾನ್ ಓದಲು ಹೇಳಿದರು. ನಮ್ಮ ಧರ್ಮದ ಬಗ್ಗೆ ಕೇಳಿದರು. ನನಗೆ ಭಯ ಆಯಿತು. ನಾನು ನಿಜ ಹೇಳಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ಕೇಳಿದರು. ವಿವಾಹ ಆಗಿ ಎಷ್ಟು ಸಮಯ ಆಯಿತು ಎಂದು ಪ್ರಶ್ನೆ ಮಾಡಿದರು ಎಂದು ಏಕ್ತಾ ತಿವಾರಿ ಹೇಳಿದ್ದಾರೆ.
ನಾನು ರುದ್ರಾಕ್ಷಿ ಮಾಲೆ ಹಾಕಿಕೊಂಡಿದ್ದೇನೆ ಮತ್ತು ಕುರಾನ್ ಓದಲ್ಲ ಅನ್ನೋದು ಅವರಿಗೆ ಟ್ರಿಗರ್ ಮಾಡಿತು. ನಮ್ಮ ಜೊತೆ ಅನುಚಿತವಾಗಿ ನಡೆದುಕೊಂಡರು. ಅವರ ಬಳಿ ಶೂ ಒಳಗೆ ಕೀ ಪ್ಯಾಡ್ ಮೊಬೈಲ್ ಕೂಡ ಇತ್ತು. ನಾವು ಅಲ್ಲಿಂದ ಹಿಂತಿರುಗಿದೆವು ಎಂದು ಏಕ್ತಾ ತಿವಾರಿ ಹೇಳಿದ್ದಾರೆ.
'ಸಂಕೇತ ಪದಗಳಲ್ಲಿ ಹೇಳಿದ- ಯೋಜನೆ ಎ ವಿಫಲವಾಗಿದೆ'
ಸ್ವಲ್ಪ ಸಮಯದ ನಂತರ ಅವರಲ್ಲಿ ಒಬ್ಬರಿಗೆ ಕರೆ ಬಂತು. ಸ್ವಲ್ಪ ದೂರ ಹೋದ ನಂತರ, ಪ್ಲಾನ್-ಎ ವಿಫಲವಾಗಿದೆ ಎಂದು ಫೋನ್ನಲ್ಲಿ ಕೋಡ್ ಪದಗಳಲ್ಲಿ ಹೇಳಿದನು ಎಂದು ಏಕ್ತಾ ತಿವಾರಿ ಹೇಳಿಕೊಂಡಿದ್ದಾರೆ.
ಅವರು ಕಣಿವೆಗೆ 35 ಬಂದೂಕುಗಳನ್ನು ಕಳುಹಿಸುವ ಬಗ್ಗೆಯೂ ಮಾತನಾಡುತ್ತಿದ್ದರು. "ಈ ವಿಷಯಗಳು ನನ್ನ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದವು." 35 ಬಂದೂಕುಗಳ ಬಗ್ಗೆ ಮಾತನಾಡಿದ ಹುಡುಗನ ಫೋಟೋ ನನ್ನ ಬಳಿ ಇದೆ. ಭಯೋತ್ಪಾದಕರ ರೇಖಾಚಿತ್ರಗಳು ಬಿಡುಗಡೆಯಾದ ನಂತರ ನಾನು ಅವನನ್ನು ಗುರುತಿಸಿದ್ದೇನೆ ಎಂದು ಏಕ್ತಾ ಹೇಳಿಕೊಂಡಿದ್ದಾರೆ.
Enemies within India ?♂️
Big revelation by a girl from Jaunpur in Pahalgam terror attack
Ekta Tiwari, a resident of Jaunpur, has made shocking revelations in the case of the killing of 28 innocent people in the terrorist attack in Pahalgam, Jammu and Kashmir on April 22. Ekta… pic.twitter.com/qKHiFZFVx9— Satyaagrah (@satyaagrahindia) April 25, 2025
'ವೈಷ್ಣೋದೇವಿ ಯಾತ್ರೆಯ ನಂತರ ಪ್ರವಾಸ ಪ್ಯಾಕೇಜ್ ತೆಗೆದುಕೊಂಡೆ'
ಏಕ್ತಾ ಅವರ ಪತಿ ಪ್ರಶಾಂತ್ ತಿವಾರಿ ಸಹ ಮಾತನಾಡಿದ್ದು, 'ನಾವು ಇಲ್ಲಿಂದ ವೈಷ್ಣೋ ದೇವಿಗೆ ಹೊರಟಿದ್ದೆವು. ಕತ್ರಾದಲ್ಲಿ ವೈಷ್ಣೋ ದೇವಿಗೆ ಭೇಟಿ ನೀಡಿದ ನಂತರ, ನಾವು ಸಂಪೂರ್ಣ ಪ್ರವಾಸದ ಪ್ಯಾಕೇಜ್ ನ್ನು ತೆಗೆದುಗೊಂಡೆವು. ನಮ್ಮ ಗುಂಪಿನಲ್ಲಿ 20 ಜನರಿದ್ದರು. ನನ್ನ ಹೆಂಡತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಅವಳನ್ನು ಕುರಾನ್ ಓದಲು ಕೇಳಿದನು ಎಂದಿದ್ದಾರೆ.
ನಂತರ ಅವಳು ಅದರ ಬಗ್ಗೆ ನನಗೆ ಹೇಳಿದಳು. ನಾವು ಅವರನ್ನು ಅಲ್ಲಿಂದ ಹಿಂತಿರುಗಲು ಕೇಳಿದಾಗ, ಅವರು ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಆ ಜನರನ್ನು ಅನುಮಾನಿಸಲು ದೊಡ್ಡ ಕಾರಣವೆಂದರೆ ಅವರು ಪದೇ ಪದೇ ಕುರಾನ್ ಓದಲು ಕೇಳುತ್ತಿದ್ದರು. ಅವರು ನಮ್ಮ ವಿಳಾಸವನ್ನೂ ಕೇಳುತ್ತಿದ್ದರು ಮತ್ತು ಬಂದೂಕುಗಳನ್ನು ಕಳುಹಿಸುವ ಮಾತು ನಮ್ಮ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿತು ಎಂದು ಹೇಳಿದ್ದಾರೆ.
Jaunpur, Uttar Pradesh: Ekta Tiwari, tourist who identified the terrorist says, "We were a group of 20 people and reached Pahalgam on April 20. That very day, we sensed something suspicious, so we got off about 500 meters before the Baisaran area—where the attack took place. The… pic.twitter.com/vZGKSbCqhK
— IANS (@ians_india) April 24, 2025
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.