ಈ ಸಣ್ಣ ಕಾರಣಕ್ಕೆ ಇಂದಿರಾ ಗಾಂಧಿ ಅಂದು ರಾಜ್‌ಕುಮಾರ್‌ ಕೈ ಹಿಡಿದು ಕ್ಷಮೆ ಕೇಳಿದ್ದರು!

Indira Gandhi apology to Rajkumar: ಕನ್ನಡ ಚಿತ್ರರಂಗಕ್ಕೆ ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಕೊಡುಗೆ ಅಪಾರ.

Written by - Chetana Devarmani | Last Updated : Jun 27, 2025, 01:25 PM IST
  • ಕನ್ನಡ ಚಿತ್ರರಂಗಕ್ಕೆ ನಟ ಸಾರ್ವಭೌಮ
  • ಇಂದಿರಾ ಗಾಂಧಿ ಚಿಕ್ಕಮಗಳೂರು ಚುನಾವಣೆ
  • ರಾಜ್‌ಕುಮಾರ್‌ ಕ್ಷಮೆ ಕೇಳಿದ ಇಂದಿರಾ ಗಾಂಧಿ
ಈ ಸಣ್ಣ ಕಾರಣಕ್ಕೆ ಇಂದಿರಾ ಗಾಂಧಿ ಅಂದು ರಾಜ್‌ಕುಮಾರ್‌ ಕೈ ಹಿಡಿದು ಕ್ಷಮೆ ಕೇಳಿದ್ದರು!

Indira Gandhi apology to Rajkumar: ರಾಜಕೀಯರಂಗಕ್ಕೆ ಧುಮುಕಿ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಕೂಡ ರಾಜ್‌ಕುಮಾರ್‌ ಅವರ ಬಳಿ ಇತ್ತು. ಆದರೆ ಎಂದಿಗೂ ರಾಜಕೀಯದಲ್ಲಿ ಆಸಕ್ತಿ ತೋರಲೇ ಇಲ್ಲ. ಆದರೆ ಅಣ್ಣಾವ್ರ ಬಳಿ ಇಂದಿರಾ ಗಾಂಧಿ ಕ್ಷಮೆ ಕೇಳಿದ್ದರು ಎಂಬ ಸಂಗತಿ ಅನೇಕ ಜನರಿಗೆ ತಿಳಿದಿಲ್ಲ.

Add Zee News as a Preferred Source

1978ರ ಲೋಕಸಭಾ ಉಪಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಣಕ್ಕಿಳಿದಿದ್ದರು. ಆಗ ಅವರ ವಿರುದ್ಧ ಡಾ. ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಲು ಜನತಾ ಪಕ್ಷ ತಂತ್ರ ರೂಪಿಸಿತ್ತು. ಆದರೆ ರಾಜ್‌ಕುಮಾರ್ ಅದಕ್ಕೆ ಒಪ್ಪಲಿಲ್ಲ. ಮುಂದೆ ಇಂದಿರಾಗಾಂಧಿ ಚಿಕ್ಕಮಗಳೂರು ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಅಂದು ರಾಜ್‌ಕುಮಾರ್ ಸ್ಪರ್ಧಿಸಿದ್ದರೆ ಇಂದಿರಾ ಅವರಿಗೆ ಸೋಲು ಖಚಿತವಾಗಿತ್ತು. ಅನಾಯಾಸವಾಗಿ ರಾಜ್‌ಕುಮಾರ್ ಗೆಲ್ಲುತ್ತಿದ್ದರು ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.  

ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಎದುರು ಚುನಾವಣೆಯಲ್ಲಿ ರಾಜ್‌ಕುಮಾರ್ ಸ್ಪರ್ಧಿಸಲು ಒಪ್ಪಿರಲಿಲ್ಲ. ಮುಂದೆ  ಇಂದಿರಾ ಗಾಂಧಿ ದೇಶದ ಪ್ರಧಾನಿಯಾದರು. ಆ ಸಮಯದಲ್ಲಿ ಇಂದಿರಾ ಗಾಂಧಿ ರಾಜ್‌ಕುಮಾರ್ ಅವರನ್ನು ಭೇಟಿಯಾದರಂತೆ. ಈ ವೇಳೆ ಇಂದಿರಾ ಗಾಂಧಿ ಅಣ್ಣಾವ್ರ ಬಳಿ ಕ್ಷಮೆ ಕೇಳಬೇಕಾದ ಸನ್ನಿವೇಶ ಒಂದು ಎದುರಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರ ಚಿನ್ನೇಗೌಡ್ರು ಯೂಟ್ಯೂಬ್ ಚಾನೆಲ್‌ ಒಂದರ ಸಂದರ್ಶದಲ್ಲಿ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.  

ಇದನ್ನೂ ಓದಿ: ಒಂದೇ ಚಿತ್ರದಲ್ಲಿ 45 ಪಾತ್ರದಲ್ಲಿ ನಟಿಸಿ ಗಿನ್ನೆಸ್ ದಾಖಲೆ ಬರೆದ ನಟ.. ಕಮಲ್ ಹಾಸನ್ ಅಲ್ಲವೇ ಅಲ್ಲ!!

ಅಂದು ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಎದುರು ರಾಜ್‌ಕುಮಾರ್ ಅವರನ್ನು ನಿಲ್ಲಿಸಬೇಕೆಂದು ಜಾರ್ಜ್ ಫರ್ನಾಂಡಿಸ್ ಶತ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. 8 ದಿನ ಯಾರ ಸಂಪರ್ಕ ಇಲ್ಲದೇ ರಾಜ್‌ ಕುಮಾರ್‌ ಅಜ್ಞಾತದಲ್ಲಿ ತಿರುಗಾಡಿದ್ದರು ಆಗ ಅವರ ಜೊತೆಯಲ್ಲೇ ನಾನೂ ಇದ್ದೆ. ಬೇರೆಯವರು ನಾಮಪತ್ರ ಸಲ್ಲಿಸಿದ ಬಳಿಕ ರಾಜ್‌ ಕುಮಾರ್‌ ವಾಪಸ್ ಬಂದರು ಎಂದಿದ್ದಾರೆ.

ರಾಜ್‌ ಕುಮಾರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ಇಂದಿರಾ ಗಾಂಧಿ ಆಹ್ವಾನಿಸಿದ್ದರು. ಅವತ್ತು ಇಂದಿರಾ ಗಾಂಧಿ ಭೇಟಿಗೆ ನಾನು, ನಮ್ಮಕ್ಕ ಪಾರ್ವತಮ್ಮ, ನಿರ್ದೇಶಕ ಭಗವಾನ್ ಹಾಗೂ ರಾಜ್‌ ಕುಮಾರ್‌ ಹೋಗಿದ್ದೆವು. ಇಂದಿರಾ ಗಾಂಧಿ ಅವರು ಬರುವುದು 10 ನಿಮಿಷ ತಡವಾಗುತ್ತಿತ್ತು. ಆದರೂ ಕಾದೆವು. ಕೊನೆಗೆ ಬಂದರು. ಒಳಗ ಹೋದ ಕೂಡಲೇ ಇಂದಿರಾಗಾಂಧಿ ಬಂದು ಕೈಹಿಡಿದು "ರಾಜ್‌ಕುಮಾರ್‌ ಜೀ, ಆಪ್‌ಕೆ ಕ್ಷಮಾ ಕರೊ" ಎಂದು ರಾಜ್‌ ಕುಮಾರ್‌ ಬಳಿ ಕ್ಷಮೆ ಕೇಳಿದ್ದರು. 

ಬಳಿಕ ಕೂರಿಸಿ ಮಾತನಾಡಿದರು. ಪಾಲಿಟಿಕ್ಸ್‌ಗೆ ಬರ್ತೀರಾ? ಎಂದು ಇಂದಿರಾ ಗಾಂಧಿ ಅವರೇ ರಾಜ್‌ ಕುಮಾರ್‌ ಅವರನು ಕೇಳಿದ್ದರು. ಇಲ್ಲ ಏನು ಬೇಡ. ನಾನು ಕಲಾವಿದನಾಗಿಯೇ ಇರ್ತೀನಿ ಎಂದು ರಾಜ್‌ಕುಮಾರ್ ಹೇಳಿದ್ದರು ಎಂದು ಚಿನ್ನೇಗೌಡ್ರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ʻದೇಹದ ತೂಕ ವಿಪರೀತ ಕಡಿಮೆ.. ತಲೆ ಕೂದಲು ಟ್ರಿಮ್‌..ʼ; ಕಾರ್‌ ರೇಸ್‌ಗೆ ಹೋದ ತಮಿಳು ನಟ ಅಜಿತ್‌ ಕುಮಾರ್‌ಗೆ ಏನಾಯ್ತು?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News