IPL 2020: 35 ದಿನಗಳಲ್ಲಿ 20ನೇ ಬಾರಿ ಕರೋನಾ ಟೆಸ್ಟ್ ಮಾಡಿಸಿದ ಪ್ರೀತಿ ಜಿಂಟಾ ಹೇಳಿದ್ದೇನು ಗೊತ್ತಾ?
ಪ್ರೀತಿ ಅವರು ವೀಡಿಯೊ ಒಂದನ್ನು ಹಂಚಿಕೊಂಡಿದ್ದು ಇದರಲ್ಲಿ ಅವರು ತಮ್ಮನ್ನು ತಾವು ಕೋವಿಡ್ ಪರೀಕ್ಷಾ ರಾಣಿ ಎಂದು ಬಣ್ಣಿಸಿದ್ದಾರೆ.
ನವದೆಹಲಿ : ಐಪಿಎಲ್ (IPL 2020) ನ 13ನೇ ಸೀಸನ್ ದುಬೈನಲ್ಲಿ ನಡೆಯುತ್ತಿದೆ. ಅಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (Kings XI Punjab) ತಂಡದ ಮಾಲೀಕರು ಮತ್ತು ನಟಿ ಪ್ರೀತಿ ಜಿಂಟಾ ಕೂಡ ತಂಡದೊಂದಿಗೆ ಇದ್ದಾರೆ. ಪ್ರತಿ ಪಂದ್ಯದಲ್ಲೂ ಕಾಣುವ ಪ್ರೀತಿ ಮತ್ತೊಮ್ಮೆ ಕರೋನಾ ಟೆಸ್ಟ್ ಅನ್ನು ಮಾಡಿಸಿದ್ದಾರೆ. ಗಮನಾರ್ಹವಾಗಿ ಇದು ಅವರ 20ನೇ ಕೋವಿಡ್ 19 (Covid -19) ಪರೀಕ್ಷೆ. ಈ ಕುರಿತಂತೆ ನಟಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದನ್ನು ನೋಡಬಹುದು.
ಪ್ರೀತಿ ಜಿಂಟಾ (Preity Zinta) ಅವರು ವೀಡಿಯೊವನ್ನು ಹಂಚಿಕೊಂಡಿದ್ದು ಇದರಲ್ಲಿ ಅವರು ತಮ್ಮನ್ನು ತಾವು ಕೋವಿಡ್ ಪರೀಕ್ಷಾ ರಾಣಿ ಎಂದು ಬಣ್ಣಿಸಿದ್ದಾರೆ. ಯಾಕೆಂದರೆ ಅವರು ದುಬೈ ತಲುಪುವ ಮೊದಲಿನಿಂದ ಈವರೆಗೆ ಒಟ್ಟು 20 ಬಾರಿ ಕರೋನಾ ಪರೀಕ್ಷೆಗೆ ಒಳಪಟ್ಟಿದ್ದಾರಂತೆ. ಪ್ರತಿ ಬಾರಿಯೂ ಫಲಿತಾಂಶವು ನೆಗೆಟಿವ್ ಬಂದಿರುವುದು ಗೌರವವಾಗಿದೆ ಎಂದಿರುವ ಪ್ರೀತಿ ತಮಗೆ ಕರೋನಾ ಟೆಸ್ಟ್ ಮಾಡುತ್ತಿರುವ ವೈದ್ಯರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇವರು ಕರೋನವನ್ನು ಟೆಸ್ಟ್ ಮಾಡುವಲ್ಲಿ ಪರಿಣತರಾಗಿದ್ದಾರೆ. ಈವರೆಗೂ ಒಂದು ಬಾರಿಯೂ ನೋಯಿಸಿಲ್ಲ ಎಂದವರು ಹೇಳಿದ್ದಾರೆ.
ಅನಂತ್‌ನಾಗ್‌ನಲ್ಲಿ ಸರ್ಪಂಚ್ ಹತ್ಯೆಯ ಬಗ್ಗೆ ವೈರಲ್ ಆಗಿದೆ ಪ್ರೀತಿ ಜಿಂಟಾರ ಈ ಟ್ವೀಟ್
Corona test) ರಾಣಿಯಾಗಿದ್ದೇನೆ. ಇದು ನನ್ನ 20ನೇ ಕರೋನಾ ಪರೀಕ್ಷೆಯಾಗಲಿದೆ. 'ಐಪಿಎಲ್ ತಂಡದ ಬಯೋ ಬಬಲ್‌ನಲ್ಲಿ ಇರುವುದು ಏನು ಎಂದು ಎಲ್ಲರೂ ನನ್ನನ್ನು ಕೇಳುತ್ತಾರೆ' ಎಂದು ನಟಿ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಉತ್ತರವಾಗಿ ಇದು 6 ದಿನಗಳ ಕ್ವಾರಂಟೈನ್ ನಿಂದ ಪ್ರಾರಂಭವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ, ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತದೆ ಮತ್ತು ಹೊರಗೆ ಎಲ್ಲೂ ಹೋಗುವುದಿಲ್ಲ. ಕಿಂಗ್ಸ್ ಎಲೆವೆನ್ ಪಂಜಾಬ್‌ಗಾಗಿ ನಮ್ಮ ಕೊಠಡಿ, ರೆಸ್ಟೋರೆಂಟ್, ಜಿಮ್ ಮತ್ತು ಕ್ರೀಡಾಂಗಣವನ್ನು ನಮ್ಮ ಕಾರಿನಿಂದ ಮಾತ್ರ ತಲುಪಲಾಗುತ್ತದೆ. ಹೊರಗಿನಿಂದ ಯಾವುದೇ ಆಹಾರವಿಲ್ಲ ಮತ್ತು ಜನರ ಸಂವಹನವಿಲ್ಲ. ನನ್ನಂತೆಯೇ ಫ್ರೀ ಬರ್ಡ್ ಆಗಿದ್ದರೆ ಅದು ಕಠಿಣ. ಆದರೆ ಅದು 2020ರಲ್ಲಿ ಸಾಂಕ್ರಾಮಿಕದ ಮಧ್ಯದಲ್ಲಿ # ಐಪಿಎಲ್ ನಡೆಯುತ್ತಿರುವುದಕ್ಕೆ ಪ್ರಶಂಸಿಸಬೇಕು. ನಮ್ಮನ್ನು ಸುರಕ್ಷಿತವಾಗಿಡಲು KXIP & @sofiteldubaipalm ಅವರ ಎಲ್ಲಾ ಪ್ರಯತ್ನಗಳಿಗಾಗಿ ನಾನು #BCCI ಗೆ ಧನ್ಯವಾದ ಹೇಳಬೇಕು ಎಂದವರು ತಿಳಿಸಿದ್ದಾರೆ.
Interesting: ಈ 21 ಬಾಲಿವುಡ್ ತಾರೆಯರ ನಿಜವಾದ ಹೆಸರು ನಿಮಗೆ ತಿಳಿದಿದೆಯೇ?
ಇದಲ್ಲದೆ ಚಾಲಕರು, ಬಾಣಸಿಗರು ಸೇರಿದಂತೆ ಈ ಈವೆಂಟ್ ನಡೆಯಲು ಕರೋನಾ ನಡುವೆಯೂ ನಮ್ಮೆಲ್ಲರಿಗಾಗಿ ದುಡಿಯುತ್ತಿರುವ ಕರೋನಾ ವಾರಿಯರ್ಸ್‌ಗೆ ಧನ್ಯವಾದಗಳು ಎಂದವರು ಬರೆದಿದ್ದಾರೆ.