)
ಮುಂಬೈ: ಬಾಲಿವುಡ್ನ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನ, ಆರೋಗ್ಯ ತೊಂದರೆಗಳು ಮತ್ತು ಮದುವೆಯ ಬಗ್ಗೆ ಕಪಿಲ್ ಶರ್ಮಾ ಕಾರ್ಯಕ್ರಮದ ಮೊದಲ ಸೀಸನ್ನಲ್ಲಿ ಮನಮುಕ್ತವಾಗಿ ಮಾತನಾಡಿದ್ದಾರೆ. ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿವೆ.
ಸಲ್ಮಾನ್ ಖಾನ್, ತಮ್ಮ ಪ್ರೈಮ್ ದಿನಗಳಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರೂ, ಈಗ ಮೊದಲಿನ ಹುಮ್ಮಸ್ಸು ಮತ್ತು ಕ್ರೇಜ್ ಕಡಿಮೆಯಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ, ಸಲ್ಮಾನ್ ತಮ್ಮ ವಯೋಸಹಜ ಆರೋಗ್ಯ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. “ನಾನು ಮೊದಲಿನಂತೆ ಇರಲಾಗುವುದಿಲ್ಲ, ನನ್ನ ಮನಸ್ಥಿತಿಗೆ ದೇಹ ಸಪೋರ್ಟ್ ಕೊಡುವುದಿಲ್ಲ. ನಾನು ಯುವಕನಲ್ಲ,” ಎಂದು ಖಾನ್ ಹೇಳಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ದೃಶ್ಯಗಳನ್ನು ಮಾಡುವಾಗ ಮೂಳೆ ಮುರಿತದ ಗಾಯಗಳಾಗಿವೆ ಎಂದು ಬಹಿರಂಗಪಡಿಸಿದ ಅವರು, ತಮಗಿರುವ ಬ್ರೇನ್ ಅನ್ಯೂರಿಸಮ್ ತೊಂದರೆ ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದನ್ನು ತಿಳಿಸಿದ್ದಾರೆ.
ಮದುವೆಯ ಕುರಿತು ಕಪಿಲ್ ಕೇಳಿದ ಪ್ರಶ್ನೆಗೆ ಸಲ್ಮಾನ್ ತಮಾಷೆಯಾಗಿ ಆದರೆ ಗಂಭೀರವಾಗಿ ಉತ್ತರಿಸಿದ್ದಾರೆ. “ನಾನು ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆದುಕೊಳ್ಳಲು ಇಷ್ಟವಿಲ್ಲ,” ಎಂದು ಹೇಳಿದ ಅವರು, ಇತ್ತೀಚಿನ ಕಾಲದಲ್ಲಿ ವಿಚ್ಛೇದನದ ಹೆಸರಿನಲ್ಲಿ ಹುಡುಗಿಯರು ಆಸ್ತಿಯ ಅರ್ಧ ಭಾಗವನ್ನು ಪಡೆದು ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೊದಲು ವಯಸ್ಸಿತ್ತು, ಹಣ ಕಳೆದರೂ ಮತ್ತೆ ಗಳಿಸಬಹುದು ಎಂಬ ಧೈರ್ಯವಿತ್ತು. ಆದರೆ ಈಗ ಹಣ ಗಳಿಸುವುದು ಕಷ್ಟ. ಮದುವೆಯಾದರೆ, ಬೇಗ ಬೋರ್ ಆಗಿ ವಿಚ್ಛೇದನ ಕೇಳಿ ಹಣವನ್ನು ಕಳೆದುಕೊಳ್ಳಲು ಇಷ್ಟವಿಲ್ಲ,” ಎಂದು ಸಲ್ಮಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ