Ibrahim Ali Khan: ನಟ ಸೈಫ್ ಅಲಿ ಖಾನ್ ರಾಜಮನೆತನದ ಕುಡಿ. ಇವರ ಮೊದಲ ಪತ್ನಿಯ ಮಗನೇ ಇಬ್ರಾಹಿಂ ಅಲಿ ಖಾನ್. ಇತ್ತೀಚೆಗೆ 'ನಾದಾನಿಯನ್' ಚಿತ್ರದ ಮೂಲಕ ನಟನೆಗೆ ಇಬ್ರಾಹಿಂ ಅಲಿ ಖಾನ್ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ ತಮ್ಮದೇ ಆದ ವೈಯಕ್ತಿಕ ಸವಾಲುಗಳನ್ನು ಎದುರಿಸಿದ ಬಗ್ಗೆ ಇಬ್ರಾಹಿಂ ಅಲಿ ಖಾನ್ ಮಾತನಾಡಿದ್ದಾರೆ. GQ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಇಬ್ರಾಹಿಂ ಕಿವಿ ಕೇಳಿಸದ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.
"ನಾನು ಜನಿಸಿದ ಕೂಡಲೇ, ನನಗೆ ತುಂಬಾ ಕೆಟ್ಟ ಕಾಮಾಲೆ ಬಂದಿತ್ತು. ಅದು ನೇರವಾಗಿ ನನ್ನ ಮೆದುಳಿಗೆ ಎಫೆಕ್ಟ್ ಆಯಿತು. ನಾನು ನನ್ನ ಶ್ರವಣ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡೆ. ಅದು ನನ್ನ ಮಾತಿನ ಮೇಲೆ ಸಹ ಪರಿಣಾಮ ಬೀರಿತು. ನನ್ನ ಮಾತು ಇಷ್ಟು ಸ್ಪಷ್ಟವಾಗಲು ನಾನು ಬಾಲ್ಯದಿಂದಲೂ ತರಬೇತುದಾರರು ಮತ್ತು ಚಿಕಿತ್ಸಕರೊಂದಿಗೆ ಶ್ರಮಿಸಬೇಕಾಗಿತ್ತು" ಎಂದು ಇಬ್ರಾಹಿಂ ಅಲಿ ಖಾನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಚಿನ್ ಪುತ್ರಿಗಿದೆ ಆ ಗಂಭೀರ ಆರೋಗ್ಯ ಸಮಸ್ಯೆ..! ಚಿಕ್ಕವಳಿದ್ದಾಗಲೇ ಗೊತ್ತಾಯ್ತು.. ಬದುಕುಳಿಯುವುದು.. ಅಚ್ಚರಿ ವಿಷಯ ಬಹಿರಂಗ
ಇಬ್ರಾಹಿಂ ಅನಾರೋಗ್ಯಕ್ಕೆ ವೈದ್ಯಕೀಯ ಆರೈಕೆಯ ಅಗತ್ಯವಿತ್ತು. ನಂತರ ಅವರ ಕುಟುಂಬವು ಅವರನ್ನು ಇಂಗ್ಲೆಂಡ್‌ನ ಬೋರ್ಡಿಂಗ್ ಶಾಲೆಗೆ ಕಳುಹಿಸಿದರು. ಆಗಲೂ ಅವರಿಗೆ ಮಾತಿನಾಡಲು ತೊಂದರೆ ಆಗುತ್ತಿತ್ತು. ಆದರೂ ಅವರನ್ನು ಅಲ್ಲಿಗೆ ಕಳುಹಿಸಲಾಯಿತು.
ಭಾರತೀಯನಾಗಿರುವುದರಿಂದ ಇಂಗ್ಲೆಂಡ್‌ನ ಬೋರ್ಡಿಂಗ್ ಶಾಲೆಯಲ್ಲಿ ಹೊಂದಿಕೊಳ್ಳುವುದು ಕಷ್ಟಕರವಾಗಿತ್ತು. ಆದರೆ ನನ್ನ ಜೀವನದ ನಾಲ್ಕು ವರ್ಷಗಳನ್ನು ನಾನು ಅತ್ಯುತ್ತಮವಾಗಿ ಕಳೆದಿದ್ದೇನೆ. ನಾನು ಕ್ರೀಡೆಗಳನ್ನು ಆಡಿದೆ, ಹೊಸ ಸ್ನೇಹಿತರನ್ನು ಮಾಡಿಕೊಂಡೆ ಮತ್ತು ಬಹಳಷ್ಟು ಕಲಿತಿದ್ದೇನೆ ಎಂದಿದ್ದಾರೆ.
ಆಗ ನನ್ನ ಮಾತಿನ ಸಮಸ್ಯೆ ತುಂಬಾ ಕೆಟ್ಟದಾಗಿತ್ತು. ಈ ಸ್ಥಳಾಂತರವು ನಾನು ಬದುಕಬೇಕಾದ ಈ ಹೊಸ ಜಾಗದಲ್ಲಿ ನನ್ನನ್ನು ಇರಿಸಿತು. 14 ವರ್ಷದವರಾಗಿದ್ದಾಗ ಮತ್ತು ಒಬ್ಬಂಟಿಯಾಗಿರುವಾಗ ಬೋರ್ಡಿಂಗ್ ಶಾಲೆ ಸೇರುವುದು ಸುಲಭವಲ್ಲ. ಅದು ತುಂಬಾ ಕಟ್ಟುನಿಟ್ಟಾದ ವ್ಯವಸ್ಥೆಯನ್ನು ಹೊಂದಿರುತ್ತದೆ. ಅದು ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಾಯಿಸಿತು" ಎಂದು ಹೇಳಿದ್ದಾರೆ.
ನಾದಾನಿಯನ್ ಚಿತ್ರದಲ್ಲಿ ಇಬ್ರಾಹಿಂ ಖುಷಿ ಕಪೂರ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾ ಹೇಳಿಕೊಳ್ಳುವಂಥ ಹಿಟ್ ಕೊಡಲಿಲ್ಲ. ಸೈಫ್ ಅಲಿ ಖಾನ್ ಪುತ್ರನಾದರೂ ಇಬ್ರಾಹಿಂ ಅಲಿ ಖಾನ್ ತಮ್ಮ ಅನಾರೋಗ್ಯದ ಕಾಋಣಕ್ಕೆ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಇಬ್ರಾಹಿಂ ಅಲಿ ಖಾನ್ ಅವರ ಸಂದರ್ಶನದಲ್ಲಿ ಈ ಎಲ್ಲವನ್ನೂ ಹೇಳಿಕೊಂಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









